ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಸಿದ್ಧಗಂಗಾ ಶ್ರೀ ಲಿಂಗೈಕ್ಯ ಸುದ್ದಿ ತಿಳಿದು ಕನ್ನಡಿಗೊಬ್ಬರು ವಿದೇಶದಿಂದಲೇ ಸಂತಾಪ ಸೂಚಿಸಿದ್ದಾರೆ.
ಯಾದಗಿರಿ, [ಜ,21]: 7 ಸಾವಿರ ಕಿಲೋಮೀಟರ್ ದೂರದ ಸ್ಪೇನ್ ದೇಶದ ಬಾರ್ಸಿಲೋನಾ ಸಿಟಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಸವರಾಜ ಸಂಕೀನ್ ಅವರು ಸಿದ್ಧಗಂಗಾ ಮಠದ ಶ್ರೀ ಶಿವುಕುಮಾರ ಸ್ವಾಮೀಜಿ ಅವರಿಗೆ ನಮನ ಸಲ್ಲಿಸಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದ ಬಸವರಾಜ ಸಂಕೀನ್ ಅವರು ಮಾಸ್ಟರ್ಸ್ ಇನ್ ಏರೋ ಸ್ಪೇಸ್ ಆ್ಯಂಡ್ ಅಡ್ವಾನ್ಸ್ಡ್ ಟೆಕ್ನಾಲಜಿ ಕೋಸ್೯ ಮುಗಿಸಿ ಬಾರ್ಸಿಲೋನಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಶ್ರೀ ಲಿಂಗೈಕ್ಯ:ಬನಶಂಕರಿ ದೇವಿ ರಥೋತ್ಸವ ಚಾಲನೆಗೂ ಮುನ್ನ ಸಿದ್ದರಾಮಯ್ಯ ಮೌನಾಚರಣೆ
ಅಮೆರಿಕಾ ಮೂಲದ ಸ್ಯಾಟ್ ಲೈಟ್ ಮತ್ತು ಡ್ರೋಣ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇವರು ಶ್ರೀಗಳ ಅಪ್ಪಟ ಭಕ್ತರಾಗಿದ್ದಾರೆ. ಭಾರವಾದ ಮನಸ್ಸಿನಿಂದಲೇ ನಮನ ಸಲ್ಲಿಸಿದ್ದಾರೆ.
ಕೈಯಲ್ಲಿ ಶ್ರೀಗಳ ಭಾವಚಿತ್ರ ಹಿಡಿದುಕೊಂಡಿರುವ ಅವರು , ಅಂತಿಮ ದರ್ಶನ ಭಾಗ್ಯ ನನಗಿಲ್ಲ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಟ್ಟಿದ್ದೀರಿ ನಿಮ್ಮ ಅಗಲಿಕೆ ದೇಶಕ್ಕೆ ಮತ್ತು ಅದರಲ್ಲಿಯೂ ಕರುನಾಡಿಗೆ ತುಂಬಲಾರದ ನಷ್ಟವಾಗಿದೆ.
ನಡೆದಾಡುವ ದೇವರ ಮಾತೇ ಮಾಣಿಕ್ಯ....
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಂತಾ ದೇವೆ ಹತ್ರ ಪ್ರಾರ್ಥನೆ ಸಲ್ಲಿಸುತ್ತೇನೆ. ಮತ್ತೆ ಹುಟ್ಟಿ ಬನ್ನಿ ಓಂ ನಮಃ ಶಿವಾಯ ಎಂದು ಬರೆದುಕೊಂಡಿದ್ದಾರೆ.
ಶ್ರೀಗಳ ಅಗಲಿಕೆ ಅವರಿಗಡ ತೀವ್ರ ಆಘಾತ ಉಂಟು ಮಾಡಿದೆ. ಸ್ವಾಮೀಜಿ ಅವರ ಲಿಂಗೈಕ್ಯ ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಗೊತ್ತಾದ ಕೂಡಲೇ ತೀವ್ರ ದುಖಃವಾಗಿದೆ.
ಕೆಲ ಹೊತ್ತಿನ ಬಳಿಕ ತಮ್ಮ ಸಿಬ್ಬಂದಿಗೆ ಸ್ವಾಮೀಜಿ ಅವರ ಜೀವನ ಚರಿತ್ರೆ ಕುರಿತು ತಿಳಿಸಿದ್ದಾರೆ. ಇದನ್ನು ಕೇಳಿದ ಸಿಬ್ಬಂದಿ ಸಹ ಶ್ರೀಗಳ ಸಾಧನೆಗೆ ತಲೆದೂಗಿದ್ದಾರೆ.