ನಾನು ಹಿಂದು, ನನ್ನ ಪಾಲಿಗೆ ಮದುವೆ ಅನ್ನೋದು ಪವಿತ್ರ ಸಂಬಂಧ: ಅಮೆರಿಕ ಅಧ್ಯಕ್ಷೀಯ ಸ್ಪರ್ಧಿಯ ಮಾತು!

Published : Nov 19, 2023, 07:59 PM IST
ನಾನು ಹಿಂದು, ನನ್ನ ಪಾಲಿಗೆ ಮದುವೆ ಅನ್ನೋದು ಪವಿತ್ರ ಸಂಬಂಧ: ಅಮೆರಿಕ ಅಧ್ಯಕ್ಷೀಯ ಸ್ಪರ್ಧಿಯ ಮಾತು!

ಸಾರಾಂಶ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿರುವ ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ ಇತ್ತೀಚೆಗೆ ಭಾಷಣದಲ್ಲಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಾವೊಬ್ಬ ಹಿಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದಿರುವ ಅವರು, ಮದುವೆ ಅನ್ನೋದು ತಮ್ಮ ಪಾಲಿಗೆ ಪವಿತ್ರ ಸಂಬಂಧ ಎಂದಿದ್ದಾರೆ.  

ನವದೆಹಲಿ (ನ.19): ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ, ನಾನು ಹಿಂದೂ ಮತ್ತು ನನ್ನ ನಂಬಿಕೆ ನನ್ನನ್ನು ಈ ಅಧ್ಯಕ್ಷೀಯ ಪ್ರಚಾರಕ್ಕೆ ಕರೆದೊಯ್ದಿದೆ ಎಂದು ಹೇಳಿದ್ದಾರೆ. ಜಗತ್ತಿನಲ್ಲಿ ದೇವರಿದ್ದಾನೆ ಎಂದು ನಾನು ನಂಬುತ್ತೇನೆ. ಅವರು ನಮ್ಮೆಲ್ಲರನ್ನೂ ಯಾವುದೋ ಉದ್ದೇಶಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.ನಾನು ಸಾಂಪ್ರದಾಯಿಕ ಮನೆಯಲ್ಲಿ ಬೆಳೆದವನು. ಕುಟುಂಬವೇ ಅಡಿಪಾಯ ಎಂದು ನನ್ನ ಪೋಷಕರು ನನಗೆ ಕಲಿಸಿದರು. ನಿಮ್ಮ ಹೆತ್ತವರನ್ನು ಗೌರವಿಸಿ. ಮದುವೆ ಎನ್ನುವುದು ಬಹಳ ಪವಿತ್ರವಾದ ಸಂಬಂಧ. ಅದನ್ನು ಅವಮಾನಿಸುವುದು ತುಂಬಾ ತಪ್ಪು. ನಾವು ಎಂದಿಗೂ ವಿಚ್ಛೇದನವನ್ನು ನಮ್ಮ ಆದ್ಯತೆಯಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ. ನಾವು ದೇವರ ಮುಂದೆ ಮದುವೆಯಾಗುತ್ತೇವೆ. ದೇವರಿಗೆ ಮತ್ತು ನಮ್ಮ ಕುಟುಂಬಕ್ಕೆ ಪ್ರಮಾಣ ಮಾಡಿ ಮದುವೆಯಾಗಿರುತ್ತೇವೆ ಎಂದು ವಿವೇಕ್‌ ರಾಮಸ್ವಾಮಿ ಹೇಳಿದ್ದಾರೆ.

ಅಮೆರಿಕದಲ್ಲಿ ಚುನಾವಣಾ ಪ್ರಚಾರದ ವೇಳೆ ಅಯೋವಾದಲ್ಲಿ ಫ್ಯಾಮಿಲಿ ಫೋರಂನಲ್ಲಿ ಭಾಗವಹಿಸಲು ಬಂದಿದ್ದ ರಾಮಸ್ವಾಮಿ, 'ದೇವರ ಮೇಲಿನ ನನ್ನ ನಂಬಿಕೆಯು ನಮಗೆಲ್ಲರಿಗೂ ಕರ್ತವ್ಯವಿದೆ ಮತ್ತು ಅದನ್ನು ಗುರುತಿಸುವುದು ಬಹಳ ಮುಖ್ಯ ಎಂದು ನನಗೆ ಕಲಿಸುತ್ತದೆ. ದೇವರು ಎಲ್ಲರೊಳಗೂ ನೆಲೆಸಿರುವ ಕಾರಣ ನಾವೆಲ್ಲರೂ ಸಮಾನರು. ಇದು ನನ್ನ ನಂಬಿಕೆಯ ಅಡಿಪಾಯವೂ ಆಗಿದೆ. ರಾಮಸ್ವಾಮಿ ಅವರು ಈ ಸಂದರ್ಶನದ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 'ಕಳೆದ ರಾತ್ರಿ ನನ್ನ ಹಿಂದೂ ನಂಬಿಕೆಯ ಬಗ್ಗೆ ಕೇಳಲಾಯಿತು. ನಾನು ಸಂಪೂರ್ಣ ಪ್ರಾಮಾಣಿಕವಾಗಿ ಉತ್ತರಿಸಿದೆ' ಎಂದು ಅವರು ಬರೆದುಕೊಂಡಿದ್ದಾರೆ.

ರಾಮಸ್ವಾಮಿ ಅವರಲ್ಲದೆ, ನಿಕ್ಕಿ ಹ್ಯಾಲಿ ಮತ್ತು ರಾನ್ ಡಿಸಾಂಟಿಸ್ ಕೂಡ ಅಯೋವಾದಲ್ಲಿ ನಡೆದ ಫ್ಯಾಮಿಲಿ ಫೋರಂನಲ್ಲಿ ಭಾಗವಹಿಸಿದ್ದರು. ಎಪಿ ವರದಿಯ ಪ್ರಕಾರ, ಈ ಸಂದರ್ಭದಲ್ಲಿಎಲ್ಲಾ ಅಭ್ಯರ್ಥಿಗಳು ಇಸ್ರೇಲ್, ಚೀನಾ ಮತ್ತು ರಷ್ಯಾ-ಉಕ್ರೇನ್ ಯುದ್ಧದಲ್ಲಿ ತಮ್ಮ ವಿದೇಶಾಂಗ ನೀತಿಗಳನ್ನು ಚರ್ಚಿಸಿದರು. ಆದಾಗ್ಯೂ, ಈ ಚರ್ಚೆಯ ಹೆಚ್ಚಿನ ಭಾಗವು ಸ್ನೇಹಪರವಾಗಿಯೇ ಉಳಿದಿತ್ತು. 38 ವರ್ಷದ ವಿವೇಕ್ ರಾಮಸ್ವಾಮಿ ಓಹಿಯೋದಲ್ಲಿ ಜನಿಸಿದ್ದರು. ಅವರ ಪೋಷಕರು ಭಾರತದಿಂದ ವಲಸೆ ಬಂದವರು. ವಿವೇಕ್ ಓದಿದ್ದು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ. ಅವರು ಯೇಲ್‌ನಲ್ಲಿ ಓದುತ್ತಿರುವಾಗ ಅಪೂರ್ವ ಅವರನ್ನು ಭೇಟಿಯಾದರು. 2015ರಲ್ಲಿ ಇಬ್ಬರೂ ಮದುವೆಯಾಗಿದ್ದರು.

ಅಮೆರಿಕ ಅಧ್ಯಕೀಯ ಚುನಾವಣೆ: ಭಾರತೀಯ ಮೂಲದ ವಿವೇಕ್‌ 2ನೇ ಸ್ಥಾನಕ್ಕೆ, ಟ್ರಂಪ್‌ಗೆ ಶಿಕ್ಷೆಯಾದ್ರೆ ಅವಕಾಶ?

2014 ರಲ್ಲಿ ಅವರು ತಮ್ಮದೇ ಆದ ಜೈವಿಕ ತಂತ್ರಜ್ಞಾನ ಕಂಪನಿಯಾದ ರೋವಂಟ್ ಸೈನ್ಸಸ್ ಅನ್ನು ಸ್ಥಾಪಿಸಿದರು, ಇದು ದೊಡ್ಡ ಕಂಪನಿಗಳಿಂದ ಆ ಔಷಧಿಗಳಿಗೆ ಪೇಟೆಂಟ್‌ಗಳನ್ನು ಖರೀದಿಸಿತು. ರಾಮಸ್ವಾಮಿ ಅವರು 2021 ರಲ್ಲಿ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದರು. 

ಮಕ್ಕಳನ್ನು ನೋಡಿಕೊಳ್ಳುವ ಕೆಲಸ. ವೇತನ ಮಾತ್ರ ಬರೋಬ್ಬರಿ 80 ಲಕ್ಷ!

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿಯಾಗುವ ರೇಸ್‌ನಲ್ಲಿರುವ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಶುಕ್ರವಾರ ಭಾವುಕರಾದರು. ಅಮೆರಿಕದ ಅಯೋವಾದಲ್ಲಿರುವ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ರಾಮಸ್ವಾಮಿ, ತಮ್ಮ ಮೊದಲ ಮಗು ಗರ್ಭಪಾತದಿಂದ ಸಾವು ಕಂಡಿತ್ತು ಎಂದು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!