
ಬರ್ಲಿನ್ (ಅ.26): ವಿಶ್ವದಾದ್ಯಂತ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ದೇಶಗಳು ಸೂಕ್ತ ಔಷಧ ಕಂಡು ಹಿಡಿಯುವಲ್ಲಿ ನಿರತವಾಗಿವೇ.
ಕೊರೋನಾ ವ್ಯಾಕ್ಸಿನ್ ಕಂಡು ಹಿಡಿಯುವಲ್ಲಿ ಜಾಗತಿಕವಾಗಿ ಎಲ್ಲಾ ದೇಶಗಳು ಒಂದಾಗಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಾದ ಅದಾನೊಮ್ ಗೆಬ್ರಿಯೇಸಸ್ ಹೇಳಿದರು.
ಸಾಂಕ್ರಾಮಿಕ ಪಿಡುಗು ಆಗಿರುವ ಕೊರೋನಾ ವೈರಸ್‌ನ್ನು ನಿವಾರಿಸಲು ಸೂಕ್ತ ಔಷಧ ಕಂಡು ಹಿಡಿದು ಬಡ ದೇಶಗಳು ಇವುಗಳನ್ನು ಸಮರ್ಥವಾಗಿ ಪಡೆಯುವಂತಾಗಬೇಕು ಎಂದರು.
ಕರ್ನಾಟಕದಲ್ಲಿ 8 ತಿಂಗಳಲ್ಲಿ 8 ಲಕ್ಷ ಕೊರೋನಾ ಕೇಸ್..! ...
ಕೊರೋನಾಗೆ ಸೂಕ್ತ ಔಷಧ ಸಿಕ್ಕ ಮೇಲೆ ದೇಶಗಳು ಅವರವರ ನಾಗರಿಕರನ್ನು ಕಾಪಾಡುವ ಜವಾಬ್ದಾರಿಯನ್ನು ಮೊದಲು ಹೊಂದಿರಬೇಕು ಎಂದು ಗೆಬ್ರಿಯೇಸಸ್ ಹೇಳಿದರು.
ಕೆಲ ದಿನಗಳ ಎಲ್ಲರೂ ಔಷಧಿ ಪಡೆಯುವುದಕ್ಕಿಂತ ಎಲ್ಲಾ ದೇಶಗಳ ಕೆಲವರು ಔಷಧ ಪಡೆಯುವುದು ಸೂಕ್ತ ಎಂದರು.
ಈಗಾಗಲೇ ವಿಶ್ವದಲ್ಲಿ 1.1 ಮಿಲಿಯನ್ ಜನರನ್ನು ಬಲಿ ಪಡೆದ್ ಕೊರೋನಾ ಮಹಾಮಾರಿಗೆ ವ್ಯಾಕ್ಸಿನ್ ಕಂಡು ಹಿಡಿಯುವಲ್ಲಿ ಇಡೀ ವಿಶ್ವದ ವಿಜ್ಞಾನಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ 10 ಸಾವಿರ ವಾಲೆಂಟಿಯರ್ಸ್ ಪರೀಕ್ಷೆಗೆ ಒಳಗಾಗಿದ್ದಾರೆ ಎಂದರು.
ಈಗಾಗಲೇ ಹಲವು ದೇಶಗಳು ಅತ್ಯಂತ ಸೂಕ್ತ ಔಷಧವನ್ನು ಈಗಾಗಲೇ ಕಂಡುಕೊಂಡಿವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