BUSINESS

ಮಕೇಶ್‌ಗೆ ಅವಳಿ ಮಕ್ಕಳು ಹುಟ್ಟಿದಾಗ

ಸಿರಿವಂತರ ಪಟ್ಟಿಯಲ್ಲಿ ಸದಾ ಆಗ್ರ ಸ್ಥಾನದಲ್ಲಿದ್ದರೂ, ಸಂಸಾರ, ಮಕ್ಕಳೆಂದರೆ ಯಾರಿಗೆ ತಾನೇ ಸಂಭ್ರಮ ಇರೋಲ್ಲ. ಇದರಲ್ಲಿಯೂ ಟ್ವಿನ್ಸ್ ಹುಟ್ಟಿದಾಗ ಮುಕೇಶ್ ರಿಯಾಕ್ಷನ್ ಹೇಗಿತ್ತು? 

ಇಶಾ-ಆಕಾಶ್ ಹುಟ್ಟುಹಬ್ಬ

ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷರಾದ ಶ್ರೀಮಂತ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಪುತ್ರ ಆಕಾಶ್ ಅಂಬಾನಿ ಅಕ್ಟೋಬರ್ 23 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಅಮೆರಿಕದಲ್ಲಿ ನೀತಾ, ಭಾರತದಲ್ಲಿದ್ದ ಮುಕೇಶ್

ಸಂದರ್ಶನವೊಂದರಲ್ಲಿ ನೀತಾ, ಇಶಾ ಮತ್ತು ಆಕಾಶ್ ಹುಟ್ಟಿದಾಗ ತಾವು ಅಮೆರಿಕದಲ್ಲಿದ್ದೆ ಎಂದಿದ್ದರು. ಅವರನ್ನು ಅಲ್ಲಿಯೇ ಬಿಟ್ಟು ಮುಕೇಶ್ ಅಂಬಾನಿ ಕೆಲಸದ ನಿಮಿತ್ತ ಭಾರತಕ್ಕೆ ಮರಳಿದ್ದರು.

ಅವಳಿ ಹುಟ್ಟಿದ ಸಂತಸ

ನೀತಾಗೆ ಅಲ್ಲಿಯೇ ಲೇಬರ್ ಪೇನ್ ಶುರುವಾಗಿದೆ. ಮುಕೇಶ್‌ಗೂ ಈ ಸಂಬಂಧ ಕರೆಯೂ ಬಂತು. ಮುಕೇಶ್ ತಾಯಿ ಮತ್ತು ವೈದ್ಯರೊಂದಿಗೆ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಹೊರಟರು, ದಾರಿಯಲ್ಲಿಯೇ ಸಿಹಿ ಸುದ್ದಿ ಸಿಕ್ಕಿತು.

ಸುದ್ದಿ ಹೇಳಿದ್ಯಾರು?

ಪೈಲಟ್ ಬಂದು ಅವರಿಗೆ ಮೊದಲು ಸಿಹಿ ಸುದ್ದಿ ನೀಡಿದರು. ಗಂಡು, ಹೆಣ್ಣು ಅವಳಿ ಎಂದು ತಿಳಿದಾಗ ಮುಕೇಶ್ ಖುಷಿಗೆ ಪಾರವೆಯೇ ಇರಲಿಲ್ಲ. 

ಮುಕೇಶ್ ಅಂಬಾನಿ ಅವರೇ ಇಶಾ-ಆಕಾಶ್ ಹೆಸರಿಟ್ಟರು

'ವಿಮಾನ ಪರ್ವತದ ಮೇಲೆ ಹಾದು ಹೋದಾಗ ಅವರಿಗೆ ಮಕ್ಕಳ ಜನನದ ಸಿಹಿ ಸುದ್ದಿ ಸಿಕ್ಕಿತು, ಆದ್ದರಿಂದ ಮಗಳಿಗೆ ಇಶಾ ಅಂದರೆ ಪರ್ವತಗಳ ದೇವತೆ ಮತ್ತು ಮಗನಿಗೆ ಆಕಾಶ ಎಂದು ಹೆಸರಿಟ್ಟೆ, ಎಂದಿದ್ದರು ಮುಕೇಶ್.

ಇಶಾ ಅಂಬಾನಿ ಏನು ಮಾಡುತ್ತಾರೆ?

ಇಶಾ ರಿಲಯನ್ಸ್ ರಿಟೇಲ್ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದು, ಕಂಪನಿಯಲ್ಲಿ ಕಾರ್ಯನಿರ್ವಾಹಕರಲ್ಲದ ನಿರ್ದೇಶಕರಾಗಿದ್ದಾರೆ. ವರದಿಗಳ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 800 ಕೋಟಿ.

ಆಕಾಶ್ ಅಂಬಾನಿ ವ್ಯಾಪಾರ ಏನು?

ಆಕಾಶ್ ಅಂಬಾನಿ ರಿಲಯನ್ಸ್ ಜಿಯೋ ಕೆಲಸವನ್ನು ನೋಡಿಕೊಳ್ಳುತ್ತಾರೆ. 5G, AI ತಂತ್ರಜ್ಞಾನಗಳನ್ನು ಉತ್ತೇಜಿಸುವ ಮೂಲಕ ಹಲವು ವ್ಯವಹಾರಗಳ ಮೇಲೆ ಗಮನಹರಿಸಿದ್ದಾರೆ. ಇವರ ನಿವ್ವಳ ಮೌಲ್ಯ ಸುಮಾರು 3,300 ಕೋಟಿ ರೂ.

ವಾರೀ ಎನರ್ಜೀಸ್ ಐಪಿಒ: ಹೂಡಿಕೆ ಮಾಡುವ ಮುನ್ನ ಇದನ್ನು ತಿಳಿದುಕೊಳ್ಳಿ

ಈ ಗುಣಗಳಿಂದಾನೇ ಇಶಾ ಅಂಬಾನಿ ಎಲ್ಲರಿಗೂ ಸ್ಫೂರ್ತಿ!

9.25 ಲಕ್ಷಕ್ಕೆ ಸೇಲ್ ಆದ ಈ ಥಾರ್ಪಾಕರ್ ತಳಿಯ ಹಸು: ವಿಶೇಷತೆ ಏನು ಗೊತ್ತಾ?

ಒಂದು ಲೀಟರ್ ಪೆಟ್ರೋಲಲ್ಲಿ ಬಂಕ್ ಮಾಲೀಕರಿಗೆ ಬರೋ ಲಾಭ ಎಷ್ಟು ಗೊತ್ತಾ?