
ನವದೆಹಲಿ(ಡಿ.20): ಇತ್ತೀಚೆಗೆ ಅಕ್ರಮ ಸಂಬಂಧಗಳ ಸುದ್ದಿ ಭಾರೀ ಸದ್ದು ಮಾಡುತ್ತವೆ. ಹೆಂಡತಿಗೆ ಮೊಸ ಮಾಡುವ ಗಂಡ ಗೆಳತಿ ಅಥವಾ ಬೇರೊಬ್ಬ ಮಹಿಳೆ ಜೊತೆ ಸಂಬಂಧ ಇಟ್ಟುಕೊಳ್ಳುವ ವಿಚಾರಗಳು ವರದಿಯಾಗುತ್ತಲೇ ಇರುತ್ತವೆ. ಸದ್ಯ ಇಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು ಮಹಿಳೆಯೊಬ್ಬಳು ತನಗೆ ಮೋಸ ಮಾಡಿ ಗೆಳತಿಯೊಂದಿಗೆ ಕಾಲ ಕಳೆದ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ವಾಸ್ತವವಾಗಿ, ಮಹಿಳೆ ಫ್ಯಾಮಿಲಿ ಟ್ರಿಪ್ ಯೋಜಿಸಿದ್ದರು, ಆದರೆ ಅನಾರೋಗ್ಯದ ನೆಪ ಕೊಟ್ಟ ಪತಿರಾಯ ಪ್ರವಾಸಕ್ಕೆ ಹೋಗಲು ನಿರಾಕರಿಸಿದ್ದಾನೆ. ಸಾಲದೆಂಬಂತೆ ಮನೆಯಲ್ಲುಳಿದುಕೊಂಡ ಆತ ಏಕಾಂಗಿಯಾಗಿದ್ದೇನೆಂದು ಗೆಳತಿಗೆ ಕರೆ ಮಾಡಿ ಕರೆಸಿದ್ದಾನೆ.
ಆದರೆ ಬಡಪಾಯಿ ಗಂಡ ಹೆಂಡತಿ ಕೈಯಿಂದ ಪಾರಾಗಲು ಸಾಧ್ಯವಾಗಿಲ್ಲ. ಹೌದು ಕೆಲ ದಿನಗಳ ನಂತರ ಮನೆಗೆ ವಾಪಸ್ ಬಂದ ಪತ್ನಿ ಮನೆಯ ಸಿಸಿಟಿವಿ ಪರಿಶೀಲಿಸಿದ್ದಾಳೆ. ಸಿಸಿಟಿವಿಯಲ್ಲಿದ್ದ ದೃಶ್ಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಂಡ ಮನೆಯಲ್ಲಿದ್ದುಕೊಂಡು ಮಾಡಿದ ಕರಾಮತ್ತೆಲ್ಲ ಅನಾವರಣಗೊಮಡಿದೆ.
'ಡೈಲಿ ಸ್ಟಾರ್' ವರದಿಯ ಪ್ರಕಾರ, ಹೆಂಡತಿಯು ಇತ್ತೀಚೆಗೆ ಟಿಕ್‌ಟಾಕ್‌ನಲ್ಲಿ ತನ್ನ ಗಂಡನ ಮೋಸದಾಟದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ, ಆಕೆಯ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಕಾಣಿಸಿಕೊಂಡಿದ್ದಾನೆ (Woman Caught Husband With Girlfriend). ವೀಡಿಯೋದಲ್ಲಿ, ಪತಿ ಮನೆಯ ಬಾಗಿಲಿನ ಮುಂದೆ ನಿಂತಿದ್ದಾನೆ, ಹೀಗಿರುವಾಗ ಅತೀ ಕಡಿಮೆ ಬಟ್ಟೆ ಧರಿಸಿದ್ದ ಮಹಿಳೆಯೊಬ್ಬಳು ಹಿಂದಿನ ಕೊಠಡಿಯಿಂದ ಹೊರಬರುತ್ತಾಳೆ.
ಬಾಗಿಲ ಬಳಿ ಹಾಕಿದ್ದ ಕ್ಯಾಮರಾದಲ್ಲಿ ಕೃತ್ಯ ಸೆರೆ
ಇಬ್ಬರೂ ಬಾಗಿಲ ಬಳಿ ಸ್ವಲ್ಪ ಸಮಯ ಪರಸ್ಪರ ಮುತ್ತು ಕೊಟ್ಟು, ತಬ್ಬಿಕೊಂಡು ನಂತರ ವಿದಾಯ ಹೇಳಿ ಅಲ್ಲಿಂದ ಹೊರಡುತ್ತಾರೆ. ಗಂಡನ ಈ ಎಲ್ಲಾ ಕೃತ್ಯಗಳು ಬಾಗಿಲಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ದಾಖಲಾಗಿವೆ. ಪ್ರವಾಸದಿಂದ ಹಿಂದಿರುಗಿದ ಹೆಂಡತಿ ಇದೆಲ್ಲವನ್ನೂ ನೋಡಿದ್ದಾಳೆ. ಮನೆಯಲ್ಲಿ ಅನಾರೋಗ್ಯದ ಕಾರಣ ಕೊಟ್ಟು ಉಳಿದ ಗಂಡನ ಆಟವೆಲ್ಲಾ ಸಾಕ್ಷಿ ಸಮೇತ ಅನಾವರಣಗೊಂಡಿದೆ.
ಕ್ಯಾಮರಾ ಅಳವಡಿಸಿದ ಅದೇ ಬಾಗಿಲಿನ ಮುಂದೆಯೇ ನಿಂತು ಪತಿ ಮುತ್ತು ಕೊಡುತ್ತಿರುವುದಾಗಿ ವಿಡಿಯೋದಲ್ಲಿ ಪತ್ನಿ ಹೇಳಿದ್ದಾಳೆ. ಅಚ್ಚರಿ ಎಂದರೆ ಪತ್ನಿಯೇ ಕ್ಯಾಮೆರಾ ಅಳವಡಿಸಿದ್ದರು. ಈ ವಿಡಿಯೋದಲ್ಲಿ ತಾನು ಇನ್ನು ಮುಂದೆ ತನ್ನ ಪತಿಯೊಂದಿಗೆ ವಾಸಿಸುವುದಿಲ್ಲ ಎಂದೂ ಮಹಿಳೆ ಹೇಳಿದ್ದಾರೆ. ಮಹಿಳೆಯ ಈ ಟಿಕ್‌ಟಾಕ್ ವೀಡಿಯೊಗೆ ಕಾಮೆಂಟ್ ಮಾಡುವ ಮೂಲಕ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