Kannada

ಹೊಸ ತಿಂಗಳು, ಹೊಸ ನಿಯಮಗಳು

Kannada

ಅನಿಲ ಸಿಲಿಂಡರ್ ಅಗ್ಗ

ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಕಡಿತವಾಗಿದೆ. ದೆಹಲಿಯಲ್ಲಿ 19 KG ಸಿಲಿಂಡರ್‌ನ ಬೆಲೆ ₹51.50 ರಷ್ಟು ಕಡಿಮೆಯಾಗಿ ಈಗ ₹1580 ಆಗಿದೆ. 

Image credits: Getty
Kannada

ವಿಮಾನ ಟಿಕೆಟ್ ಅಗ್ಗ?

ವಿಮಾನ ಟರ್ಬೈನ್ ಇಂಧನದ (ATF) ಬೆಲೆಯಲ್ಲಿ ದೆಹಲಿಯಲ್ಲಿ ಪ್ರತಿ ಕಿಲೋಲೀಟರ್‌ಗೆ ₹1,308.41 ರಷ್ಟು ಕಡಿಮೆಯಾಗಿದೆ. ಹೊಸ ದರ ಪ್ರತಿ 1000 ಲೀಟರ್‌ಗೆ ₹90,713.52 ಮುಂದಿನ ದಿನಗಳಲ್ಲಿ ವಿಮಾನ ಟಿಕೆಟ್‌ಗಳು ಅಗ್ಗವಾಗಬಹುದು.

Image credits: Freepik
Kannada

SBI ಕ್ರೆಡಿಟ್ ಕಾರ್ಡ್ ರಿವಾರ್ಡ್‌ಗಳಲ್ಲಿ ಬದಲಾವಣೆ

ಸೆಪ್ಟೆಂಬರ್ 1 ರಿಂದ, SBI ಕಾರ್ಡ್ ಹೊಂದಿರುವವರು ಡಿಜಿಟಲ್ ಗೇಮಿಂಗ್, ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ಕೆಲವು ಆಯ್ದ ವ್ಯಾಪಾರಿಗಳಲ್ಲಿ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದಿಲ್ಲ.

Image credits: Freepik
Kannada

ಅಂಚೆ ಕಚೇರಿಯ ಹೊಸ ವ್ಯವಸ್ಥೆ

ಭಾರತೀಯ ಅಂಚೆ ಇಲಾಖೆಯು ನೋಂದಾಯಿತ ಅಂಚೆಯನ್ನು ಸ್ಪೀಡ್ ಪೋಸ್ಟ್‌ನೊಂದಿಗೆ ವಿಲೀನಗೊಳಿಸಿದೆ. ಅಂದರೆ ಈಗ ಪ್ರತ್ಯೇಕವಾಗಿ ನೋಂದಾಯಿತ ಅಂಚೆ ಸೌಲಭ್ಯ ಇರುವುದಿಲ್ಲ. ಎಲ್ಲಾ ಮೇಲ್‌ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ.

Image credits: Freepik
Kannada

ಏಕೀಕೃತ ಪಿಂಚಣಿ ಯೋಜನೆ ಆಯ್ಕೆಗೆ ಅವಕಾಶ

ಕೇಂದ್ರ ಸರ್ಕಾರಿ ನೌಕರರಿಗೆ NPS ನಿಂದ UPSಗೆ ಬದಲಾಯಿಸಲು ಸೆಪ್ಟೆಂಬರ್ 30 ರವರೆಗೆ ಸಮಯ ನೀಡಲಾಗಿದೆ. ಮೊದಲು ಇದರ ಕೊನೆಯ ದಿನಾಂಕ ಜೂನ್ ಆಗಿತ್ತು, ಆದರೆ ಕಡಿಮೆ ಪ್ರತಿಕ್ರಿಯೆಯಿಂದಾಗಿ ಗಡುವನ್ನು ವಿಸ್ತರಿಸಲಾಗಿದೆ.

Image credits: Getty
Kannada

ಬೆಳ್ಳಿ ಆಭರಣಗಳ ಮೇಲೆ ಹಾಲ್‌ಮಾರ್ಕಿಂಗ್

ಬೆಳ್ಳಿ ಆಭರಣಗಳ ಮೇಲೆ ಹಾಲ್‌ಮಾರ್ಕಿಂಗ್ ಜಾರಿಗೆ ಬಂದಿದೆ. BIS ಆರು ಶುದ್ಧತಾ ದರ್ಜೆಗಳನ್ನು (800, 835, 900, 925, 970, 990) ನಿಗದಿಪಡಿಸಿದೆ. ಪ್ರತಿ ಆಭರಣದ ಮೇಲೆ 6-ಅಂಕಿಯ HUID ಕೋಡ್ ಇರುತ್ತದೆ.

Image credits: Freepik
Kannada

ಐಟಿಆರ್ ಸಲ್ಲಿಸಲು ಕೇವಲ 15 ದಿನಗಳು

2024-25 ನೇ ಸಾಲಿನ ITR ಸಲ್ಲಿಸಲು ಕೊನೆಯ ದಿನಾಂಕ ಈಗ ಸೆ. 15, 2025 ಆಗಿದೆ. ಆದಾಯ ತೆರಿಗೆ ಪಾವತಿಸಲು ಈಗ ಕೇವಲ 15 ದಿನಗಳು ಉಳಿದಿವೆ. ಆಡಿಟ್ ಇರುವ ತೆರಿಗೆದಾರರು ಸೆಪ್ಟೆಂಬರ್ 30 ರವರೆಗೆ ರಿಟರ್ನ್ ಸಲ್ಲಿಸಬಹುದು.

Image credits: Freepik

ಸೆಪ್ಟೆಂಬರ್‌ನಲ್ಲಿ 15 ದಿನ ಬ್ಯಾಂಕ್‌ ರಜೆ: ಪಟ್ಟಿ ಇಲ್ಲಿದೆ

ಚಿನ್ನ ಖರೀದಿಗೆ ಹೊರಟಿದ್ದೀರಾ? ಇಂದು ಬೆಲೆ ಏರಿಕೆ? ಇಳಿಕೆ? ಮೊದಲು ಈ ಕೆಲಸ ಮಾಡಿ!

ಅಪ್ಪ ಮುಖೇಶ್ ಅಂಬಾನಿ ರಹಸ್ಯ ಬಿಚ್ಚಿಟ್ಟ ಮಗ ಆಕಾಶ್ ಅಂಬಾನಿ!

ಜೂನ್‌ GST ಸಂಗ್ರಹ ಶೇ.6.2 ಏರಿಕೆ; ರಾಜ್ಯದಿಂದ ಸಂಗ್ರಹವಾದ ಹಣ ಎಷ್ಟು?