Associate Partner
Associate Partner
Associate Partner
ಈಗೇನಿದೆ? | ಎಲಿಮಿನೆಟೆಡ್ |
---|---|
ಅಡ್ಡ ಹೆಸರು | ಟಿಕ್ಟಾಕ್ ಸ್ಟಾರ್ |
ಹುಟ್ಟಿದಬ್ಬ | NA |
ವಯಸ್ಸು | 33 ವರ್ಷ |
ಹುಟ್ಟಿದ ಸ್ಥಳ | ಬಂಟ್ವಾಳ |
ಉದ್ಯೋಗ | ಯೂಟ್ಯೂಬರ್ |
ಹವ್ಯಾಸ | ರಂಗ ಕಲಾವಿದ, ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ |
ಯಾವುದಕ್ಕೆ ಪ್ರಸಿದ್ಧಿ? | ಹಾಸ್ಯ ವೀಡಿಯೋ |
ನಾನು ನಗಿಸುತ್ತೇನೆ.. ನಗಿಸುವುದನ್ನಲ್ಲದೇ ಬೇರೇನೂ ಮಾಡುವುದಿಲ್ಲ . Coffee ಕುಡಿಯೋ ಅಭ್ಯಾಸ ಇಲ್ಲ.. Content Copy ಮಾಡೋ ದುರಭ್ಯಾಸನೂ ಇಲ್ಲ, ನಮ್ದು ಏನೇ ಇದ್ರೂ Original Content ಎಂದೇ ಸೋಷಿಯಲ್ ಮೀಡಿಯಾದಲ್ಲಿ ಬಯೋ ಬರೆದುಕೊಂಡಿರುವ ಧನರಾಜ್ ಮನೆಮಂದಿಯನ್ನೆಲ್ಲ ಸೇರಿಸಿಕೊಂಡು ವೀಡಿಯೋ ಮಾಡುತ್ತಾರೆ. ಕಮಲಜ್ಜಿ ಜೊತೆಗೂ ವೀಡಿಯೋ ಮಾಡಿ, ಅಬ್ಬಬ್ಬ ಎಂದೇ ಖ್ಯಾತಿ. ಪತ್ನಿ ಪ್ರಜ್ಞಾ ಆಚಾರ್ ಸಹ ಸೋಷಿಯಲ್ ಮೀಡಿಯಾ ಮೂಲಕ ಫೇಮಸ್. ಕರಾವಳಿಯ ಯುವಕ, ಬಹುಮುಖ ಪ್ರತಿಭೆಯ ಧನರಾಜ್ ಸಂಸಾರ ಜೋಡುಮಾರ್ಗದ ಕಲಾವಿರಾಗಿದ್ದರು. ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ. ಹಾಸ್ಯದಷ್ಟೇ ಸಾಮಾಜಿಕ ಕಳಕಳಿಗೂ ಹೆಚ್ಚು ಒತ್ತು ನೀಡುವ ಧನರಾಜ್ ಪಂಪ್‌ವೆಲ್ ಫ್ಲೈ ಓವರ್, ಕಲ್ಲಡ್ಕ ಹೆದ್ದಾರಿ ಸೇರಿ ಅನೇಕ ಸಮಸ್ಯೆಗಳ ಬಗ್ಗೆ ವೀಡಿಯೋ ಮಾಡಿ, ಸಂಬಂಧಿಸಿದವರ ಕಣ್ಣು ತೆರೆಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಪತ್ನಿ ಪ್ರಜ್ಞಾ ಆಚಾರ್ ಸಹ ಪತಿಯೊಂದಿಗೆ ವೀಡಿಯೋ ಮಾಡಲು ಕೈ ಜೋಡಿಸುತ್ತಿದ್ದು, ಕಳೆದ ಆಗಸ್ಟ್‌ನಲ್ಲಿ ಹೆಣ್ಣು ಮಗುವಿನ ತಂದೆಯಾಗಿದ್ದಾರೆ ಧನರಾಜ್. ಮಗಳು ಹುಟ್ಟಿದ್ದರಿಂದಲೇ ಬಿಗ್ ಬಾಸ್ ಆಫರ್ ಬಂತೆಂದು ನಂಬಿದ್ದಾರೆ ಇವರ ಕುಟುಂಬದ ಸದಸ್ಯರು.