
ಇಸ್ಲಾಮಾಬಾದ್(ನ.16): ಭಾರತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸ್ಧಗಿತಗೊಳಿಸಿರುವುದಿಂದ, ಉಪಗ್ರಹದ ಮೂಲಕ ಜನರಿಗೆ ಇಂಟರ್ನೆಟ್ ಒದಗಿಸುವುದಾಗಿ ಹೇಳಿ ಪಾಕಿಸ್ತಾನ ಸಚಿವರೊಬ್ಬರು ಟ್ರೋಲ್‌ಗೊಳಗಾಗಿದ್ದಾರೆ.
ಪಾಕಿಸ್ತಾನದ ಉಪಗ್ರಹಗಳ ಮೂಲಕ ಕಾಶ್ಮೀರಿಗರಿಗೆ ಅಂತರಜಾಲ ಸೇವೆ ಒದಗಿಸುವುದಾಗಿ ಪಾಕಿಸ್ತಾನದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ ಹೇಳಿದ್ದಾರೆ.
ಕಾಶ್ಮೀರಕ್ಕೆ ಉಪಗ್ರಹದಿಂದ ಇಂಟರ್‌ನೆಟ್: ಆಫರ್ ನೀಡಿ ಜೋಕರ್ ಆದ ಪಾಕ್ ಸಚಿವ!
ಭದ್ರತಾ ದೃಷ್ಟಿಯಿಂದ ಕಳೆದ ಮೂರು ತಿಂಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾವು ಉಪಗ್ರಹದ ಮೂಲಕ ಕಾಶ್ಮೀರಿ ಜನರಿಗೆ ಇಂಟರ್ನೆಟ್ ಸೇವೆ ನೀಡುತ್ತೇವೆ ಎಂದು ಫವಾದ್ ಹೇಳಿದ್ದಾರೆ.
ಪಾಕಿಸ್ತಾನ ಇದುವರೆಗೂ ಸ್ವಂತ ಬಲದ ಮೇಲೆ ಉಪಗ್ರಹ ನಿರ್ಮಿಸುವ ಅಥವಾ ಉಡಾಯಿಸುವ ಸಾಮರ್ಥ್ಯ ಹೊಂದಿಲ್ಲ. ಹೀಗಿರುವಾಗ ಕಾಶ್ಮೀರಿ ಜನರಿಗೆ ಉಪಗ್ರಹದ ಮೂಲಕ ಇಂಟರ್ನೆಟ್ ಸೇವೆ ಒದಗಿಸಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಸಚಿವರ ಕಾಲೆಳೆದಿದ್ದಾರೆ.
ಆ 58 ರಾಷ್ಟ್ರಗಳ ಹೆಸರೇಳಿ ಸ್ವಾಮಿ: ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಪಾಕ್ ಆಸಾಮಿ!
ಇನ್ನು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಲು ಮುಂದಾದ ಫವಾದ್ ಹುಸೇನ್, ಕಾಶ್ಮೀರ ಜನತೆಯ ಹಕ್ಕಿನ ರಕ್ಷಣೆಗಾಗಿ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಉಪಗ್ರಹದಿಂದ ಇಂಟರ್ನೆಟ್ ಸೇವೆ ಒದಗಿಸಲು ಸಾಧ್ಯ ಎಂದಾದರೆ ನಾವು ಅದನ್ನೂ ಮಾಡುತ್ತೇವೆ ಎಂದಿಉ ಹುಸೇನ್ ಹೇಳಿದ್ದಾರೆ.
ಇಸ್ರೋದ ಚಂದ್ರಯಾನ-2 ವಿಫಲವಾದಾಗ ಇದೇ ಫವಾದ್ ಹುಸೇನ್ ಭಾರತದ ತಂತ್ರಜ್ಞಾನ ಸಾಮರ್ಥ್ಯವನ್ನು ಅಪಹಾಸ್ಯ ಮಾಡಿದ್ದರು. ಇದೀಗ ಉಪಗ್ರಹದ ಮೂಲಕ ಕಾಶ್ಮೀರಕ್ಕೆ ಇಂಟರ್ನೆಟ್ ಸೇವೆ ಒದಗಿಸುವುದಾಗಿ ಹೇಳುವ ಮೂಲಕ ಖುದ್ದು ಟ್ರೋಲ್‌ಗೊಳಗಾಗಿದ್ದಾರೆ.
ಸಾರೆ ಜಹಾ ಸೇ ಅಚ್ಛಾ..: ಮೇಜು ಕುಟ್ಟಿ ಭಾರತ ನೆನೆದ ಪಾಕ್ ನಾಯಕ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