ಮದ್ವೆಗೆ 70 ಸಹೋದ್ಯೋಗಿಗಳ ಪೈಕಿ 69 ಮಂದಿ ಗೈರು, ಅವಮಾನ ಸಹಿಸಲಾಗದೆ ಕೆಲಸಕ್ಕೆ ರಾಜೀನಾಮೆ

Published : Jan 27, 2026, 11:20 PM IST
china marriage

ಸಾರಾಂಶ

ಮದ್ವೆಗೆ 70 ಸಹೋದ್ಯೋಗಿಗಳ ಪೈಕಿ 69 ಮಂದಿ ಗೈರು, ಒಂದು ತಿಂಗಳ ಮೊದಲೇ ಎಲ್ಲರಿಗೂ ಖುದ್ದು ಆಮಂತ್ರ ನೀಡಿದ್ದ ಮಹಿಳಾ ಉದ್ಯೋಗಿ, ಮದುವೆ ದಿನ 6 ಟೇಬಲ್ ರಿಸರ್ವ್ ಮಾಡಿದ್ದಳು. ಆದರೆ ಬಂದಿದ್ದು ಒಬ್ಬ ಸಹೋದ್ಯೋಗಿ ಮಾತ್ರ. 

ಮದುವೆ ಸರಳವಾಗಿ, ಆಪ್ತರ, ಗುರು ಹಿರಿಯರ ಸಮ್ಮುಖದಲ್ಲಿ ಮಾಡುವ ಸಂಪ್ರದಾಯ ಬದಲಾಗಿದೆ. ಈಗ ಏನಿದ್ದರೂ ಅದ್ದೂರಿ. ಆಪ್ತರು, ಗೆಳೆಯರ,ಬಂಧು ಬಳಗ ಸೇರಿದಂತೆ ಹಲವರನ್ನು ಆಮಂತ್ರಿಸಲಾಗುತ್ತದೆ. ಅದರಲ್ಲೂ ವೃತ್ತಿಯಲ್ಲಿದ್ದರೆ ಸಹೋದ್ಯೋಗಿಗಳ ಹಾಜರಿಯೂ ಅಷ್ಟೇ ಮುಖ್ಯ. ಇದೇ ರೀತಿ ಇಲ್ಲೊಬ್ಬ ಮಹಿಳಾ ಉದ್ಯೋಗಿ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಎಲ್ಲರನ್ನು ಮದುವೆಗೆ ಆಹ್ವಾನಿಸಿದ್ದಾಳೆ. 70 ಮಂದಿಗೆ ಆಮಂತ್ರಣ ಪತ್ರಿಕೆ ನೀಡಿದ್ದಾಳೆ. ಆದರೆ 69 ಮಂದಿ ಮದುವೈಗೆ ಗೈರಾಗಿದ್ದಾರೆ. ಈ ಅವಮಾನ, ನೋವು ಸಹಿಸಲಾಗದೇ ಐದು ವರ್ಷದಿಂದ ಕೆಲಸ ಮಾಡುತ್ತಿದ್ದ ಕಂಪನಿಗೆ ರಾಜೀನಾಮೆ ನೀಡಿದ ಘಟನೆ ಚೀನಾದಲ್ಲಿ ನಡೆದಿದೆ.

ಕಚೇರಿಯ ಎಲ್ಲಾ ಸಹೋದ್ಯೋಗಿಗಳಿಗೆ ಆಮಂತ್ರಣ

ಐದು ವರ್ಷದಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆಗೆ ಆಮಂತ್ರಣ ನೀಡುವಾಗ ಕೆಲವರಿಗಷ್ಟೇ ಆಮಂತ್ರಣ ನೀಡಲು ನಿರ್ಧರಿಸಲಾಗಿತ್ತು. ಆದರೆ ಮಹಿಳೆ ತನ್ನ ಕಚೇರಿಯಲ್ಲಿ ಕೆಲವರಿಗಷ್ಟೇ ಆಮಂತ್ರಣ ನೀಡುವುದು ಸರಿಯಲ್ಲ. ಹೀಗಾಗಿ ಎಲ್ಲರನ್ನು ಆಮಂತ್ರಿಸುವುದಾಗಿ ಕುಟುಂಬಸ್ಥರಲ್ಲಿ ತಿಳಿಸಿದ್ದಾಳೆ. ಇದರಂತೆ ತನ್ನ ಕಂಪನಿಯಲ್ಲಿದ್ದ ಒಟ್ಟು 70 ಮಂದಿಗೆ ಆಮಂತ್ರಣ ನೀಡಿದ್ದಾಳೆ.

