ಇರಾನ್‌ಗೆ ಡೊನಾಲ್ಡ್ ಟ್ರಂಪ್‌ ಕಟು ಎಚ್ಚರಿಕೆ ಸಂದೇಶ: ಮಂಗಳವಾರದತ್ತ ಇಡೀ ವಿಶ್ವದ ಚಿತ್ತ

Published : Apr 06, 2026, 05:41 AM IST
Donald trump

ಸಾರಾಂಶ

ಹೋರ್ಮುಜ್ ಜಲಸಂಧಿ ತೆರೆಯಲು ಇರಾನ್‌ಗೆ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಸೋಮವಾರಕ್ಕೆ ಅಂತ್ಯಗೊಳ್ಳಲಿದೆ. ಒಂದು ವೇಳೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ, ಮಂಗಳವಾರದಂದು ದೇಶದ ತೈಲಾಗಾರಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಾಶಮಾಡಿ, ತೈಲವನ್ನು ವಶಪಡಿಸಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ವಾಷಿಂಗ್ಟನ್‌: ಹೋರ್ಮುಜ್‌ ಜಲಸಂಧಿ ತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಧಿಸಿದ್ದ ಗಡುವು ಸೋಮವಾರ ಮುಗಿಯಲಿದೆ. ಹೀಗಾಗಿ, ‘ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ ಮಂಗಳವಾರ ಇರಾನ್‌ನ ನಾಗರಿಕ ಮೂಲಸೌಕರ್ಯಗಳನ್ನು ಸಂಪೂರ್ಣ ನಾಶ ಮಾಡಿ ಅವರನ್ನು ನರಕಕ್ಕೆ ಅಟ್ಟುತ್ತೇವೆ ಹಾಗೂ ಎಲ್ಲ ತೈಲಾಗಾರಗಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳುತ್ತೇವೆ’ ಎಂದು ಭಾನುವಾರ ಟ್ರಂಪ್‌ ಗುಡುಗಿದ್ದಾರೆ.

ಅಶ್ಲೀಲ ಪದ ಬಳಕೆ

ಈ ಸಂಬಂಧ 2 ಅಶ್ಲೀಲ ಪದ ಬಳಸಿ ತಮ್ಮ ಟ್ರುತ್‌ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ ಹಾಗೂ ಬಳಿಕ ಫಾಕ್ಸ್‌ ನ್ಯೂಸ್‌ ಜತೆ ಮಾತನಾಡಿ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

‘ಮಂಗಳವಾರ ಇರಾನ್‌ನಲ್ಲಿ ವಿದ್ಯುತ್ ಸ್ಥಾವರ ದಿನ ಮತ್ತು ಸೇತುವೆ ದಿನ, ಎಲ್ಲವೂ ಒಂದೇ ದಿನದಲ್ಲಿ ನಡೆಯಲಿದೆ. (ಅಂದರೆ ಎಲ್ಲ ನಾಶ ಮಾಡ್ತೇವೆ ಎಂದರ್ಥ). ಏ ಹುಚ್ಚರೇ... ಫ** ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕದಲ್ಲಿ ವಾಸಿಸುವಿರಿ. ನೋಡ್ತಾ ಇರಿ’ ಎಂದಿದ್ದಾರೆ ಹಾಗೂ ತಮ್ಮ ಪೋಸ್ಟ್‌ನ ಕೊನೆಯಲ್ಲಿ ಅಲ್ಲಾಹುವಿನ ಹೆಸರು ಬರೆದಿದ್ದಾರೆ. ಬಳಿಕ ಫಾಕ್ಸ್‌ ನ್ಯೂಸ್ ಜತೆ ಮಾತನಾಡಿ, ‘ಅವರು ಬೇಗನೆ ಒಪ್ಪಂದ ಮಾಡಿಕೊಳ್ಳದಿದ್ದರೆ, ಎಲ್ಲವನ್ನೂ ಸ್ಫೋಟಿಸಿ ತೈಲವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ’ ಎಂದಿದ್ದಾರೆ.

ಮತ್ತೆ ಬೆಂಕಿಯ ಮಾತುಗಳನ್ನಾಡಿದ ಟ್ರಂಪ್

ಟ್ರಂಪ್ 2 ವಾರಗಳ ಹಿಂದೆಯೇ ದಾಳಿಗಳ ಬೆದರಿಕೆ ಹಾಕಿದ್ದರು, ಆದರೆ ಜಲಮಾರ್ಗವನ್ನು ಮತ್ತೆ ತೆರೆಯಲು ಇನ್ನೊಂದು ಬಾರಿ ಗಡುವನ್ನು ವಿಸ್ತರಿಸಿ, ಇರಾನ್‌ ಜತೆ ಮಾತುಕತೆಗಳಲ್ಲಿ ಸಕಾರಾತ್ಮಕ ಚಿಹ್ನೆಗಳು ಕಂಡುಬಂದಿವೆ ಎಂದಿದ್ದರು. ಆದರೆ ಮಾತುಕತೆಗೆ ಇರಾನ್‌ ಓಗೊಡದ ಕಾರಣ ಮತ್ತೆ ಬೆಂಕಿಯ ಮಾತು ಆಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಲಸಂಧಿ ಓಪನ್‌ಗೆ ಡೆಡ್‌ಲೈನ್, ಅಮೆರಿಕ ಅಧ್ಯಕ್ಷ ಪದವಿಗೆ ಅಪಮಾನಕರ ಪದ ಬಳಕೆ ಮಾಡಿದ ಟ್ರಂಪ್
ಪೆನ್​ ಒಳಗೆ ಸಂಪೂರ್ಣ ಸಿಲೇಬಸ್​ ಕಾಪಿ: ಪರೀಕ್ಷೆಯಲ್ಲಿ ಸಿಕ್ಕಬಿದ್ದ ಭಾವಿ ಲಾಯರ್!​ ಟ್ಯಾಲೆಂಟ್​ಗೆ​ ಪೊಲೀಸರೂ ಸುಸ್ತು