ಗೊಟಬಯ ಬಳಿಕ ಶ್ರೀಲಂಕಾ ನೂತನ ಅಧ್ಯಕ್ಷ ಯಾರು? ರೇಸ್‌ನಲ್ಲಿ ಮೂವರ ಹೆಸರು!

By Suvarna NewsFirst Published Jul 15, 2022, 11:50 AM IST
Highlights

ತೀವ್ರ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಹೀಗಿರುವಾಗ ಇ;ಲ್ಲಿನ ಮುಂದಿನ ಅಧ್ಯಕ್ಷ ಯಾರೆಂಬ ಚರ್ಚೆ ಭಾರೀ ಸದ್ದು ಮಾಡುತ್ತಿದೆ. ಸದ್ಯ ಈ ರೇಸ್‌ನಲ್ಲಿ ಮೂವರು ಗಣ್ಯರ ಹೆಸರು ಮುಂಚೂಣಿಯಲ್ಲಿದೆ. 

ಕೊಲಂಬೋ(ಜು.15): ನಮ್ಮ ನೆರೆಯ ದೇಶ ಶ್ರೀಲಂಕಾ ತನ್ನ ಸ್ವಾತಂತ್ರ್ಯದ ನಂತರ ಅಂದರೆ 1948 ರಿಂದ ಅತ್ಯಂತ ಕೆಟ್ಟ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಗೊಟಬಯ ರಾಜಪಕ್ಸೆ ತನ್ನ ಕುಟುಂಬದೊಂದಿಗೆ ದೇಶವಾಸಿಗಳನ್ನು ಅರ್ಧ ದಾರಿಯಲ್ಲಿ ಕೈ ಬಿಟ್ಟು ಓಡಿಹೋದರು. ಸಿಂಗಾಪುರ ತಲುಪಿದ ಕೂಡಲೇ ರಾಜೀನಾಮೆಯನ್ನೂ ಕಳುಹಿಸಿದ್ದರು. ಇದರ ಬೆನ್ನಲ್ಲೇ ಅಧ್ಯಕ್ಷೀಯ ಚುನಾವಣೆಯ ಚರ್ಚೆ ಶುರುವಾಗಿದೆ. ಶ್ರೀಲಂಕಾದ ಉನ್ನತ ಹುದ್ದೆಯ ರೇಸ್ ನಲ್ಲಿ ಆರನೇ ಬಾರಿಗೆ ಪ್ರಧಾನಿಯಾದ ನಾಯಕ, ಪತ್ರಿಕೋದ್ಯಮದಿಂದ ರಾಜಕೀಯಕ್ಕೆ ಬಂದ ಪ್ರತಿಪಕ್ಷದ ಪ್ರಮುಖ ನಾಯಕ ಹಾಗೂ ಆಡಳಿತ ಪಕ್ಷದ ನಾಯಕರೇ ಮುಂಚೂಣಿಯಲ್ಲಿದ್ದಾರೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಶ್ರೀಲಂಕಾದ ಸಂಸದೀಯ ಸ್ಪೀಕರ್ ರಾಜಪಕ್ಸೆ ಅವರ ಅಧಿಕೃತ ರಾಜೀನಾಮೆಯನ್ನು ಸ್ವೀಕರಿಸಿದ ನಂತರ ಶಾಸಕಾಂಗ ಮಂಡಳಿಯು ಸಭೆ ಸೇರಲಿದೆ. ಅದರ 225 ಸದಸ್ಯರು ಮುಂದಿನ ವಾರ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಾರೆ. ಗೆಲ್ಲುವ ಅಭ್ಯರ್ಥಿಯು ಸಂಸತ್ತಿನಲ್ಲಿ ಸರಳ ಬಹುಮತವನ್ನು ಪಡೆಯಬೇಕು. ಅದೇ ಸಮಯದಲ್ಲಿ, ಪ್ರತಿಭಟನಾ ಚಳವಳಿಯಲ್ಲಿ ಭಾಗವಹಿಸಿದ ಶ್ರೀಲಂಕಾದ ಲಕ್ಷಾಂತರ ಮಂದಿಯ ವಿಶ್ವಾಸವನ್ನು ಗೆಲ್ಲಬೇಕಾಗಿದೆ.

ರೇಸ್‌ನಲ್ಲಿ ರಾನಿಲ್ ವಿಕ್ರಮಸಿಂಘೆ ಮುನ್ನಡೆ

ರಾಯಿಟರ್ಸ್ ವರದಿಯ ಪ್ರಕಾರ, ಎರಡು ರಾಜಕೀಯ ಮೂಲಗಳು ರಾನಿಲ್ ವಿಕ್ರಮಸಿಂಘೆ ಅವರು ಉನ್ನತ ಹುದ್ದೆಗೆ ನಂಬರ್ ಒನ್ ಅಭ್ಯರ್ಥಿ ಎಂದು ಹೇಳಿವೆ. ಅವರು ಮೇ ತಿಂಗಳಲ್ಲಿ ಆರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಈ ಹಿಂದೆ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ರಾಜೀನಾಮೆ ನೀಡಿದ್ದರು. ಪ್ರಸ್ತುತ ಅವರು ಹಂಗಾಮಿ ಅಧ್ಯಕ್ಷರಾಗಿದ್ದಾರೆ.

