ಇರಾನ್‌ ಮೇಲೇಕೆ ಎಲ್ಲರ ಕಣ್ಣು? ಇರಾನ್‌ ವಶ ಅಮೆರಿಕದ ಪಾಲಿಗೂ ಕಷ್ಟ ಕಷ್ಟ

Kannadaprabha News   | Kannada Prabha
Published : Mar 02, 2026, 07:04 AM IST
iran israel attack

ಸಾರಾಂಶ

ಇರಾನ್‌ ಇರುವುದು ಏಷ್ಯಾ, ಯುರೋಪ್‌ ಮತ್ತು ಮಧ್ಯಪ್ರಾಚ್ಯದ ನಡುವಲ್ಲಿ. ಆದ್ದರಿಂದ, ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದರೆ, ಸಹಜವಾಗಿ ಜಾಗತಿಕ ವ್ಯಾಪಾರ ಮಾರ್ಗದ ನಿಯಂತ್ರಣ ಹಾಗೂ ವ್ಯೂಹಾತ್ಮಕ ಲಾಭಗಳನ್ನು ಪಡೆಯಬಹುದು.

ಟೆಹ್ರಾನ್‌: ಇರಾನ್‌ ಇರುವುದು ಏಷ್ಯಾ, ಯುರೋಪ್‌ ಮತ್ತು ಮಧ್ಯಪ್ರಾಚ್ಯದ ನಡುವಲ್ಲಿ. ಆದ್ದರಿಂದ, ಈ ಪ್ರದೇಶದ ಮೇಲೆ ಹಿಡಿತ ಸಾಧಿಸಿದರೆ, ಸಹಜವಾಗಿ ಜಾಗತಿಕ ವ್ಯಾಪಾರ ಮಾರ್ಗದ ನಿಯಂತ್ರಣ ಹಾಗೂ ವ್ಯೂಹಾತ್ಮಕ ಲಾಭಗಳನ್ನು ಪಡೆಯಬಹುದು.

ಇದೇ ಕಾರಣಕ್ಕೆ, ಕಳೆದ 500 ವರ್ಷಗಳಲ್ಲಿ ಹಲವು ರಾಷ್ಟ್ರಗಳು ಮತ್ತು ಮನೆತನಗಳು ಇರಾನ್‌ಅನ್ನು ವಶಪಡಿಸಿಕೊಳ್ಳಯವ ವಿಫಲಯತ್ನ ಮಾಡಿವೆ. ಜತೆಗೆ, ಇಲ್ಲಿರುವ ಬೃಹತ್‌ ತೈಲ ಮತ್ತು ಅನಿಲ ನಿಕ್ಷೇಪಗಳು ಬ್ರಿಟನ್‌ ಮತ್ತು ಯುರೋಪ್‌ನ ಕಣ್ಣು ಕುಕ್ಕುತ್ತಿವೆ.

ಇಷ್ಟು ಕಣ್ಣುಗಳು ತಮ್ಮ ಮೇಲಿದ್ದರೂ ಇರಾನ್‌ ಇನ್ನೂ ಸ್ವತಂತ್ರವಾಗಿಯೇ ಇದೆ. ಕಾರಣ, ಜನ ಆಡಳಿತದಲ್ಲಿ ಬದಲಾವಣೆ ಬಯಸಿದರೂ, ವಿದೇಶಗಳ ಕೈಗೊಂಬೆಯಾಗುವುದನ್ನು ಒಪ್ಪುವುದಿಲ್ಲ.

