
1. ನೇರ ಯುದ್ಧ: ಸೇನಾ ಸಮರ ಘೋಷಿಸಬಹುದು. ಆದರೆ, ಭಾರತ ತನ್ನ ದಾಳಿ ಉಗ್ರರ ಮೇಲೆ, ಪಾಕ್ ಮೇಲಲ್ಲ ಅಂದಿದೆ. ಅಲ್ಲದೆ, ಭಾರತದ ಹಠಾತ್ ದಾಳಿ ಕಂಗೆಡಿಸಿದೆ. ಯುದ್ಧ ಸಾಧ್ಯತೆ ಕಮ್ಮಿ
2. ಪರೋಕ್ಷ ಯುದ್ಧ: ಗಡಿಯಲ್ಲಿ ಕಟ್ಟೆಚ್ಚರದಿಂದಾಗಿ ಉಗ್ರರನ್ನು ನುಸುಳಿಸುವುದು ಕಷ್ಟ. ಆದರೆ, ಕಾಶ್ಮೀರ ಮತ್ತಿತರೆಡೆಯಿಂದ ಈಗಾಗಲೇ ನುಸುಳಿದ ಉಗ್ರರ ಬಳಸಿ ಪರೋಕ್ಷ ಸಮರ ಸಾರಬಹುದು.
3. ದೇಶವ್ಯಾಪಿ ವಿಧ್ವಂಸ: ತನ್ನ ಮೇಲೆ ಕೆಂಡಾಮಂಡಲವಾಗಿರುವ ಭಾರತದ ಗಮನ ಬೇರೆಡೆಗೆ ಹರಿಸಲು ಉಗ್ರರನ್ನು ಬಳಸಿ ದೇಶಾದ್ಯಂತ ವಿಧ್ವಂಸಕ ಕೃತ್ಯಗಳಿಗೆ ಪ್ರಚೋದನೆ ನೀಡಬಹುದು
4. ಎಲೆಕ್ಷನ್‌ಗೆ ತೊಂದರೆ: ಇನ್ನೊಂದೆರಡು ತಿಂಗಳಲ್ಲಿ ಭಾರತದಲ್ಲ ನಡೆಯುವ ಲೋಕಸಭಾ ಚುನಾವಣೆ ನಡೆಯುವ ವೇಳೆ ಭಯೋತ್ಪಾದನಾ ಕೃತ್ಯಗಳು ಹೆಚ್ಚೆಚ್ಚು ನಡೆಯುವಂತೆ ಮಾಡಬಹುದು
5. ರಾಜತಾಂತ್ರಿಕ ಮೊರೆ: ಭಾರತ ತನ್ನ ದೇಶದೊಳಕ್ಕೇ ನುಗ್ಗಿ ಅಂತಾರಾಷ್ಟ್ರೀಯ ಕಟ್ಟಳೆಗಳನ್ನು ಉಲ್ಲಂಘಿಸಿದೆ ಎಂದು ಪ್ರತಿಪಾದಿಸಿ ವಿಶ್ವ ಸಮುದಾಯದ ಮೂಲಕ ರಾಜತಾಂತ್ರಿಕ ಒತ್ತಡಕ್ಕೆ ಪ್ರಯತ್ನಿಸಬಹುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