50 ವರ್ಷದ ನಂತರ ಮನೆಯಲ್ಲಿದ್ದ ಸೀಕ್ರೆಟ್ ರೂಮ್ ಬಾಗಿಲು ತೆಗೆದ ಮಹಿಳೆಗೆ ಆಗಿದ್ದೇನು?

By Mahmad Rafik  |  First Published May 29, 2024, 6:25 PM IST

ಮನೆಯಲ್ಲಿದ್ದ ಈ ಕೋಣೆ ಸುಮಾರು 50 ವರ್ಷಗಳಿಂದ ಬಂದ್ ಆಗಿತ್ತು. ಸಾಮಾನ್ಯ ಕೀಗಳಿಂದ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ. ನಮಗಿಂತ ಮುಂಚೆ ಯಾರೂ ಕೋಣೆಯ ಬಾಗಿಲು ತೆಗೆದಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ.


ಸುಮಾರು 50 ರಿಂದ 60 ವರ್ಷದ ಬಳಿಕ ಮನೆಯಲ್ಲಿದ್ದ ಸೀಕ್ರೆಟ್ ಕೋಣೆಯ (Secret Room) ಬಾಗಿಲು ತೆಗೆದ ಅನುಭವವನ್ನು ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ (Social Media) ಹೇಳಿಕೊಂಡಿದ್ದಾರೆ. ಸೀಕ್ರೆಟ್ ರೂಮ್ ಬಾಗಿಲು ತೆಗೆದ 10 ದಿನಕ್ಕೆ ಮಹಿಳೆಯನ್ನು ತೊರೆದು ಬೇರೆ ಕಡೆ ಶಿಫ್ಟ್ ಆಗಿದ್ದಾರೆ. ರಹಸ್ಯ ಕೋಣೆ ಬಾಗಿಲು ತೆಗೆದ ಅನುಭವ (Secret Room Door) ಯಾವ ಹಾರರ್ ಸಿನಿಮಾಗೂ (Horror Cinema) ಕಡಿಮೆ ಇರಲಿಲ್ಲ ಎಂದು ಮಹಿಳೆ ರೆಡಿಟ್‌ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಇದು ನನ್ನ ಸೋದರಿಯ ಮನೆಯಾಗಿದ್ದು, ತಿಜೋರಿಯ ಹಿಂದೆ ರಹಸ್ಯ ಕೋಣೆಯಿತ್ತು. ಆ ಕೋಣೆ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ನನ್ನ ಸೋದರಿಯ ಈ ಮನೆಯಲ್ಲಿ (New Home) ಕುಟುಂಬಸ್ಥರ (With Family) ಜೊತೆ ಇರಲು ಬಂದಿದ್ದಳು. ಮನೆಗೆ ಬಂದಾಗ ತಿಜೋರಿಯ ಹಿಂದೆ ಕೋಣೆಯಿರುವ ವಿಷಯ ಗೊತ್ತಾಗಿದೆ. ಬಾಗಿಲು ತೆಗೆದ ಮಹಿಳೆ ಕೋಣೆಯಲ್ಲಿ ನೋಡಿದ್ದೇನು ಗೊತ್ತಾ? ಅಲ್ಲಿ ಯಾವ ವಸ್ತುಗಳಿದ್ದವು ಗೊತ್ತಾ?

ಮಿರರ್ ವರದಿ ಪ್ರಕಾರ, ಮನೆಯಲ್ಲಿದ್ದ ಈ ಕೋಣೆ ಸುಮಾರು 50 ವರ್ಷಗಳಿಂದ ಬಂದ್ ಆಗಿತ್ತು. ಸಾಮಾನ್ಯ ಕೀಗಳಿಂದ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ. ನಮಗಿಂತ ಮುಂಚೆ ಯಾರೂ ಕೋಣೆಯ ಬಾಗಿಲು ತೆಗೆದಿರಲಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ. 

Tap to resize

Latest Videos

undefined

ದೆವ್ವದ ಕೋಣೆನಾ?

ನಾವು ಕೋಣೆಯೊಳಗೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಕೋಣೆಯ ವ್ಯವಸ್ಥೆ ನೋಡಿದ್ರೆ ಇದೊಂದು 70-80ರ ದಶಕದ ಮನೆಯೆಂದು ತಿಳಿಯುತ್ತಿತ್ತು. ಮೊದಲಿಗೆ ಇದೊಂದು ದೆವ್ವದ ಕೋಣೆ ಇರಬಹುದಾ ಎಂಬ ಭಯ ನಮಗೆ ಉಂಟಾಗಿತ್ತು ಎಂದು ಹೇಳಿದ್ದಾರೆ. 

