ಅಮೆರಿಕದ ಶ್ವೇತಭವನದಲ್ಲಿ ಸದ್ದು ಮಾಡಿದ ಯೋಗಿ ಮಾಡೆಲ್\ ಯೋಗಿ ಮಾಡೆಲ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫುಲ್ ಫಿದಾ| ಯಾಕೆ? ಇಲ್ಲಿದೆ ವಿವರ
ವಾಷಿಂಗ್ಟನ್(ಜೂ.27): ಅಮೆರಿಕದಲ್ಲಿ ಯೋಗಿ ಮಾಡೆಲ್ ಭಾರೀ ಸದ್ದು ಮಾಡುತ್ತಿದೆ. ಅರೆ... ಅಮೆರಿಕದಲ್ಲಿ ಯೋಗಿ ಮಾಡೆಲ್ ಯಾಕಾಗಿ? ಎಂದು ಭಾವಿಸಬಹುದು. ಆದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಯೋಗಿ ಮಾಡೆಲ್ ಭಾರೀ ಇಷ್ಟವಾಗಿದೆ ಎಂಬುವುದು ಮಾತ್ರ ಸತ್ಯ. ಉತ್ತರ ಪ್ರದೇಶದ ಯೋಗಿ ಮಾಡೆಲ್ ಲಕ್ನೋದಿಂದ 12,346 ಕಿ. ಮೀ ದೂರದಲ್ಲಿರುವ ಅಮೆರಿಕದ ವೈಟ್ ಹೌಸ್‌ನಲ್ಲಿ ಸದ್ಯ ಪ್ರತಿಧ್ವನಿಸುತ್ತಿದೆ.
ವಿದೇಶೀ ನೌಕರರಿಗೆ ಅಮೆರಿಕದ ಬಾಗಿಲು ಬಂದ್: 5,25,000 ಉದ್ಯೋಗ ಕಸಿದ ನೀತಿ!
ಕಳೆದ ವರ್ಷದ ಡಿಸೆಂಬರ್ 2019ರಲ್ಲಿ CAA ವಿರುದ್ಧ ಭಾರತದ ಮೂಲೆ ಮೂಲೆಯಲ್ಲೂ ಪ್ರತಿಭಟನೆ ಹೆಸರಲ್ಲಿ ಧಂಗೆ, ಹಿಂಸಾಚಾರ ನಡೆದಿತ್ತು. ಇದರಿಂದ ಅಪಾರ ಹಾನಿ ಸಂಭವಿಸಿತ್ತು. ಕಂಡ ಕಂಡಲೆಲ್ಲಾ ಬೆಂಕಿ ಹಾಕಿ ಗಾಡಿಗಳು, ಪೊಲೀಸ್ ಠಾಣೆ ಹಾಗೂ ಸರ್ಕಾರಿ ಆಸ್ತಿಯನ್ನು ನಾಶ ಮಾಡಲಾಗಿತ್ತು. ಆದರೆ ಇಂತಹ ಕುಕೃತ್ಯ ತಡೆಯಲು ಯೋಗಿ ಸರ್ಕಾರ ಹೊಸ ಕ್ರಮವೊಂದನ್ನು ಜಾರಿಗೊಳಿಸಿತ್ತು. ಧಂಗೆಯ್ಲಿ ತೊಡಗಿಸಿಕೊಂಡವರನ್ನು ತಡೆಯಲು ಎಲ್ಲಾ ವ್ಯವಸ್ಥೆ ಮಾಡಿದ್ದರು. ಈ ನಿಟ್ಟಿನಲ್ಲಿ 100ಕ್ಕೂ ಅಧಿಕ ಕಡೆ ಈ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಂಡ 57 ಮಂದಿಯ ಹೆಸರು, ವಿಳಾಸ ಹಾಗೂ ಅವರಿಂದ ವಸೂಲಿ ಮಾಡಲಿದ್ದ ಹಣದ ಮಾಹಿತಿಯನ್ನು ಅಂಟಿಸಿದ್ದರು.
ಅಮೆರಿಕ ಅಧ್ಯಕ್ಷ ಚುನಾವಣೆ: 73ರ ಟ್ರಂಪ್ ವರ್ಸಸ್ 77ರ ಬೈಡೆನ್!
ಆದರೀಗ ಈ ಯೋಗಿ ಮಾಡೆಲ್ ವೈಟ್ ಹೌಸ್‌ನಲ್ಲಿ ಸದ್ದು ಮಾಡುತ್ತಿದೆ. ವೈಟ್ ಹೌಸ್ ಬಳಿಯ ಲೆಫಾಯೆಟೆ ಸ್ಕ್ವೇರ್‌ನಲ್ಲಿ ಧಂಗೆ ನಡೆಸಿದ 15 ಆರೋಪಿಗಳ ಫೋಟೋ ಪೋಸ್ಟರ್‌ಗಳಲ್ಲಿ ಹಾಕಲಾಗಿದೆ. ಇವರ ವಿರುದ್ಧ ವೈಟ್ ಹೌಸ್ ಬಳಿ ಇದ್ದ ಮಾಜಿ ಅಧ್ಯಕ್ಷ ಆಂಡ್ರೂ ಜಾಕ್ಸನ್ ಪ್ರತಿಮೆಯನ್ನು ಒಡೆಲು ಹಾಕಲು ಯತ್ನಿಸಿದ ಆರೋಪವಿದೆ.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್