BUSINESS

ಈ ಏಳು ಷೇರುಗಳ ಬೆಲೆಯಲ್ಲಿ ಪ್ರಗತಿ ಕಾಣಬಹುದು

ರಿಲಯನ್ಸ್ ಇಂಡಸ್ಟ್ರೀಸ್

ಮಂಗಳವಾರ ಕಂಪನಿಯು ಫ್ಯಾರಾಡಿಯನ್‌ನಲ್ಲಿ 100% ಪಾಲನ್ನು ಖರೀದಿಸಿದೆ ಎಂದು ವಿನಿಮಯ ಕೇಂದ್ರಕ್ಕೆ ತಿಳಿಸಿದೆ. ಅಂಗಸಂಸ್ಥೆ ರಿಲಯನ್ಸ್ ನ್ಯೂ ಎನರ್ಜಿ ಈ ಪಾಲನ್ನು ಪಡೆದುಕೊಂಡಿದೆ.

ಯೆಸ್ ಬ್ಯಾಂಕ್ ಶೇರು

ಯೆಸ್ ಬ್ಯಾಂಕ್ 635 ಕೋಟಿ ರೂಪಾಯಿಗಳ ಅಸುರಕ್ಷಿತ ಸಾಲವನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದೆ.ಎನ್‌ಪಿಎಗೆ 22.80 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ವೋಲ್ಟಾಸ್ \

ಟಾಟಾ ಗ್ರೂಪ್‌ನ ಕಂಪನಿ ವೋಲ್ಟಾಸ್ 2024 ರ ಆರ್ಥಿಕ ವರ್ಷದ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಲಾಭವು 36.7 ಕೋಟಿಯಿಂದ 134 ಕೋಟಿಗೆ ಏರಿಕೆಯಾಗಿದೆ. 

ಕಾನ್ಕಾರ್ ಶೇರು

ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಲಾಭವು 368.5 ಕೋಟಿಯಿಂದ 366.3 ಕೋಟಿಗೆ ಇಳಿಕೆಯಾಗಿದೆ. ಕಂಪನಿಯ ಆದಾಯ 2195 ಕೋಟಿಯಿಂದ 2287.7 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಹಿಟಾಚಿ ಎನರ್ಜಿ ಇಂಡಿಯಾ

ಕಂಪನಿಯ ಲಾಭವು ತ್ರೈಮಾಸಿಕ 2 ರಲ್ಲಿ 24.7 ಕೋಟಿಯಿಂದ 52.3 ಕೋಟಿಗೆ ಏರಿಕೆಯಾಗಿದೆ. ಕಂಪನಿಯ ಆದಾಯ 1228 ಕೋಟಿಯಿಂದ 1553.7 ಕೋಟಿಗೆ ಏರಿಕೆಯಾಗಿದೆ.

ಗೋದ್ರೇಜ್ ಅಗ್ರೋವೆಟ್

ಕಂಪನಿಯ ಲಾಭವು 104 ಕೋಟಿಯಿಂದ 95.8 ಕೋಟಿಗೆ ಇಳಿಕೆಯಾಗಿದೆ. ಆದಾಯ 2566.7 ಕೋಟಿಯಿಂದ 2448.8 ಕೋಟಿಗೆ ಇಳಿಕೆಯಾಗಿದೆ. EBITDA 167.3 ಕೋಟಿಯಿಂದ 223.4 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

೭. ಹನಿವೆಲ್ ಆಟೋಮೇಷನ್

2023-24ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ 2024-25ರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು 122 ಕೋಟಿಯಿಂದ 115 ಕೋಟಿಗೆ ಇಳಿಕೆಯಾಗಿದೆ. 

ಗಮನಿಸಿ

ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗಳು ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆಯನ್ನು ಪಡೆಯಿರಿ.

ಡಿಜಿಟಲ್ ಅರೆಸ್ಟ್ ಸ್ಕ್ಯಾಮ್‌ನಿಂದ ಎಸ್ಕೇಪ್ ಆಗಲು ಇಲ್ಲಿದೆ ಅಷ್ಟಸೂತ್ರ

ದೀಪಾವಳಿಗೆ ಬಜೆಟ್ ಸ್ನೇಹಿ ಚಿನ್ನದ ಉಂಗುರಗಳು, 15-20 ಸಾವಿರದಲ್ಲಿ ಲಭ್ಯ!

ಹುಟ್ಟು ಶ್ರೀಮಂತೆ ನಟಿ ಅದಿತಿ ರಾವ್ ಹೈದರಿ ಆಸ್ತಿ ಮೌಲ್ಯ ಇಷ್ಟೇನಾ?

ಪ್ರಚಾರ ನೀಡೋ ಪಿಆರ್ ಏಜೆನ್ಸಿಗಳನ್ನ ನಟಿ ಸಾಯಿ ಪಲ್ಲವಿ ದೂರ ಇಟ್ಟಿದ್ದೇಕೆ?