
ವಾಷಿಂಗ್ ಟನ್(ಸೆ. 09) ಅಮೆರಿಕದ Northrop Grumman ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಬಾಹ್ಯಾಕಾಶ ನಿಲ್ದಾಣ ರಿಸಪ್ಲೈ ಶಿಪ್‌ಗೆ ಭಾರತದ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಹೆಸರಿಟ್ಟು ಗೌರವ ಸೂಚಿಸಿದೆ.
NG-14 Cygnus ಬಾಹ್ಯಾಕಾಶ ನೌಕೆಗೆ ಕಲ್ಪನಾ ಹೆಸರನ್ನು ಇಡಲಾಗಿದೆ. ಕಂಪನಿ ಸಾಂಪ್ರದಾಯಿಕವಾಗಿ ಸಾಧಕರ ಹೆಸರನ್ನು ನೀಡುತ್ತ ಬಂದಿದೆ. ಸೆಪ್ಟೆಂಬರ್ 29 ರಂದು ವರ್ಜಿನಿಯಾ ಉಡವಾಣಾ ಸ್ಥಾವರದಿಂದ 'ಎಸ್‌ಎಸ್ ಕಲ್ಪನಾ ಚಾವ್ಲಾ' ಉಡಾವಣೆಯಾಗಲಿದೆ.
ಜಗತ್ತಿನ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ, ಏನಿದರ ವಿಶೇಷ?
ಭಾರತದ ಮೊಟ್ಟಮೊದಲ ಗಗನಯಾತ್ರಿ ಕಲ್ಪನಾ ಅವರಿಗೆ ನಾವು ಗೌರವ ಸಲ್ಲಿಕೆ ಮಾಡಿದ್ದೇವೆ. ಆಕೆ ನೀಡಿದ ಕೊಡುಗೆ ಶತಮಾನದವರೆಗೆ ಶಾಶ್ವತ ಎಂದು ಕಂಪನಿ ಟ್ವೀಟ್ ಮಾಡಿದೆ.
ನಾಸಾಕ್ಕೆ ಪೂರಕ ಉಪಕರಣಗಳನ್ನು ಒದಗಿಸುವ ಕಂಪನಿ 3,629 ಕೆಜಿಯ ನೌಕೆ ಆಕಾಶಕ್ಕೆ ಜಿಗಿಯಲಿದೆ. ಸಕಲ ಎಚ್ಚರಿಕೆಯೊಂದಿಗೆ ಸುರಕ್ಷಿತವಾಗಿ ಬಾಹ್ಯಾಕಾಶ ನಿಲ್ದಾಣ ಸೇರಲು ವ್ಯವಸ್ಥೆ ಮಾಡಿಕೊಳ್ಳಲು ಕಂಪನಿ ಆರಂಭಿಸಿದೆ.
ಕಲ್ಪನಾ ಚಾವ್ಲ ಮಾರ್ಚ್ 17, 1962 ರಲ್ಲಿ ಹರಿಯಾಣದಲ್ಲಿನ ಕರ್ನಾಲ್ ಎಂಬ ಊರಿನಲ್ಲಿ ಜನಿಸಿದರು. ಸ್ನಾತಕೋತ್ತರ ಶಿಕ್ಷಣವನ್ನು ಅಮೆರಿಕಾದಲ್ಲಿ ಪಡೆದು ಅಲ್ಲಿನ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು.
2003 ರ ಫೆಬ್ರವರಿ 1 ರಂದು ಕೊಲಂಬಿಯಾ ಬಾಹ್ಯಾನೌಕೆ ಭೂಮಿಗೆ ಮರಳುವಾಗ,ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.ಈ ನೌಕೆಯಲ್ಲಿ ಇವರೊಂದಿಗೆ ಇತರ ಆರು ಗಗನಯಾನಿಗಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