ವಿಕ್ರಮಸಿಂಘೆಯವರ ಪಕ್ಷವು ಸಂಸತ್ತಿನಲ್ಲಿ ಕೇವಲ ಒಂದು ಸ್ಥಾನವನ್ನು ಹೊಂದಿದ್ದರೂ, ಅಧ್ಯಕ್ಷರ ಸಹೋದರ ಬಸಿಲ್ ರಾಜಪಕ್ಸೆ ಸೇರಿದಂತೆ ಶ್ರೀಲಂಕಾದ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ (SLPP) ಯ ಕೆಲವು ವಿಭಾಗಗಳು; ಅವರನ್ನು ಬೆಂಬಲಿಸಲಿವೆ.

ಸಜಿತ್ ಪ್ರೇಮದಾಸ ಕೂಡ ಸ್ಪರ್ಧಿ

ಇಲ್ಲಿ ಪ್ರಮುಖ ವಿರೋಧ ಪಕ್ಷದ ಸಮಗಿ ಜನ ಬಲವೇಗಯ (ಎಸ್‌ಜೆಬಿ) ಪಕ್ಷದ ನಾಯಕ ಸಜಿತ್ ಪ್ರೇಮದಾಸ (55) ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬ ಆಕಾಂಕ್ಷಿಯಾಗಿದ್ದಾರೆ. ಸಂಸತ್ತಿನಲ್ಲಿ ಕೇವಲ 50 ಸಂಸದರನ್ನು ಹೊಂದಿರುವ ಅವರು ಗೆಲ್ಲಲು ಪಕ್ಷದ ಬೆಂಬಲವನ್ನು ಬೆಳೆಸಿಕೊಳ್ಳಬೇಕು. ಪ್ರೇಮದಾಸ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದಿದ್ದಾರೆ. 1993 ರಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಅಧ್ಯಕ್ಷ ರಣಸಿಂಗ್ ಪ್ರೇಮದಾಸ ಹತ್ಯೆಯಾದ ನಂತರ ಅವರ ತಂದೆ ರಾಜಕೀಯ ಪ್ರವೇಶಿಸಿದರು.

ಒಂದು ವರ್ಗದ ನಡುವೆ ಬೆಂಬಲ ಗಳಿಸಲು ಯಶಸ್ವಿ

ಅಧ್ಯಕ್ಷೀಯ ಸ್ಪರ್ಧಿಗಳಲ್ಲಿ ಮೂರನೆಯವರು ತಮ್ಮ ಪಕ್ಷದ ಸಹೋದ್ಯೋಗಿಗಳ ನಡುವೆ ಬೆಂಬಲವನ್ನು ಗಳಿಸಿದ ಹಿರಿಯ SLPP ಶಾಸಕ ದುಲಾಸ್ ಅಲ್ಹಪ್ಪರುಮಾ. ಅಲ್ಹಪ್ಪರುಮಾ ಎಸ್‌ಎಲ್‌ಪಿಪಿಯ ಹಿರಿಯ ಶಾಸಕ. ಅವರು ತಮ್ಮ ಪಕ್ಷದ ಸಹೋದ್ಯೋಗಿಗಳ ನಡುವೆ ಸಾಕಷ್ಟು ಗಮನ ಸೆಳೆದಿದ್ದಾರೆ. ಎಸ್‌ಎಲ್‌ಪಿಪಿ ಸಂಸದ ಚರಿತಾ ಹೆರಾತ್‌ ಮಾತನಾಡಿ, ಆಡಳಿತ ಪಕ್ಷವು ಸುಮಾರು 117 ಮತಗಳನ್ನು ಹೊಂದಿದ್ದು, 63ರ ಹರೆಯದ ಮಾಜಿ ಪತ್ರಕರ್ತರಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಲು ಬಳಸಿಕೊಳ್ಳಬಹುದು.

ರಾಜಪಕ್ಸೆ ಅವರ ರಾಜೀನಾಮೆ ಸ್ವೀಕರಿಸಿದ ಸ್ಪೀಕರ್

ಏತನ್ಮಧ್ಯೆ, ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಭಯವರ್ಧನೆ ಅವರು ರಾಜಪಕ್ಸೆ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ. ಶ್ರೀಲಂಕಾದಲ್ಲಿರುವ ಸಿಂಗಾಪುರ್ ರಾಯಭಾರ ಕಚೇರಿಯ ಮೂಲಕ ಈ ರಾಜೀನಾಮೆಯನ್ನು ಸ್ವೀಕರಿಸಲಾಗಿದೆ. ಅವರು ತಮ್ಮ ರಾಜೀನಾಮೆಯನ್ನು ಸ್ಪೀಕರ್‌ಗೆ ಇ-ಮೇಲ್ ಮಾಡಿದ್ದಾರೆ ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ.

click me!