ಸೀಕ್ರೆಟ್ ರೂಮ್‌ನಲ್ಲಿ ಏನಿತ್ತು?

ಈ ಕೋಣೆಯಲ್ಲಿ 70-80ರ ದಶಕದ ಅಶ್ಲೀಲ ಮ್ಯಾಗ್‌ಜೀನ್, ಮದ್ಯದ ಬಾಟೆಲ್‌ಗಳು, ಪೆಟ್ರೋಲಿಯಂ ಜೆಲಿ ಬಾಟೆಲ್, ಒಂದು ನೋಟ್‌ ಪ್ಯಾಡ್, ಟ್ಯಾಂಪೊನ್, ಕೆಲವು ಪ್ಯಾಡ್‌ಗಳು ಸೇರದಂತೆ ಲೈಂಗಿಕ ಚಟುವಟಿಕೆ ವೇಳೆ ಉಪಯೋಗಿಸುವ ವಸ್ತುಗಳು ರೂಮ್‌ನಲ್ಲಿದ್ದವು. ಇಷ್ಟು ಮಾತ್ರವಲ್ಲದೇ ಕೋಣೆಯಲ್ಲಿ ಹಾಸಿದ ಬೆಡ್‌, ಎರಡು ದಿಂಬು, ಟೂಥ್ ಬ್ರಶ್ ಸೇರಿದಂತೆ ಕೆಲವು ಸ್ವಚ್ಛತಾ ಸಾಮಾಗ್ರಿಗಳಿದ್ದವು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಮದುವೆ ದಿನ ಬಾಸ್‌ನಿಂದ ಬಂದ ಮೆಸೇಜ್ ನೋಡಿ ಯುವತಿ ಶಾಕ್; ಆ ಕ್ಷಣ ಉಸಿರು ನಿಂತಾಯ್ತು ಎಂದ ವಧು!

70-80ರ ದಶಕದಲ್ಲಿ ಈ ಕೋಣೆಯನ್ನು ಅನೈತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿರಬಹುದು ಎಂದು ಮಹಿಳೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂತಹ ಕಾರ್ಯಗಳಿಗೆ ಈ ಕೋಣೆಯನ್ನು ಮೀಸಲಾಗಿರಿಸಿರಬಹುದು. ಈ ರೀತಿ ಜೀವನ ನಾನು ತಪ್ಪೆಂದು ಹೇಳಲ್ಲ ಎಂದು ಮಹಿಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೇರ‍್ಯಾವ ದಾರಿಯೂ ಇರಲಿಲ್ಲ, ಜೀವ ಉಳಿಬೇಕಿತ್ತು, 20 ಅಡಿಯಿಂದ ಜಿಗಿದ 8 ತಿಂಗಳ ಗರ್ಭಿಣಿ; ಆಮೇಲೆ ಏನಾಯ್ತು?

ಹತ್ತನೇ ದಿನಕ್ಕೆ ಮನೆ ತೊರೆದ ಮಹಿಳೆ

ಈ ಮೊದಲು ಮನೆಯಲ್ಲಿದ್ದ ಜನರಿಗೂ ರಹಸ್ಯ ಕೋಣೆಯ ಬಗ್ಗೆ ಗೊತ್ತಿರಲಿಲ್ಲ. ಈ ಮನೆ ಮಾಲೀಕರು ನಮಗೆ ರಹಸ್ಯ ಕೋಣೆ ಬಗ್ಗೆ ಹೇಳಿರಲಿಲ್ಲ. ಸೀಕ್ರೆಟ್ ರೂಮ್ ತೆರೆದು ಅಲ್ಲಿಯ ವಸ್ತು ಮತ್ತು ವ್ಯವಸ್ಥೆಯನ್ನು ನೋಡಿದಾಗ ಒಂದು ರೀತಿಯ ಗೊಂದಲ, ಆತಂಕ ನನಗೆ ಉಂಟಾಯ್ತು. ರಹಸ್ಯ ರೂಮ್ ತೆರೆದ 10 ದಿನಕ್ಕೆ ಅಲ್ಲಿ ಇರಲಾಗದೇ ಸೋದರಿ ಮನೆಯಿಂದ ಹೊರ ಬಂದಿರೋದಾಗಿ ಮಹಿಳೆ ಹೇಳಿಕೊಂಡಿದ್ದರೆ. ಆದರೆ ಮಹಿಳೆ ತನ್ನ ಗುರುತು ಮತ್ತು ಆ ಮನೆ ಎಲ್ಲಿದೆ ಎಂಬ ವಿಷಯವನ್ನು ಹಂಚಿಕೊಂಡಿಲ್ಲ.

click me!