ಭಾರತದ ಎದುರು ಅಮೆರಿಕಾ ಫುಲ್ ಡಲ್: ಟ್ರಂಪ್

By Kannadaprabha NewsFirst Published Mar 2, 2020, 2:17 PM IST
Highlights

ಅಮೆರಿಕದ ಜನಸ್ತೋಮ ನೋಡಿ ನನಗೆ ಉತ್ಸಾಹ ಬರಲ್ಲ: ಟ್ರಂಪ್ |  ಅಹಮದಾಬಾದ್‌ನಲ್ಲಿ 1.4 ಲಕ್ಷ ಜನಸ್ತೋಮ ಉದ್ದೇಶಿಸಿ ಮಾತಾಡಿದೆ | ಅಷ್ಟುಜನ ಅಮೆರಿಕದಲ್ಲಿ ಸೇರಲ್ಲ |  ಭಾರತಕ್ಕೆ ನನ್ನದು ಸಾರ್ಥಕ ಪ್ರವಾಸ: ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್‌ (ಮಾ. 03): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಭಾರತ ಭೇಟಿಯ ಗುಂಗಿನಿಂದ ಇನ್ನೂ ಹೊರಬಂದಂತಿಲ್ಲ. ‘ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ತಾವು ಭಾಷಣ ಮಾಡಿದಾಗ ಸೇರಿದಷ್ಟುಜನ ಇನ್ನು ಬೇರೆಡೆ ಎಲ್ಲೂ ಸೇರಲಿಕ್ಕಿಲ್ಲ. ನನಗೆ ಇನ್ನು ಜನಸ್ತೋಮ ನೋಡಿ ಮೊದಲಿನಷ್ಟುಉತ್ಸಾಹ ಆಗಲಿಕ್ಕಿಲ್ಲ’ ಎಂದು ಹೇಳಿದ್ದಾರೆ.

ಶನಿವಾರ ಸುಮಾರು 15 ಸಾವಿರ ಜನರು ಸೇರಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತಾಡಿದ ಟ್ರಂಪ್‌, ‘ನಾನು ಭಾರತದ ಪ್ರಧಾನಿ ಮೋದಿ ಅವರ ಜತೆಗಿದ್ದೆ. ಉತ್ತಮ ಮನುಷ್ಯ. ಭಾರತದ ಜನರಿಗೆ ನನ್ನ ಮೇಲೆ ತುಂಬಾ ಅಕ್ಕರೆ. ಇಲ್ಲಿನ (ಅಮೆರಿಕದ) ಜನಸ್ತೋಮ ಉದ್ದೇಶಿಸಿ ಮಾತನಾಡಬೇಕೆಂಬುದು ನನ್ನ ಆಸೆ. ಆದರೆ 1.4 ಲಕ್ಷ (ಮೊಟೇರಾ ಕ್ರೀಡಾಂಗಣದಲ್ಲಿ ಸೇರಿದ್ದ ಜನ) ಜನರನ್ನು ಉದ್ದೇಶಿಸಿ ಭಾಷಣ ಮಾಡಿ ಇಲ್ಲಿಗೆ ಆಗಮಿಸಿರುವೆ. ಇಲ್ಲಿ ಎಷ್ಟುಜನರಿದ್ದಾರೆ? 15 (ಸಾವಿರ). ಹೀಗಾಗಿ ಅಲ್ಲಿ ಆದಷ್ಟುಉತ್ಸಾಹ ಇಲ್ಲಿ ಆಗಲ್ಲ. ನಿಮಗೆ ಅರ್ಥವಾಯಿತಲ್ಲ?’ ಎಂದರು.

‘ಭಾರತದಿಂದ ಬಂದ ಮೇಲೆ ಇನ್ನು ಜನಸ್ತೋಮ ನೋಡಿ ನನಗೆ ಉತ್ಸಾಹ ಬರುವುದಿಲ್ಲ. ಯೋಚಿಸಿ. ಭಾರತದಲ್ಲಿ 150 ಕೋಟಿ ಜನರಿದ್ದಾರೆ. ನಾವು 35 ಕೋಟಿ ಇದ್ದೇವೆ. ನಾನು ಈ ಜನರನ್ನೂ ಪ್ರೀತಿಸುತ್ತೇನೆ. ಆ ಜನಸ್ತೋಮವನ್ನೂ ಪ್ರೀತಿಸುತ್ತೇನೆ. ಅಲ್ಲಿನ ಜನರು ದೊಡ್ಡ ನಾಯಕನನ್ನು ಹೊಂದಿದ್ದಾರೆ. ಅಮೆರಿಕವನ್ನೂ ಪ್ರೀತಿಸುತ್ತಾರೆ. ಆದ್ದರಿಂದ ಅದು ಒಂದು ಸಾರ್ಥಕ ಪ್ರವಾಸವಾಯಿತು’ ಎಂದು ಪ್ರಶಂಸಿಸಿದರು.

ಮಾರ್ಚ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!