ಆಯಕಟ್ಟಿನ ಪ್ರದೇಶವೇ ಇರಾನ್‌ಗೆ ಅತಿದೊಡ್ಡ ಶಕ್ತಿ ।

ಟೆಹ್ರಾನ್‌: ತೈಲಭರಿತ ದೇಶವಾಗಿರುವ ಇರಾನ್‌ ಶತಮಾನಗಳಿಂದ ಆಕ್ರಮಣಗಳನ್ನು ಎದುರಿಸಿದ್ದರೂ ಇಲ್ಲಿಯವರೆಗೆ ಅನ್ಯ ರಾಷ್ಟ್ರಗಳ ವಶವಾಗಿಲ್ಲ. ಕಾರಣ, ಅದರ ಗಾತ್ರ ಹಾಗೂ ಅಲ್ಲಿನ ಭೂರಚನೆ. ಗಾತ್ರದಲ್ಲಿ 17ನೇ ಬೃಹತ್‌ ದೇಶವಾಗಿರುವ ಇರಾನ್‌, ಭಾರತದ ಅರ್ಧದಷ್ಟಿದೆ. ಜತೆಗೆ, ಪೂರ್ವ, ಪಶ್ಚಿಮ, ಉತ್ತರದಲ್ಲಿ ಪರ್ವತಶಿಖರಗಳಿಂದ ಆವೃತವಾಗಿದ್ದು, ಒಳಗೂ 2 ದೊಡ್ಡ ಪರ್ವತಗಳಿವೆ. ಇವನ್ನು ದಾಟುವುದು ಕಷ್ಟ. ದಕ್ಷಿಣಕ್ಕಿರುವುದು ಕರಾವಳಿ. ಆದ್ದರಿಂದ ಭೂಮಾರ್ಗದ ಮೂಲದ ದಾಳಿ ಅಸಾಧ್ಯ.

ಇರಾನ್‌ ಮೇಲೆ ದಾಳಿ ಯಶಸ್ವಿಯಾಗಿರಲಿಲ್ಲ

ಆದಕಾರಣವೇ ಇಲ್ಲಿಯವರೆಗೆ ಇರಾನ್‌ ಮೇಲೆ ದಾಳಿ ನಡೆಸಿದ ರೋಮನ್ನರು, ಅರಬ್ಬರು, ಮಂಗೋಲಿಯನ್ನರು, ತುರ್ಕರು, ರಷ್ಯನ್ನರು ಮತ್ತು ಅಮೆರಿಕನ್ನರು ಇರಾನ್‌ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಇದೀಗ ಅಮೆರಿಕ ಮತ್ತು ಇಸ್ರೇಲ್‌ ಕೂಡ ದಾಳಿಗೆ ವಾಯು ಮತ್ತು ಜಲಮಾರ್ಗದ ಮೊರೆ ಹೋಗಿರುವುದು ಇದೇ ಕಾರಣಕ್ಕೆ.

ಒಂದೊಮ್ಮೆ ಯುದ್ಧದ ಕಾರಣ ವಿಶ್ವದ ಜತೆಗಿನ ಸಂಪರ್ಕ ಸಂಪೂರ್ಣವಾಗಿ ಕಡಿದುಹೋದರೂ, ಮುಂದಿನ 200 ವರ್ಷಗಳಿಗೆ ಸಾಲುವಷ್ಟು ತೈಲದ ಸಂಗ್ರಹ ಇರಾನ್‌ನ ಬಳಿ ಇದೆ. ಜತೆಗೆ, ಆಕ್ರಮಣಕ್ಕೆ ಯತ್ನಿಸುವವರ ಮೇಲೆ ಸುರಿಯಲು ಅನೇಕ ಮಿಸೈಲ್‌ಗಳೂ ಅವರಲ್ಲಿವೆ. ಅಗತ್ಯಬಿದ್ದರೆ ಕೂಡಲೇ ಅಣ್ವಸ್ತ್ರ ತಯಾರಿಸುವ ಸಾಮರ್ಥ್ಯವನ್ನೂ ಗಳಿಸಿಕೊಂಡಿರುವುದಾಗಿ ಇರಾನ್‌ ಹೇಳುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India News Live: ಇರಾನ್‌ ಪ್ರತೀಕಾರ ಶುರು! ಮಧ್ಯಪ್ರಾಚ್ಯದ ಎಲ್ಲೆಡೆ ಭಾರಿ ವಾಯುದಾಳಿ
ಖಮೇನಿ ಹತ್ಯೆ ಖಂಡಿಸಿ ರಾಜ್ಯ, ದೇಶಾದ್ಯಂತ ಶಿಯಾಗಳ ಪ್ರತಿಭಟನೆ