ನಾನು ಚುನಾವಣೆ ಗೆದ್ದಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್| ಸುಳ್ಳು ಆರೋಪ ಮಾಡಿದ್ದಕ್ಕೆ ಟ್ರಂಪ್ ಭಾಷಣ ಪ್ರಸಾರ ಅರ್ಧಕ್ಕೇ ನಿಲ್ಲಿಸಿದ ವಾಹಿನಿಗಳು!
ನ್ಯೂಯಾರ್ಕ್: ನಾನು ಚುನಾವಣೆ ಗೆದ್ದಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಕಿದ್ದ ಸುಳ್ಳು ಪೋಸ್ಟ್‌ಗಳನ್ನು ಫೇಸ್ಬುಕ್ ಹಾಗೂ ಟ್ವೀಟರ್ ಅಳಿಸಿ ಹಾಕಿದ ಬಳಿಕ, ಇದೀಗ ಟ್ರಂಪ್ ಅವರ ಭಾಷಣದ ನೇರ ಪ್ರಸಾರವನ್ನೇ ಅಮೆರಿಕ ಸುದ್ದಿವಾಹಿನಿಗಳು ಅರ್ಧಕ್ಕೆ ಸ್ಥಗಿತಗೊಳಿಸಿದ ಘಟನೆ ನಡೆದಿದೆ.
undefined
ಗುರುವಾರ ಶ್ವೇತ ಭವನದಲ್ಲಿ ಮಾತನಾಡಿದ ಟ್ರಂಪ್, ‘ಇಡೀ ಅಧ್ಯಕ್ಷೀಯ ಚುನಾವಣೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಮತ ಎಣಿಕೆಯಲ್ಲಿ ಅಕ್ರಮವೆಸಗಲಾಗುತ್ತಿದೆ. ತಮಗೆ ಬಂದಿರುವ ಮತಗಳನ್ನು ಕದಿಯಲಾಗುತ್ತಿದೆ. ಇದರಲ್ಲಿ ಸಿರಿವಂತರು, ಮಾಧ್ಯಮಗಳು ಕೈಜೋಡಿಸಿವೆ. ಹೀಗಾಗಿ ನಾವು ಕಾನೂನಿನ ಮೊರೆ ಹೋಗುತ್ತೇವೆ’ ಎಂದು ಟ್ರಂಪ್ ಹೇಳುತ್ತಿದ್ದಂತೆ ಎಬಿಸಿ, ಸಿಬಿಎಸ್ ಮತ್ತು ಎನ್‌ಬಿಸಿ ವಾಹಿನಿಗಳು ನೇರ ಪ್ರಸಾರವನ್ನು ಸ್ಥಗಿತಗೊಳಿಸಿದವು. ಟ್ರಂಪ್ ಹೇಳಿಕೆಯಿಂದ ತುಸು ಸಿಟ್ಟಾದ ಎಂಎಸ್‌ಎನ್‌ಬಿಸಿ ವಾಹಿನಿ ಮೊದಲು ನೇರ ಪ್ರಸಾರವನ್ನು ಸ್ಥಗಿತಗೊಳಿಸಿತು. ಆದರೆ ಫಾಕ್ಸ್ ನ್ಯೂಸ್ ಮತ್ತು ಸಿಎನ್‌ಎನ್ ವಾಹಿನಿಗಳು ಮಾತ್ರ ಟ್ರಂಪ್ ಅವರ ಪೂರ್ಣ ಮಾತುಗಳನ್ನು ಪ್ರಸಾರ ಮಾಡಿದವು.
ಟ್ರಂಪ್ ಅವರ ಈ ಹೇಳಿಕೆಯನ್ನೇ ಅಮೆರಿಕದ ಅನೇಕ ಸುದ್ದಿ ವಾಹಿನಿಗಳು ಟೀಕಿಸಿವೆ. ಟ್ರಂಪ್ ಸೋಲುವ ಮುನ್ಸೂಚನೆ ಹಿನ್ನೆಲೆಯಲ್ಲಿ ಈಗ ಹೀಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿವೆ