ಸೆಕ್ಸ್ ಮಾಡೋದೇ ಇಲ್ಲ, ಟ್ರಂಪ್‌ ಗೆಲುವಿನ ಬೆನ್ನಲ್ಲೇ ಪುರುಷರ ವಿರುದ್ಧ ರಿವೇಂಜ್‌ಗಿಳಿದ ಅಮೆರಿಕದ ಹೆಂಗಸರು!

By Santosh Naik  |  First Published Nov 9, 2024, 10:35 PM IST

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಗೆಲುವಿಗೆ ಗಂಡಸರೇ ಕಾರಣ ಎಂದು ಮಹಿಳೆಯರು ಪ್ರತಿಭಟನೆ ಆರಂಭಿಸಿದ್ದಾರೆ. ಇದಕ್ಕಾಗಿ ಅಮೆರಿಕದಲ್ಲಿ ಮಹಿಳೆಯರು 4ಬಿ ಮೂವ್‌ಮೆಂಟ್‌ಗೆ ಸೇರಿದ್ದಾರೆ.


ನ್ಯೂಯಾರ್ಕ್‌ (ನ.9): ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಟ್‌ ಟ್ರಂಪ್‌ ಗೆಲುವು ಕಂಡಿದ್ದು, ಅಮೆರಿಕದಲ್ಲಿ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ ಡೊನಾಲ್ಟ್‌ ಟ್ರಂಪ್‌ ಗೆಲುವಿಗೆ ಪುರುಷರೇ ಕಾರಣ ಎಂದು ಆರೋಪಿಸಿರುವ ಮಹಿಳೆಯರು 4ಬಿ ಮೂವ್‌ಮೆಂಟ್‌ಗೆ ಸೇರಿಕೊಂಡಿದ್ದಾರೆ. ಇದರ ಪ್ರಕಾರ, ಪುರುಷರ ಜೊತೆ ಸೆಕ್ಸ್‌ ಮಾಡದೇ ಇರುವ ಪ್ರತಿಜ್ಞೆ ಮಾಡಿದ್ದಾರೆ. ಅದರೊಂದಿಗೆ ನೋ ರಿಲೇಷನ್‌ಷಿಪ್‌, ನೋ ಮ್ಯಾರೇಜ್‌ ಹಾಗೂ ನೋ ಗಿವಿಂಗ್‌ ಬರ್ತ್‌ ಎನ್ನುವುದು ಈ ಪ್ರತಿಭಟನೆಯ ಭಾಗವಾಗಿದೆ. ಇದರ ಒಟ್ಟಾರೆ ಅರ್ಥವೇನೆಂದರೆ, ಸೆಕ್ಸ್‌ನಲ್ಲಿ ಭಾಗಿಯಾಗದೇ ಇರೋದು, ರಿಲೇಷನ್‌ಷಿಪ್‌ನಲ್ಲಿ ಇರದೇ ಇರೋದು, ಮದುವೆ ಆಗದೇ ಇರೋದು ಹಾಗೂ ಮಕ್ಕಳನ್ನು ಹೆರದೇ ಇರೋದು ಈ ಪ್ರತಿಭಟನೆಯಾಗಿದೆ. ಇದು ಪುರುಷರ ಮೇಲೆ ತಮ್ಮ ಸೇಡು ಎಂದು ಅವರು ಹೇಳಿಕೊಂಡಿದ್ದಾರೆ. 4ಬಿ ಮೂವ್‌ಮೆಂಟ್‌ ದಕ್ಷಿಣ ಕೊರಿಯಾ ಮೂಲದ್ದಾಗಿದ್ದು, ಟ್ರಂಪ್‌ ಗೆಲುವಿನ ಬಳಿಕ ಅಮೆರಿಕದಲ್ಲಿ ಜನಪ್ರಿಯವಾಗಿದೆ.