ಒಂದು ತಿಂಗಳ ಮುಂಚೆ ಆಮಂತ್ರಣ, ಬಳಿಕ ಮೆಸೇಜ್

ಐದು ವರ್ಷದಿಂದ ಜೊತೆಯಾಗಿ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳಿಗೆ ಮದುವೆಗೂ ಒಂದು ತಿಂಗಳ ಮುಂಚೆ ಆಮಂತ್ರಣ ನೀಡಿದ್ದಾಳೆ. ಎಲ್ಲರಿಗೂ ಖುದ್ದಾಗಿ ತೆರಳಿ ಆಮಂತ್ರಿಸಿದ್ದಾಳೆ. ಸಾರ್ವಜನಿಕ ರಜಾ ದಿನದಲ್ಲೇ ಮದುವೆ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಆಮಂತ್ರಣ ನೀಡುವ ವೇಳೆ ಸೂಚಿಸಿದ್ದಳು. ಚೀನಾದಲ್ಲಿ ವ್ಯಾಟ್ಸಾಪ್‌ಗೆ ಪ್ರತಿಯಾಗಿರುವ ವಿಚಾಟ್ ಮೂಲಕ ಮದುವೆ ದಿನಾಂಕ ಹತ್ತಿರಬರುತ್ತಿದ್ದಂತೆ ಸಂದೇಶ ರವಾನಿಸಿದ್ದಾಳೆ. ಕಚೇರಿ ವ್ಯಾಟ್ಸಾಪ್ ಗ್ರೂಪ್‌ನಲ್ಲಿ ಮೆಸೇಜ್ ಹಾಕಿದ್ದಾಳೆ.

ಮದುವೆ ಮಂಟಪದಲ್ಲಿ ಆರು ಟೇಬಲ್ ರಿಸರ್ವ್

ಮದುವೆ ದಿನ ಸಂತಸ ಇಮ್ಮಡಿಗೊಂಡಿತ್ತು. ಕುಟುಂಬಸ್ಥರು, ಆಪ್ತರು ಮದುವೆಗೆ ಆಗಮಿಸಿದ್ದರು. ಇತ್ತ ಸಹೋದ್ಯೋಗಿಗಳಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಮದುವೆ ಆಯೋಜಿಸಿದ್ದ ರೆಸ್ಟೋರೆಂಟ್‌ನಲ್ಲಿ 6 ಟೇಬಲ್ ಮೊದಲೇ ರಿಸರ್ವ್ ಮಾಡಲಾಗಿತ್ತು. ಸಹೋದ್ಯೋಗಿಗಳ ಪೈಕಿ ಕೆಲವರು ಕುಟುಂಬ ಸಮೇತ ಬರುವುದಾಗಿ ಹೇಳಿದ್ದರು. ಹೀಗಾಗಿ ಟೇಬಲ್ ಮೊದಲೇ ರಿಸರ್ವ್ ಮಾಡಿ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.

69 ಮಂದಿ ಗೈರುಸ ಕೆಲಸಕ್ಕೆ ರಾಜೀನಾಮೆ

70 ಮಂದಿಯಲ್ಲಿ 69 ಮಂದಿ ಮದುವೆಗೆ ಗೈರಾಗಿದ್ದಾರೆ. ಒಬ್ಬ ಮಾತ್ರ ಮದುವೆಗೆ ಹಾಜರಾಗಿದ್ದಾರೆ. ಆಮಂತ್ರಣ ಮಾಡಿ, ಮದುವೆಗೆ ಟೇಬಲ್ ರಿಸರ್ವ್ ಮಾಡಿದರೂ 69 ಮಂದಿ ಗೈರಾಗಿರುವುದು ಮಹಿಳಾ ಉದ್ಯೋಗಿಗೆ ಸಹಿಸಲು ಸಾಧ್ಯವಾಗಿಲ್ಲ. ಕುಟುಂಸ್ಥರ ಜೊತೆ ಸಹೋದ್ಯೋಗಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚಿಸಿದ್ದ ಮಹಿಳಾ ಉದ್ಯೋಗಿಗೆ ಉದ್ಯೋಗಿಗಳು ಹಾಗೂ ಕಂಪನಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅವಮಾನ ಸಹಿಸಲು ಸಾಧ್ಯವಾಗದೇ ಐದು ವರ್ಷದಿಂದ ಕೆಲಸ ಮಾಡುತ್ತಿದ್ದ ಕಂಪನಿಗೆ ರಾಜೀನಾಮೆ ನೀಡಿದ ಘಟನೆ ಚೀನಾದಲ್ಲಿ ನಡೆದಿದೆ. ಈ ಘಟನೆ ಭಾರಿ ವೈರಲ್ ಆಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಿಜವಾಯ್ತು ವಂಗಾ ಬಾಬಾ ಬಂಗಾರ ಭವಿಷ್ಯ..! ಬಜೆಟ್​​ ಬಳಿಕ ಚಿನ್ನದ ಬೆಲೆ ಏನಾಗುತ್ತದೆ ?
ಲಕ್ಕುಂಡಿಗೂ ಮೊದಲು ಶುರುವಾಗಿತ್ತು ನಿಧಿ ಶೋಧ, 5 ವರ್ಷ ಬಳಿಕ ಸೌದಿಗೆ ಸಿಕ್ತು $2.5 ಟ್ರಿಲಿಯನ್ ಸಂಪತ್ತು