ಸುಳ್ವಾಡಿಯಲ್ಲಿ ಪ್ರಸಾದಕ್ಕೆ ವಿಷ ಇಟ್ರು, ಈಗ ಯಾದಗಿರಿಯಲ್ಲಿ ನೀರಿನ ಬಾವಿಗೆ ವಿಷ..!

By Web DeskFirst Published Jan 9, 2019, 9:43 PM IST
Highlights

ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ದೇವಸ್ಥಾನ ಪ್ರಸಾದ ದುರಂತದ ಕರಾಳ ನೆನಪುಗಳು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ವಿಷ ಬೆರೆಸಿರುವ ಘಟನೆ ನಡೆದಿದೆ. 

ಯಾದಗಿರಿ, [ಜ.09]: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ದೇವಸ್ಥಾನ ಪ್ರಸಾದಲ್ಲಿ ವಿಷ ಬೆರೆಸಿ ಬರೋಬ್ಬರಿ 17 ಜನರ ಜೀವ ಬಲಿಪಡೆದಿದ್ದರು. ಇದೀಗ ಕೆಲ ದುರುಳರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮೂದನೂರು ಗ್ರಾಮದ ಕುಡಿಯುವ ಬಾವಿಯಲ್ಲಿ ವಿಷ ಹಾಕಿದ್ದು, ಭಾರೀ ಅನಾಹುತ ತಪ್ಪಿದೆ.

 ಮೂದನೂರ ಗ್ರಾಮದ ಬಾವಿಯಿಂದ ಶಾಖಾಪೂರ, ತೆಗ್ಗೆಳ್ಳಿ ಇನ್ನಿತರ ಗ್ರಾಮಗಳಿಗೆ ಫಿಲ್ಟರ್ ಆಗಿ ಸರಬರಾಜಾಗುತ್ತಿದ್ದ ಕುಡಿಯುವ ನೀರಿಗೆ ಕಿಡಿಗೇಡಿಗಳು ಭತ್ತಕ್ಕೆ ಸಿಂಪಡಿಸುವ ಕೀಟನಾಶಕ ಸುರಿದಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸುಳ್ವಾಡಿ ವಿಷ ಪ್ರಕರಣ: ಪ್ರಸಾದದಲ್ಲಿತ್ತು ಮಾರಾಣಾಂತಿಕ ಕೀಟನಾಶಕ

ಗ್ರಾಮಸ್ಥರು ಮನೆಯಲ್ಲಿ ವಿಷಪೂರಿತ ನೀರು ಗಮನಿಸಿ ಗಾಬರಿಗೂಂಡು ನೀರಿನ ಬಾವಿ ಬಳಿ ಬಂದು ವಿಷ ಹಾಕಿರುವುದನ್ನು ಖಚಿತ ಪಡಿಸಿದ್ದಾರೆ.  ಬಳಿಕ ಗ್ರಾಮದಲ್ಲಿ ಡಂಗುರ ಸಾರಿ ನೀರನ್ನು ಯಾರೂ ಬಳಸಬೇಡಿ ಎಂದು ಹೇಳಿ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ. 

ಮಾರಮ್ಮ ದೇವಿ ಪ್ರಸಾದ ದುರಂತ: 7 ಮಂದಿ ಮೇಲೆ ಎಫ್‌ಐಆರ್

ವಿಷ ಹಾಕಿದ ಪಾಪಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ ಶಾಖಾಪೂರ ಗ್ರಾಮಸ್ಥರು ಮುಂಜಾಗ್ರತಾ ಕ್ರಮಕ್ಕಾಗಿ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಷಯ ತಿಳಿದು ಯಾದಗಿರಿ ಸಿಇಒ ಕವಿತಾ ಮನ್ನಿಕೇರಿ ಭೇಟಿ ನೀಡಿದ್ದು, ಬಾವಿ ನೀರನ್ನು ಖಾಲಿ ಮಾಡಿಸುತ್ತಿದ್ದಾರೆ.

click me!