ಆತ್ಮಹತ್ಯೆ ಯಂತ್ರದಲ್ಲಿ ಕುಳಿತು ಮೊದಲ ಸಾವು; ಫೋಟೋ ತೆಗೆಯಲು ಹೋದವರ ಬಂಧನ

By Kannadaprabha NewsFirst Published Sep 25, 2024, 10:53 AM IST
Highlights

ಕ್ಯಾಪ್ಸೂಲ್ ಮಾದರಿಯ ಆತ್ಮಹತ್ಯೆ ಯಂತ್ರದಲ್ಲಿ ಕುಳಿತು ಮಹಿಳೆ ಸಾವನ್ನಪ್ಪಿದ್ದಾರೆ. ಇದರ ವರದಿಗಾರಿಕೆಗೆ ತೆರಳಿದ್ದವರನ್ನು ಬಂಧಿಸಲಾಗಿದೆ.

ಜಿನೆವಾ: ಜಗತ್ತಿನಲ್ಲೇ ಮೊದಲು ಎನ್ನಬಹುದಾದ ಘಟನೆಯೊಂದರಲ್ಲಿ, ಆತ್ಮಹತ್ಯೆ ಮಾಡಿಕೊಳ್ಳಲೆಂದೇ ವಿನ್ಯಾಸಗೊಳಿಸಲಾದ ಕ್ಯಾಪ್ಸೂಲ್‌ ಮಾದರಿಯ ಯಂತ್ರದಲ್ಲಿ ಕುಳಿತು ಅಮೆರಿಕದ ಮಹಿಳೆಯೊಬ್ಬರು ಸ್ವಿಜರ್‌ಲೆಂಡ್‌ನಲ್ಲಿ ಸಾವನ್ನಪ್ಪಿದ್ದಾರೆ. ಅದರ ಫೋಟೋ ತೆಗೆದು ವರದಿ ಮಾಡಲೆಂದು ತೆರಳಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ ಹಾಗೂ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಸುಲಭವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನೆರವು ನೀಡಲು ನೆದರ್‌ಲೆಂಡ್‌ನ ಕೆಲ ವ್ಯಕ್ತಿಗಳು ಸೇರಿ ‘ಸ್ಯಾಕ್ರೋ ಪಾಡ್‌’ ಎಂಬ ಯಂತ್ರ ತಯಾರಿಸಿದ್ದಾರೆ. ಇದು ಕ್ಯಾಪ್ಸೂಲ್‌ ಮಾದರಿಯಲ್ಲಿದೆ. ಸಾಯಬೇಕೆನ್ನುವ ವ್ಯಕ್ತಿಯು ಇದರೊಳಗೆ ಕುಳಿತು, ಬಾಗಿಲು ಹಾಕಿಕೊಂಡು, ಸ್ವಿಚ್‌ ಒತ್ತಬೇಕು. ಆಗ ಕ್ಯಾಪ್ಸೂಲ್‌ ಒಳಗೆ ನೈಟ್ರೋಜನ್‌ ಗ್ಯಾಸ್‌ ತುಂಬಿಕೊಂಡು, ಕೆಲವೇ ನಿಮಿಷದಲ್ಲಿ ವ್ಯಕ್ತಿ ಉಸಿರುಗಟ್ಟಿ ಸಾಯುತ್ತಾನೆ. ಯಾವುದಾದರೂ ದೇಶದಲ್ಲಿ ಕಾನೂನುಬದ್ಧವಾಗಿ ಆತ್ಮಹತ್ಯೆಗೆ ಅನುಮತಿ ನೀಡಿದ್ದರೆ ಈ ಕ್ಯಾಪ್ಸೂಲ್‌ ಬಳಸಬಹುದು ಎಂದು ನೆದರ್‌ಲೆಂಡ್‌ನ ಎಕ್ಸಿಟ್‌ ಇಂಟರ್‌ನ್ಯಾಷನಲ್‌ ಎಂಬ ‘ಶಾಂತಿಯುತ ಆತ್ಮಹತ್ಯೆಯ ಪರ ಇರುವ’ ಕೆಲ ವ್ಯಕ್ತಿಗಳ ಗುಂಪು ಹೇಳಿಕೊಂಡಿತ್ತು. ಆದರೆ ಎಲ್ಲೂ ಈ ಯಂತ್ರದ ಬಳಕೆಯಾಗಿರಲಿಲ್ಲ.

ವಿವಾದದ ಬಳಿಕ 5 ದಿನದಲ್ಲಿ ಮಾರಾಟವಾದ ತಿರುಪತಿ ಲಡ್ಡು ಸಂಖ್ಯೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

Latest Videos

ಈಗ ಆಗಿದ್ದೇನು?:

ಈಗ ಉತ್ತರ ಸ್ವಿಜರ್‌ಲೆಂಡಿನ ಅರಣ್ಯವೊಂದರ ಬಳಿ ಸೋಮವಾರ 64 ವರ್ಷದ ತೀವ್ರ ಅನಾರೋಗ್ಯಪೀಡಿತ ಅಮೆರಿಕನ್‌ ಮಹಿಳೆಯೊಬ್ಬರು ಇದರಲ್ಲಿ ಕುಳಿತು ಸ್ವ-ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ಕೆ ಯಾರೂ ಸರ್ಕಾರದ ಅನುಮತಿ ಪಡೆದಿರಲಿಲ್ಲ. ಮಹಿಳೆಗೆ ಸಾಯಲು ಈ ಯಂತ್ರದ ಜನಕರಾದ ಕೆಲವರು ನೆರವು ನೀಡಿದ್ದಾರೆ. ಸ್ವಿಜರ್‌ಲೆಂಡ್‌ನಲ್ಲಿ ಆತ್ಮಹತ್ಯೆಗೆ ಪ್ರಚೋದಿಸುವುದು ಅಪರಾಧವಾದ ಕಾರಣ ಇವರ ಮೇಲೂ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತಿದೆ.

ಸ್ಯಾಕ್ರೋ ಪಾಡ್‌ ಕ್ಯಾಪ್ಸೂಲ್‌ ಎಂಬುದು 3ಡಿ ಪ್ರಿಂಟೆಡ್‌ ಯಂತ್ರವಾಗಿದ್ದು, ಇದನ್ನು ತಯಾರಿಸಲು 1 ಮಿಲಿಯನ್‌ ಡಾಲರ್‌ (8.3 ಕೋಟಿ ರು.) ಬೇಕಾಗುತ್ತದೆ.

click me!