ಹಣ ಡ್ರಾ ಮಾಡಿ ಹೊರ ಬರುತ್ತಿದ್ದ ಜನರನ್ನ ಟಾರ್ಗೆಟ್ ಮಾಡಿ ಅವರನ್ನು ಲೂಟಿ ಮಾಡ್ತಿದ್ದ ಖದೀಮರನ್ನು ಬಂಧಿಸಲಾಗಿದೆ.
ಯಾದಗಿರಿ[ಜೂ. 24] ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡ್ತಿದ್ದ ಆಂಧ್ರ ಮೂಲದ ನಾಲ್ಷರು ಡಕಾಯಿತರನ್ನು ಯಾದಗಿರಿಯ ಶಹಾಪುರ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಎಸ್ಪಿ ಋಷಿಕೇಷ್ ಸೋನವಾಣೆ ಭಗವಾನ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸುರಪುರ, ಶಹಾಪುರ ಹಾಗೂ ಯಾದಗಿರಿ ಜಿಲ್ಲೆಯ ಹಲವು ಕಳ್ಳತನ ಪ್ರಕರಣದಲ್ಲಿ ಇವರು ಬೇಕಾಗಿದ್ದರು.
ಬಾಣಾಲ ಸುಭಾಷ್ (29), ಬಾಣಾಲ್ ಅವುಲ್ ಅಮೋಸ್ (35), ಅವುಲ್ ವಿಜ್ಜೋನ್ (40), ಗೂಗುಲ್ ರಾಜೇಶ್ (24) ಎಂಬುವರನ್ನು ಬಂಧಿಸಿ ಎರಡು ಬೈಕ್, ಕಳ್ಳತನಕ್ಕೆ ಬಳಿಸಿದ ಚಾಕು, ಗ್ಲಾಸ್ ಬ್ರೇಕರ್ ಗಳನ್ನು ವಶಪಡಿಸಿಕೊಂಡು 4 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆಂಧ್ರ ಪ್ರದೇಶದ ಕರ್ನೂಲು ಮೂಲದ ಕಳ್ಳರು ಒಂದು ತಿಂಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಬಾಡಿಗೆ ಮನೆ ಮಾಡಿ ವಾಸಿಸುತ್ತಿದ್ದರು. ಸುರಪುರ, ಯಾದಗಿರಿ, ಶಹಾಪುರ ತಾಲೂಕಿಲ್ಲಿ ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೋಗುವಾಗ ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದರು.
ಬುಲೆಟ್ ಕಳ್ಳರ ಹೆಡೆಮುರಿ ಕಟ್ಟಿದ ಡಿಸಿಪಿ ಅಣ್ಣಾಮಲೈ ಪಡೆ
ಗ್ಲಾಸ್ ಬ್ರೇಕರ್ ಮೂಲಕ ಕಾರಿನ ಗ್ಲಾಸ್ ಒಡೆಯುವುದು, ಮೈಮೇಲೆ ತುರಿಕ ತಪ್ಪಲ ಹಾಕಿ ಕಳ್ಳತನ ಮಾಡುವುದು ಸೇರಿದಂತೆ ಅನೇಕ ತಂತ್ರ ಬಳಕೆ ಮಾಡುತ್ತಿದ್ದರು. ಡಿವೈ ಎಸ್ಪಿ ಶಿವನಂದ ಶಹಾಪುರ ಸಿಪಿಐ ನಾಗರಾಜ್ ತಂಡ ಇದೀಗ ಆರೋಪಿಗಳ ಹೆಡೆಮುರಿ ಕಟ್ಟಿದೆ.