BUSINESS
ಗೂಗಲ್‌ನ ಹೊಸ ಸಿಟಿಒ ಆದ ಪ್ರಭಾಕರ್ ರಾಘವನ್ ಅವರು ಭೋಪಾಲ್‌ನ ಕ್ಯಾಂಪಿಯನ್ ಶಾಲೆಯ ಹಳೆ ವಿದ್ಯಾರ್ಥಿ.
ಭೋಪಾಲದಲ್ಲಿ ಹುಟ್ಟಿ ಬೆಳೆದ ಪ್ರಭಾಕರ್ ರಾಘವನ್ ಅವರ ಯಶಸ್ಸಿನ ಬಗ್ಗೆ ಇಡೀ ಜಗತ್ತೇ ಈಗ ಚರ್ಚೆ ಮಾಡುತ್ತಿದೆ. ಏಕೆಂದರೆ ಅವರನ್ನು ಗೂಗಲ್ ತನ್ನ ಹೊಸ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಆಗಿ ನೇಮಿಸಿದೆ.
ಇದಕ್ಕೂ ಮೊದಲು ರಾಘವನ್ ಗೂಗಲ್‌ನಲ್ಲಿ ಹಿರಿಯ ಉಪಾಧ್ಯಕ್ಷರಾಗಿದ್ದರು. ಕಂಪನಿಯಿಂದ ಅವರ ವಾರ್ಷಿಕ ಪ್ಯಾಕೇಜ್ 300 ಕೋಟಿ ರೂ. ಹೊಸ ಹುದ್ದೆಯಲ್ಲಿ ಅವರಿಗೆ ಎಷ್ಟು ಸಂಬಳ ಸಿಗುತ್ತದೆ ಎಂಬುದು ಇನ್ನು ಖಚಿತವಾಗಿಲ್ಲ.
ರಾಘವನ್ 12 ವರ್ಷಗಳಿಂದ ಗೂಗಲ್‌ನಲ್ಲಿದ್ದಾರೆ. ಈ ಅವಧಿಯಲ್ಲಿ ಅವರು ಕಂಪನಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರು CEO ಸುಂದರ್ ಪಿಚೈ ಅವರ ಆತ್ಮೀಯರಲ್ಲಿ ಒಬ್ಬರು.
ರಾಘವನ್ ಅವರ ಬಾಲ್ಯ ಭೋಪಾಲದಲ್ಲಿ ಕಳೆದಿದೆ, ಇಲ್ಲಿನ ಕ್ಯಾಂಪಿಯನ್ ಶಾಲೆಯಲ್ಲಿ ಓದಿದ ನಂತರ ಅವರು IIT ಮದ್ರಾಸ್‌ನಿಂದ B.Tech ಪದವಿ ಪಡೆದರು ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಓದು ಮುಂದುವರೆಸಿದರು.
ರಾಘವನ್ ಅವರನ್ನು ಕಂಪ್ಯೂಟರ್ ವಿಜ್ಞಾನಿಯಾಗಿ ಗುರುತಿಸಲಾಗುತ್ತದೆ. ಅವರಿಗೆ ಅಲ್ಗಾರಿದಮ್‌ಗಳು, ವೆಬ್ ಹುಡುಕಾಟ ಮತ್ತು ಡೇಟಾಬೇಸ್‌ಗಳಲ್ಲಿ 20 ವರ್ಷಗಳಿಗೂ ಹೆಚ್ಚು ಸಂಶೋಧನಾ ಅನುಭವವಿದೆ.
ರಾಘವನ್ 100 ಕ್ಕೂ ಹೆಚ್ಚು ಸಂಶೋಧನಾ ಬರಹ ಪ್ರಕಟಿಸಿದ್ದಾರೆ. ಅವರ ಹೆಸರಿನಲ್ಲಿ 20 ಕ್ಕೂ ಹೆಚ್ಚು ತಂತ್ರಜ್ಞಾನ ಮತ್ತು ವೆಬ್ ಪೇಟೆಂಟ್‌ಗಳಿವೆ. ಅವರು ಸ್ಟ್ಯಾನ್‌ಫೋರ್ಡ್ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.