ನಾನು ಸತ್ತರೆ ಏನ್ಮಾಡ್ಬೇಕು : ಆಪ್ತರಿಗೆ ಖಮೇನಿ ಸಲಹೆ!

Kannadaprabha News   | Kannada Prabha
Published : Feb 23, 2026, 04:22 AM IST
 Khamenei

ಸಾರಾಂಶ

ಇಸ್ರೇಲ್‌ ಜತೆ ಸೇರಿಕೊಂಡು ಅಮೆರಿಕ ಇರಾನ್‌ ಮೇಲೆ ದಾಳಿ ಮಾಡಬಹುದು ಇಲ್ಲವೇ ಅಲ್ಲಿನ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಬಹುದು ಎಂಬ ವರದಿಗಳ ನಡುವೆಯೇ, ಒಂದೊಮ್ಮೆ ತಾವು ಇಲ್ಲವಾದರೆ ಏನು ಮಾಡಬೇಕು ಎಂದು ಖಮೇನಿ ತಮ್ಮ ಆಪ್ತರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಟೆಹ್ರಾನ್‌: ಇಸ್ರೇಲ್‌ ಜತೆ ಸೇರಿಕೊಂಡು ಅಮೆರಿಕ ಇರಾನ್‌ ಮೇಲೆ ದಾಳಿ ಮಾಡಬಹುದು ಇಲ್ಲವೇ ಅಲ್ಲಿನ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಬಹುದು ಎಂಬ ವರದಿಗಳ ನಡುವೆಯೇ, ಒಂದೊಮ್ಮೆ ತಾವು ಇಲ್ಲವಾದರೆ ಏನು ಮಾಡಬೇಕು ಎಂದು ಖಮೇನಿ ತಮ್ಮ ಆಪ್ತರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.

ಜೀವಕ್ಕೆ ಕುತ್ತು ಇರುವುದನ್ನು ಕಂಡುಕೊಂಡಿರುವ ಖಮೇನಿ,

ಜೀವಕ್ಕೆ ಕುತ್ತು ಇರುವುದನ್ನು ಕಂಡುಕೊಂಡಿರುವ ಖಮೇನಿ, ತಮಗೆ ಆಪ್ತನೂ ಆಗಿರುವ ರೆವಲ್ಯೂಷ್ನರಿ ಗಾರ್ಡ್ಸ್‌ನ ಮಾಜಿ ಕಮಾಂಡರ್ ಮತ್ತು ರಾಜಕಾರಣಿ ಅಲಿ ಲಾರಿಜಾನಿಯನ್ನು ಆಡಳಿತ ನೋಡಿಕೊಳ್ಳಲು ನೇಮಿಸಲು ಸೂಚಿಸಿದ್ದಾರೆ. ಇದಕ್ಕೆ ಪುಷ್ಟಿ ಕೊಡುವಂತೆ, ಖಮೇನಿ ವಿರುದ್ಧ ಇರಾನ್‌ನಲ್ಲಿ ನಡೆದ ಪ್ರತಿಭಟನೆಯನ್ನು ಹತ್ತಿಕ್ಕುವುದು, ಅಮೆರಿಕ ಜತೆ ಅಣ್ವಸ್ತ್ರ ಸಂಬಂಧಿ ಮಾತುಕತೆ ನಡೆಸುವುದು, ರಷ್ಯಾ, ಕತಾರ್ ಮತ್ತು ಒಮಾನ್ ಸೇರಿದಂತೆ ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುವಲ್ಲಿ ಲಾರಿಜಾನಿ ಮಹತ್ವದ ಪಾತ್ರ ವಹಿಸಿದ್ದ.

ಸರ್ವೋಚ್ಚ ನಾಯಕನಾಗಿ ನೇಮಿಸಲಾಗುವುದಿಲ್ಲ

ಆದರೆ ಶಿಯಾ ಪಂಗಡಕ್ಕೆ ಸೇರಿದವರಲ್ಲದ ಕಾರಣ ಲಾರಿಜಾನಿಯನ್ನು ಸರ್ವೋಚ್ಚ ನಾಯಕನಾಗಿ ನೇಮಿಸಲಾಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್ ತೊರೆಯುವಂತೆ ತಮ್ಮ ನಾಗರಿಕರಿಗೆ ಸೂಚಿಸಿದ ಸ್ವೀಡನ್, ಸೆರ್ಬಿಯಾ
ಪ್ರೀತಿಯ ಮಾಯಾಜಾಲಕ್ಕೆ ಬಿದ್ದು ಸ್ವರ್ಗದಿಂದ ನರಕಕ್ಕೆ ಜಾರಿದ ಅಮೆರಿಕನ್ ಬಾಲೆ: ಪಾಕಿಸ್ತಾನಿ ಯುವಕನ ಮದ್ವೆಯಾದ ಯುವತಿ ಹೇಳಿದ್ದೇನು?