ಟ್ರಂಪ್ ಎಂಬ ‘ಅಮೆರಿಕ ಫಸ್ಟ್‌’ ನೀತಿಯ ಪ್ರತಿಪಾದಕ..!

Published : Jun 10, 2024, 04:49 PM IST
ಟ್ರಂಪ್ ಎಂಬ ‘ಅಮೆರಿಕ ಫಸ್ಟ್‌’ ನೀತಿಯ ಪ್ರತಿಪಾದಕ..!

ಸಾರಾಂಶ

ತಮ್ಮ ಕನಸಿನ ಅಮೆರಿಕಾ ನಿರ್ಮಾಣ ಮಾಡುವ ಗುರಿಯತ್ತ ಮತ್ತಷ್ಟು ದೃಢ ಹೆಜ್ಜೆ ಇಟ್ಟಿರುವುದಾಗಿ ಘೋಷಿಸಿರುವ ಟ್ರಂಪ್​, ತಮ್ಮ ಭಾಷಣಗಳಲ್ಲಿ ‘ಅಮೆರಿಕ ಫಸ್ಟ್​’ ನೀತಿ ಪ್ರತಿಪಾದಿಸುತ್ತಿದ್ದಾರೆ.  

ಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಮತ್ತೊಮ್ಮೆ ದೊಡ್ಡಣ್ಣನಾಗಬೇಕೆಂದು ಹಠಕ್ಕೆ ಬಿದ್ದಿದ್ದ ಟ್ರಂಪ್​ಗೆ ಗುಂಡಿನ ದಾಳಿ ಬ್ರಹ್ಮಾಸ್ತ್ರದಂತೆ ಸಿಕ್ಕಿದೆ. ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಹತ್ಯಾ ಯತ್ನದಿಂದ ವಿಚಲಿತರಾಗದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಟ್ರಂಪ್,  ಈ ದಾಳಿಯನ್ನೇ ಸವಾಲನ್ನಾಗಿ ಸ್ವೀಕರಿಸಿ, ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ವೇಗ ತುಂಬಿದ್ದಾರೆ.

ತಮ್ಮ ಕನಸಿನ ಅಮೆರಿಕಾ ನಿರ್ಮಾಣ ಮಾಡುವ ಗುರಿಯತ್ತ ಮತ್ತಷ್ಟು ದೃಢ ಹೆಜ್ಜೆ ಇಟ್ಟಿರುವುದಾಗಿ ಘೋಷಿಸಿರುವ ಟ್ರಂಪ್​, ತಮ್ಮ ಭಾಷಣಗಳಲ್ಲಿ ‘ಅಮೆರಿಕ ಫಸ್ಟ್​’ ನೀತಿ ಪ್ರತಿಪಾದಿಸುತ್ತಿದ್ದಾರೆ. ಇದರ ಮಧ್ಯೆ, ಒಹಾಯೋ ಸೆನೆಟರ್ ಜೇಮ್ಸ್ ಡೇವಿಡ್ ವ್ಯಾನ್ಸ್ ರನ್ನು ಉಪಾಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಮೂಲಕ ಹೊಸ ದಾಳ ಉರುಳಿಸಿದ್ದು, ಎದುರಾಳಿಗಳಿಗೆ ಶಾಕ್ ಕೊಟ್ಟಿದ್ದಾರೆ. 

ಡೇವಿಡ್ ವ್ಯಾನ್ಸ್ ಆಯ್ಕೆ ಹಿಂದೆಯೂ ಟ್ರಂಪ್​ ದೊಡ್ಡ ಮಟ್ಟದ ಲೆಕ್ಕಾಚಾರವೇ ಇದೆ.  ಜೇಮ್ಸ್​ ವ್ಯಾನ್ಸ್,  ಟ್ರಂಪ್ ಅವರ ‘ಅಮೆರಿಕಾ ಫಸ್ಟ್’ ವಿದೇಶಾಂಗ ನೀತಿಯ ಬೆಂಬಲಿಗ. 2016ರ ಅಧ್ಯಕ್ಷೀಯ ಪ್ರಚಾರದಲ್ಲಿ ಟ್ರಂಪ್ ಘೋಷಿಸಿದ್ದ 'ಅಮೆರಿಕಾ ಫಸ್ಟ್' ನೀತಿಯನ್ನು ಬಹಿರಂಗವಾಗಿ ಬೆಂಬಲಿಸಿದ ವ್ಯಾನ್ಸ್, ಇಸ್ರೇಲ್ ಪರ ಒಲವಿರುವ ಅಮೇರಿಕನ್ನರನ್ನು ಸೆಳೆಯುವ ಶಕ್ತಿ ಹೊಂದಿದ್ದಾರೆಂಬ ನಂಬಿಕೆ ಟ್ರಂಪ್​ಗೆ ಈ ಪಾಸಿಟಿವ್​ ಅಂಶಗಳೇ ವ್ಯಾನ್ಸ್ ಆಯ್ಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ..

ಯಾರೀ ವ್ಯಾನ್ಸ್ :  2022ರಲ್ಲಿ ಮೊದಲ ಬಾರಿಗೆ ಸೆನೆಟ್ ಸ್ಥಾನ ಅಲಂಕರಿಸಿದ 39 ವರ್ಷದ ಜೆ. ಡಿ. ವ್ಯಾನ್ಸ್, ಜನವರಿ 2023ರಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದರು. ಅಮೆರಿಕಾದ ಸೆನೆಟ್‌ನ ಬ್ಯಾಂಕಿಂಗ್, ವಾಣಿಜ್ಯ ಮತ್ತು ಆರ್ಥಿಕ ನೀತಿಗಳ ಮೇಲೆ ಗಮನ ಕೇಂದ್ರೀಕರಿಸುವ ಸಮಿತಿಗಳಲ್ಲಿ ವ್ಯಾನ್ಸ್ ಕೆಲಸ ಮಾಡಿದ್ದಾರೆ. ಸೆನೆಟರ್ ಆಗಿ ಆಯ್ಕೆಯಾಗುವ ಮೊದಲು ಜೆ. ಡಿ. ವ್ಯಾನ್ಸ್ ಅಮೆರಿಕಾದ ಟೆಕ್ ಉದ್ಯಮದಲ್ಲಿ ಹೆಸರು ಮಾಡಿದ್ದರು. ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ವಕೀಲರಾಗಿಯೂ ವ್ಯಾನ್ಸ್ ಖ್ಯಾತರು.

