ಶ್ರೀಲಂಕಾದಲ್ಲಿ ಮುಂದೇನು? ಗೊಟಬಯ ರಾಜೀನಾಮೆ ಬಳಿಕ ಮುಂದಿನ ಅಧ್ಯಕ್ಷರ ಆಯ್ಕೆ ಹೇಗೆ ನಡೆಯುತ್ತೆ?

By Suvarna NewsFirst Published Jul 10, 2022, 9:50 AM IST
Highlights

* ಶ್ರೀಲಂಕಾದಲ್ಲಿ ಜನತಾ ದಂಗೆ!

* ಅಧ್ಯಕ್ಷರ ಬಂಗಲೆಗೆ ಸಹಸ್ರಾರು ಪ್ರತಿಭಟನಾಕಾರರ ಲಗ್ಗೆ

* ಪ್ರಧಾನಿ ನಿವಾಸಕ್ಕೆ ಬೆಂಕಿ

* ರಾತ್ರೋರಾತ್ರಿ ಅಧ್ಯಕ್ಷ ಗೊಟಬಯ ಎಸ್ಕೇಪ್‌

ಕೊಲಂಬೋ(ಜು.10): ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಜನರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ತಮ್ಮ ಕುಟುಂಬದೊಂದಿಗೆ ತಮ್ಮ ನಿವಾಸದಿಂದ ಪಲಾಯನ ಮಾಡಿದ್ದಾರೆ. ಪ್ರಧಾನಿ ರನಿಲ್ ವಿಕ್ರಮಸಂಘೆ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇದೇ ವೇಳೆ ಅಧ್ಯಕ್ಷರ ರಾಜೀನಾಮೆಗೂ ಒತ್ತಾಯ ಕೇಳಿಬಂದಿದೆ. ಗೋಟಬಯ ರಾಜಪಕ್ಸೆ ಅವರು ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಜುಲೈ 13ರಂದು ರಾಜೀನಾಮೆ ನೀಡಲಿದ್ದಾರೆ. ರಾಜಪಕ್ಸೆ ರಾಜೀನಾಮೆಯ ನಂತರ ಏನಾಗಬಹುದು? ಎಂಬುವುದು ಭಾರೀ ಕುತೂಹಲ ಕೆರಳಿಸಿದೆ.

ಗೋಟಬಯ ರಾಜಪಕ್ಸೆ ತನ್ನ ಅವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿದರೆ, ಸಂಸತ್ತು ತನ್ನ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕಾಗುತ್ತದೆ. ಎಲ್ಲವೂ ನಿಯಮದ ಪ್ರಕಾರ ನಡೆದರೆ ಅಧ್ಯಕ್ಷರು ರಾಜೀನಾಮೆ ನೀಡಿದ ಒಂದು ತಿಂಗಳೊಳಗೆ ಹೊಸ ನೇಮಕಾತಿ ನಡೆಯಲಿದೆ. ಮೂರು ದಿನಗಳೊಳಗೆ ಸಂಸತ್ತಿನ ಸಭೆ ಕರೆಯಲಾಗುವುದು. ಸಭೆಯಲ್ಲಿ, ಸಂಸತ್ತಿನ ಪ್ರಧಾನ ಕಾರ್ಯದರ್ಶಿಯು ಅಧ್ಯಕ್ಷರ ರಾಜೀನಾಮೆಯ ಬಗ್ಗೆ ಸಂಸತ್ತಿಗೆ ತಿಳಿಸಬೇಕು. ನಂತರ ನಾಮಪತ್ರ ಸ್ವೀಕಾರಕ್ಕೆ ದಿನಾಂಕ ನಿಗದಿಪಡಿಸಲಾಗುವುದು.

ರಾಷ್ಟ್ರಪತಿ ಚುನಾವಣೆ ಅವಿರೋಧವಾಗಿ ನಡೆಯಲಿದೆಯೇ?

ಸಂಸತ್ತಿನ ಒಬ್ಬ ಸದಸ್ಯರನ್ನು ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶನ ಮಾಡಿದರೆ, ಪ್ರಧಾನ ಕಾರ್ಯದರ್ಶಿ ಅವರು ಚುನಾಯಿತರಾಗಿದ್ದಾರೆ ಎಂದು ಘೋಷಿಸಬೇಕು. ಒಂದಕ್ಕಿಂತ ಹೆಚ್ಚು ಮಂದಿ ನಾಮನಿರ್ದೇಶನಗೊಂಡರೆ ಗುಪ್ತ ಮತದಾನ ನಡೆಯಲಿದೆ. ಮತದಾನದ ಆಧಾರದ ಮೇಲೆ ಬಹುಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.

ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಏನಾಗುತ್ತದೆ?

ಶ್ರೀಲಂಕಾದ ಸಂವಿಧಾನದ ಪ್ರಕಾರ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಹಾಲಿ ಪ್ರಧಾನಿ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಗೋಟಬಯ ರಾಜಪಕ್ಸೆ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಸಂಸತ್ತು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವವರೆಗೆ ಒಂದು ತಿಂಗಳಿಗಿಂತ ಕಡಿಮೆ ಅವಧಿಗೆ ರನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಕ್ಯಾಬಿನೆಟ್ ಸಚಿವರಲ್ಲಿ ಒಬ್ಬರನ್ನು ಕಚೇರಿಯಲ್ಲಿ ಸೇವೆ ಮಾಡಲು ನೇಮಕ ಮಾಡಲಾಗುತ್ತದೆ.

ಸರ್ವಪಕ್ಷಗಳ ಮಧ್ಯಂತರ ಸರ್ಕಾರ ರಚನೆ

ಶ್ರೀಲಂಕಾದ ಸಂಸದ ಹರ್ಷ ಡಿ ಸಿಲ್ವಾ ಅವರು ಅಧ್ಯಕ್ಷರು ಮತ್ತು ಪ್ರಧಾನಿ ಮತ್ತು ಸಂಸತ್ತಿನ ಸ್ಪೀಕರ್ ಅವರ ರಾಜೀನಾಮೆಗೆ ಪಕ್ಷದ ಹೆಚ್ಚಿನ ನಾಯಕರು ಸಮ್ಮತಿಸಿದ್ದು ಗರಿಷ್ಠ 30 ದಿನಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಒಪ್ಪಿಕೊಂಡಿದ್ದಾರೆ. ಬಳಿಕ ಮಾತನಾಡಿದ ಅವರು, ಚುನಾವಣೆಗೆ ಮುಖಂಡರು ಒಪ್ಪಿಗೆ ಸೂಚಿಸಿದ್ದು, ಇನ್ನುಳಿದ ಸರ್ಕಾರದ ಅವಧಿಗೆ ಅಧ್ಯಕ್ಷರ ಮೂಲಕ ಸಂಸದರನ್ನು ಆಯ್ಕೆ ಮಾಡಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಸರ್ವಪಕ್ಷಗಳ ಮಧ್ಯಂತರ ಸರ್ಕಾರ ರಚನೆಯಾಗಲಿದೆ ಎಂದರು.

click me!