ಕಮಲಾ ಹ್ಯಾರಿಸ್ ಅವರ ಡೆಮಾಕ್ರಟಿಕ್ ಕ್ಯಾಂಪ್ ಟ್ರಂಪ್ ಅವರ ಸ್ತ್ರೀವಾದಿ ವಿರೋಧಿ ಚಿತ್ರಣವನ್ನು ಹೈಲೈಟ್‌ ಮಾಡಿತ್ತು. ಹಲವಾರು ಅಮೆರಿಕದ ಮಹಿಳೆಯರು ಟ್ರಂಪ್ ಗೆಲುವಿನ ಬಗ್ಗೆ ಕಣ್ಣೀರಿಡುತ್ತಿರುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಈಗ ಅವರು 4ಬಿ ಮೂವ್‌ಮೆಂಟ್‌ಅನ್ನು ಆರಂಭಿಸಿದ್ದಾರೆ.

4ಬಿ ಅನ್ನೋದು ನಾಲ್ಕು ನಂಬರ್‌ ಹಾಗೂ ಬಿ ಅನ್ನೋದನ್ನು ತೋರಿಸುತ್ತದೆ. ಕೊರಿಯನ್‌ ಭಾಷೆಯಲ್ಲಿ ಬಿ ಎಂದರೆ ನೋ ಎನ್ನುವ ಅರ್ಥವಾಗಿದೆ. ಮೀಟೂ ಮತ್ತು 'ಎಸ್ಕೇಪ್ ದಿ ಕಾರ್ಸೆಟ್' ಚಳುವಳಿಗಳ ನಂತರ ಈ ಚಳುವಳಿ ದಕ್ಷಿಣ ಕೊರಿಯಾದಲ್ಲಿ ಹೈಲೈಟ್‌ ಆಯಿತು.

2021 ರಲ್ಲಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ ಅವರು ದಕ್ಷಿಣ ಕೊರಿಯಾದಲ್ಲಿ ಮಹಿಳೆಯರು ಮತ್ತು ಪುರುಷರ ನಡುವಿನ "ಆರೋಗ್ಯಕರ ಸಂಬಂಧಗಳನ್ನು ಈ ಚಲುವಳಿ ನಿರ್ಭಂಧಿಸುತ್ತಿದೆ" ಎಂದು ಹೇಳಿದ್ದರು.

Latest Videos

undefined

ನೆನಪುಗಳು ಮೆದುಳಲ್ಲಿ ಮಾತ್ರವೇ ಇರೋದಿಲ್ಲ, ಕಿಡ್ನಿಯಲ್ಲೂ ಇರುತ್ತಂತೆ!

ಇದನ್ನೇ ಈಗ ಅಮೆರಿಕದ ಮಹಿಳೆಯರು ಮುಂದುವರಿಸಿದ್ದಾರೆ. "ಮಹಿಳೆಯರು ಸರ್ಕಾರ ಮತ್ತು ರಾಜ್ಯ ಮತ್ತು ಪುರುಷರು ತಮ್ಮನ್ನು ಹೇಗೆ ವಿಫಲಗೊಳಿಸುತ್ತಿದ್ದಾರೆ ಎಂಬುದರ ಕುರಿತು ಯೋಚಿಸಲು ಪ್ರಾರಂಭ ಮಾಡಿದ್ದಾರೆ" ಎಂದು ಯೇಲ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪಿಎಚ್‌ಡಿ ಅಭ್ಯರ್ಥಿ ಮೀರಾ ಚೋಯ್ ಎನ್‌ಬಿಸಿಗೆ ತಿಳಿಸಿದರು. ತಮ್ಮ ಸಂತಾನೋತ್ಪತ್ತಿ ಹಕ್ಕುಗಳನ್ನು ರಕ್ಷಿಸುವ ಬಗ್ಗೆ ಮಾತನಾಡಿದ್ದ ಕಮಲಾ ಹ್ಯಾರಿಸ್‌ ಯುಎಸ್‌ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದು ಅವರು ಆಶಿಸಿದ್ದರು.

ಸುನೀತಾ ವಿಲಿಯಮ್ಸ್‌ ಹೊಸ ಫೋಟೋ ಕಂಡು ನಾಸಾ ದಿಗ್ಭ್ರಮೆ, ಸಣಕಲು ಕಡ್ಡಿಯಾದ ಗಗನಯಾತ್ರಿ!

click me!