2003ರಲ್ಲಿ ಪ್ರಾರಂಭವಾದ ಯುಎಸ್ ಮೆರೈನ್ ಕಾರ್ಪ್ಸ್‌ನಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ವ್ಯಾನ್ಸ್, ಇರಾಕ್ ಯುದ್ಧದ ಸಮಯದಲ್ಲಿ ಸಾರ್ವಜನಿಕ ವ್ಯವಹಾರಗಳಲ್ಲಿ ಕೆಲಸ ಮಾಡಿದ್ದರು.

ಅಮೆರಿಕಾದ ವಿದೇಶಾಂಗ ನೀತಿಯ ಕಟು ಟೀಕಾಕಾರರಾದ ವ್ಯಾನ್ಸ್, 2003ರ ಇರಾಕ್ ಆಕ್ರಮಣ ಐತಿಹಾಸಿಕ ತಪ್ಪು ನಿರ್ಧಾರ ಎಂದು ವ್ಯಾಖ್ಯಾನಿಸಿದ್ರು. ಇರಾಕ್ ಮೇಲೆ ಆಕ್ರಮಣ ಮಾಡುವ ಮೂಲಕ ಮಧ್ಯ ಪ್ರಾಚ್ಯದಲ್ಲಿ ಇರಾನ್‌ಗೆ ಹೊಸ ಮಿತ್ರನನ್ನು ನಾವೇ ಸೃಷ್ಟಿಸಿ ಕೊಟ್ಟಿದ್ದೇವೆ ಎಂದು ವ್ಯಾನ್ಸ್ ಪ್ರತಿಪಾದಿಸಿದ್ದರು. ಕಳೆದ ಏಪ್ರಿಲ್ ಅಂತ್ಯದಲ್ಲಿ ಉಕ್ರೇನ್‌ಗೆ 61 ಶತಕೋಟಿ ಅಮೇರಿಕನ್ ಡಾಲರ್ ಮಿಲಿಟರಿ ನೆರವು ಒದಗಿಸುವ ನಿರ್ಣಯ ಬೆಂಬಲಿಸುವ ಸೆನೆಟರ್‌ಗಳ ನಿರ್ಧಾರ ಟೀಕಿಸಿದ್ದ ವ್ಯಾನ್ಸ್, ಇರಾಕ್ ಯುದ್ಧದಿಂದ ಅಮೇರಿಕಾ ಪಾಠ ಕಲಿತಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಕಿಡಿಕಾರಿದ್ದರು. ಈ ಎಲ್ಲ ರಾಜಕೀಯ ನೀತಿಗಳನ್ನೇ ಮುಂದಿಟ್ಟುಕೊಂಡು, ವ್ಯಾನ್ಸ್​ರನ್ನು ಉಪಾಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆಂಬುದು ಅಮೆರಿಕ ರಾಜಕೀಯ ವ್ಯಾಖ್ಯಾನಕಾರರ ಅಭಿಪ್ರಾಯ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

SM
About the Author

Shobha MC

ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಎಂಎ ಮುಗಿಸಿ, ಸೇರಿದ್ದು ವಿಜಯ ಕರ್ನಾಟಕ ಪತ್ರಿಕೆಗೆ. ಸೂರ್ಯೋದಯ ಸೇರಿ ಪತ್ರಿಕೆಗಳಲ್ಲಿ 7 ವರ್ಷಗಳ ಅನುಭವ. ನ್ಯೂಸ್ ಚಾನೆಲ್ಗಳಿನ್ನೂ ಸರಿಯಾಗಿ ಕಣ್ಬಿಡದ ಕಾಲದಲ್ಲೇ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟಿದ್ದು, ಟೆಲಿವಿಷನ್ ಪಟ್ಟುಗಳೆಲ್ಲ ಕರತಲಾಮಲಕ. ಉದಯ ಟಿವಿಯಲ್ಲಿ 2 ವರ್ಷ ಸೇವೆ. ಕಳೆದ 17 ವರ್ಷದಿಂದಲೂ ಸುವರ್ಣ ನ್ಯೂಸ್ ಇನ್ಪುಟ್, ಔಟ್ಪುಟ್ ಹೆಡ್ ಆಗಿ ಕಾರ್ಯ ನಿರ್ವಹಣೆ. ಪತ್ರಿಕೆ- ಟಿವಿ ಎರಡರ ಅಗಾಧ ಅನುಭವ ಇರುವ ಏಕೈಕ ಪತ್ರಕರ್ತೆ. ಪ್ರತಿಷ್ಠಿತ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರಕರ್ತರ ಸಂಘ, ಕೆಂಪೇಗೌಡ ಪ್ರಶಸ್ತಿ, ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ, ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿಗಳು ಮುಡಿಗೇರಿವೆ. ಸದ್ಯ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಸಿಲಬಸ್ ಕಮಿಟಿ ಸದಸ್ಯೆಯಾಗಿಯೂ ನೇಮಕ.Read More...
Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?