ತುರ್ತು ನಿಧಿ ಎಂದರೆ ಯಾವುದೇ ತೊಂದರೆಯಿಲ್ಲದೆ, ಯಾವುದೇ ಸಮಯದಲ್ಲಿ ನೀವು ಹಿಂಪಡೆಯಬಹುದಾದ ಮೊತ್ತ. ಇದು ನಿಮ್ಮ ಆರ್ಥಿಕ ಸುರಕ್ಷತಾ ಜಾಲ, ವೈದ್ಯಕೀಯ, ಉದ್ಯೋಗ ಅಥವಾ ಕುಟುಂಬದ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುತ್ತೆ..
ತುರ್ತು ನಿಧಿಯಲ್ಲಿ 6 ತಿಂಗಳ ಖರ್ಚಿನಷ್ಟು ಹಣ ಇಡಿ. ಉದಾಹರಣೆಗೆ, ನಿಮ್ಮ ಮಾಸಿಕ ಖರ್ಚು ₹40,000 ಆಗಿದ್ದರೆ, ತುರ್ತು ನಿಧಿಯಲ್ಲಿ ₹2.4 ಲಕ್ಷ ಇರಿಸಿ. ಇಂದೇ ನಿಮ್ಮ ಮಾಸಿಕ ಖರ್ಚ ಲೆಕ್ಕ ಹಾಕಿ ಉಳಿತಾಯ ಪ್ರತ್ಯೇಕಿಸಿ.
ತುರ್ತು ನಿಧಿ ಉಳಿತಾಯ ಖಾತೆಯಲ್ಲಿ ಇಡುವುದರಿಂದ ವೇಗದ ಪ್ರವೇಶ ಸಂಪೂರ್ಣ ನಿಯಂತ್ರಣ ಸಿಗುತ್ತದೆ. ಯುಪಿಐ, ಎಟಿಎಂ, ನೆಟ್‌ಬ್ಯಾಂಕಿಂಗ್ ಮೂಲಕ ತಕ್ಷಣವೇ ಹಣ ತೆಗೆಯಬಹುದು. 3-4% ಬಡ್ಡಿ ನಿರಂತರವಾಗಿ ಸಿಗುತ್ತದೆ.
ಬ್ಯಾಂಕ್ ಎಫ್‌ಡಿಯಲ್ಲಿ ಸುರಕ್ಷತೆ ಮತ್ತು ಖಾತರಿಯ ಬಡ್ಡಿ ಸಿಗುತ್ತದೆ. ಅಲ್ಪಾವಧಿಯ ಎಫ್‌ಡಿ (7 ದಿನ-1 ವರ್ಷ) ಯಲ್ಲಿ ಮಾತ್ರ ಇರಿಸಿ. 5-7% ಬಡ್ಡಿ ಮತ್ತು ₹5 ಲಕ್ಷದವರೆಗೆ ಡಿಐಸಿಜಿಸಿ ವಿಮಾ ರಕ್ಷಣೆ ಸಿಗುತ್ತದೆ.
ಇದರಲ್ಲಿ ಸರಕಾರಿ ಗ್ಯಾರಂಟಿಯೊಂದಿಗೆ ನೆಮ್ಮದಿ ಸಿಗುತ್ತದೆ. ಸಂಪೂರ್ಣ ಸಾರ್ವಭೌಮ (ಸರಕಾರಿ) ಭದ್ರತೆ, ಬಡ್ಡಿ ದರ ನಿಗದಿತ ಮತ್ತು ಸ್ಥಿರವಾಗಿರುತ್ತದೆ (ಪ್ರತಿ ತ್ರೈಮಾಸಿಕದಲ್ಲಿ ಅಪ್‌ಡೇಟ್). ಡಿಜಿಟಲ್ ಪ್ರವೇಶ ಸೀಮಿತ,
ತುರ್ತು ನಿಧಿಯನ್ನು 3 ಭಾಗಗಳಾಗಿ ವಿಂಗಡಿಸಿ. 40% ಉಳಿತಾಯ ಖಾತೆಯಲ್ಲಿ, ತಕ್ಷಣ ಹಣ ತೆಗೆಯಲು; 35% ಅಲ್ಪಾವಧಿಯ ಎಫ್‌ಡಿಯಲ್ಲಿ, ಬಡ್ಡಿ-ಸುರಕ್ಷತೆ ಎರಡೂ ಇರಲು; 25% ಅಂಚೆ ಕಚೇರಿಯಲ್ಲಿ, ಇದು ಸರಕಾರಿ ಗ್ಯಾರಂಟಿ
ತುರ್ತು ನಿಧಿಯನ್ನು ಮ್ಯೂಚುವಲ್ ಫಂಡ್ ಅಥವಾ ಷೇರು ಮಾರುಕಟ್ಟೆಯಲ್ಲಿ ಹಾಕಬೇಡಿ, ಬಡ್ಡಿಯ ಆಸೆಗೆ ಹಣವನ್ನು ಲಾಕ್ ಮಾಡಬೇಡಿ ಮತ್ತು ಒಂದೇ ಬ್ಯಾಂಕಿನಲ್ಲಿ ಪೂರ್ತಿ ಹಣವನ್ನು ಇಡಬೇಡಿ. 'ಸುರಕ್ಷತೆ ಮೊದಲು' ನಿಯಮ
ಉಳಿತಾಯ ಖಾತೆಯಲ್ಲಿ 3-4% ಬಡ್ಡಿ, ತಕ್ಷಣ ಹಣ ತೆಗೆಯುವ ಸೌಲಭ್ಯವಿದೆ. ಎಫ್‌ಡಿಯಲ್ಲಿ 5-7% ವರೆಗೆ ಬಡ್ಡಿ, ಆದರೆ ಹಣ ತೆಗೆಯಲು 1-2 ದಿನಗಳು. ಅಂಚೆ ಕಚೇರಿ 4-6.5% ಬಡ್ಡಿ ಮತ್ತು ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಈ ಲೇಖನ ಕೇವಲ ಮಾಹಿತಿಗಾಗಿ. ಇಲ್ಲಿ ಹೇಳಲಾದ ವಿಷಯಗಳು ಯಾವುದೇ ರೀತಿಯ ಆರ್ಥಿಕ, ಹೂಡಿಕೆ ಸಲಹೆಯಲ್ಲ. ಯಾವುದೇ ಆರ್ಥಿಕ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಆರ್ಥಿಕ ಸಲಹೆಗಾರರೊಂದಿಗೆ ಸಮಾಲೋಚಿಸಿ.