US Green Card : ಭಾರತೀಯರಿಗೆ ಗುಡ್ ನ್ಯೂಸ್.. ಗ್ರೀನ್‌ಕಾರ್ಡ್‌ ಮಿತಿ ನಿಯಮ ರದ್ದು!

Published : Apr 08, 2022, 08:38 AM IST
US Green Card : ಭಾರತೀಯರಿಗೆ ಗುಡ್ ನ್ಯೂಸ್.. ಗ್ರೀನ್‌ಕಾರ್ಡ್‌ ಮಿತಿ ನಿಯಮ ರದ್ದು!

ಸಾರಾಂಶ

* ದೇಶವಾರು ಗ್ರೀನ್‌ಕಾರ್ಡ್‌ ಮಿತಿ ನಿಯಮ ರದ್ದು ಮಸೂದೆ ಸಮ್ಮತಿ * ಮಿತಿ ತೆರವಿನಿಂದ ಅಮೆರಿಕದಲ್ಲಿನ ಭಾರತೀಯ ಟೆಕ್ಕಿಗಳಿಗೆ ಲಾಭ * ಕುಟುಂಬ ಆಧಾರಿತ ವಲಸಿಗೆ ನೀಡುವ ಕಾರ್ಡ್ * ಲಕ್ಷಾಂತರ ವಲಸಿಗ ಭಾರತೀಯರಿಗೆ ಶೀಘ್ರವೇ ಗ್ರೀನ್‌ಕಾರ್ಡ್‌ ಸಿಗುವ ಸುಳಿವು

ವಾಷಿಂಗ್ಟನ್‌ (ಏ. 08) ಉದ್ಯೋಗ ಆಧರಿತ ವಲಸಿಗರಿಗೆ ಗ್ರೀನ್‌ ಕಾರ್ಡ್‌ (Green Card) ವಿತರಣೆ ವೇಳೆ ಇದುವರೆಗೆ ಜಾರಿಯಲ್ಲಿದ್ದ ದೇಶವಾರು ಮಿತಿಯನ್ನು ತೆಗೆದು ಹಾಕಲು ಮತ್ತು ಕುಟುಂಬ ಆಧರಿತ ವಲಸಿಗರಿಗೆ ನೀಡುವ ದೇಶವಾರು ಗ್ರೀನ್‌ಕಾರ್ಡ್‌ ಮಿತಿಯನ್ನು ಶೇ.7ರಿಂದ ಶೇ.15ಕ್ಕೆ ಹೆಚ್ಚಿಸುವ ಮಹತ್ವದ ಮಸೂದೆಯನ್ನು ಅಮೆರಿಕದ (USA) ಪ್ರಮುಖ ಸಂಸದೀಯ ಸಮಿತಿಯೊಂದು ಅನುಮೋದಿಸಿದೆ.

ಅನುಮೋದನೆಗೊಂಡ ಮಸೂದೆ ಕಾಯ್ದೆ ರೂಪ ಪಡೆದುಕೊಂಡರೆ, ಅಮೆರಿಕದ ಗ್ರೀನ್‌ಕಾರ್ಡ್‌ ಪಡೆಯಲು ಸರದಿಯಲ್ಲಿರುವ ಲಕ್ಷಾಂತರ (India) ಭಾರತೀಯ ಟೆಕ್ಕಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಲಾಭವಾಗಲಿದೆ.

ಸದನದ ನ್ಯಾಯಾಂಗ ಸಮಿತಿಯು ಬುಧವಾರ ರಾತ್ರಿ ಕಾನೂನುಬದ್ಧ ಉದ್ಯೋಗಕ್ಕಾಗಿ ಗ್ರೀನ್‌ಕಾರ್ಡ್‌ಗಳ ಸಮಾನ ಲಭ್ಯತೆ (ಈಗಲ್‌)ಕಾಯ್ದೆಯನ್ನು 22-14 ಮತಗಳ ಅಂತರದಿಂದ ಅಂಗೀಕಾರ ಮಾಡಿದೆ. ಇದರಿಂದಾಗಿ ಉದ್ಯೋಗಕ್ಕಾಗಿ ಅಮೆರಿಕಕ್ಕೆ ತೆರಳಿ ಗ್ರೀನ್‌ ಕಾರ್ಡ್‌ ಮೂಲಕ ಶಾಶ್ವತ ಕಾನೂನುಬದ್ಧ ನಿವಾಸಕ್ಕಾಗಿ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿರುವ ಲಕ್ಷಾಂತರ ವಲಸಿಗ ಭಾರತೀಯರಿಗೆ ಶೀಘ್ರವೇ ಗ್ರೀನ್‌ಕಾರ್ಡ್‌ ಸಿಗುವ ಸುಳಿವು ಲಭ್ಯವಾಗಿದೆ. ಮಸೂದೆಯನ್ನು ಶೀಘ್ರ ಸದನದಲ್ಲಿ ಚರ್ಚೆ ಹಾಗೂ ಮತಕ್ಕಾಗಿ ಕಳುಹಿಸಲಾಗುತ್ತಿದ್ದು, ಅಮೆರಿಕದ ಮೇಲ್ಮನೆ ಸೆನೆಟ್‌ ಇದನ್ನು ಅಂಗೀಕಾರಗೊಳಿಸಿದ ನಂತರ ರಾಷ್ಟಾ್ರಧ್ಯಕ್ಷರ ಅಂಕಿತಕ್ಕಾಗಿ ಕಳುಹಿಸಲಾಗುವುದು. ನಂತರವೇ ಇದು ಅಧಿಕೃತ ಕಾಯ್ದೆಯಾಗಿ ಜಾರಿಗೆ ಬರಲಿದೆ.

5G, ಇ-ಪಾಸ್‌ಪೋರ್ಟ್ ಸೇವೆ: ಭಾರತದ‌ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್!

ದುಡ್ಡಿದ್ದವರಿಗೆ ಬಹಳ ಸುಲಭ:  ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಿ ಉದ್ಯೋಗ ಕೈಗೊಳ್ಳಬೇಕು ಎಂದು ಅನೇಕ ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಭಾರತೀಯರಿಗೆ ಸಿಹಿ ಸುದ್ದಿ ಸಿಕ್ಕಿತ್ತು.. ಹೆಚ್ಚುವರಿ ಶುಲ್ಕವನ್ನು ಪಾವತಿಸಿದರೆ ಆದ್ಯತೆಯ ಮೇರೆಗೆ ಗ್ರೀನ್‌ ಕಾರ್ಡ್‌ ನೀಡುವ ಹೊಸ ಮಸೂದೆಯೊಂದನ್ನು ರೂಪಿಸಲಾಗಿತ್ತು.

ನೂತನ ಮಸೂದೆಯ ಪ್ರಕಾರ, ಒಂದು ವೇಳೆ ಗ್ರೀನ್‌ ಕಾರ್ಡ್‌ ಪಡೆಯಲು ಆದ್ಯತಾ ದಿನಾಂಕಕ್ಕಿಂತ 2 ವರ್ಷ ಕಾದವರು, 3.70 ಲಕ್ಷ ರು. (5 ಸಾವಿರ ಡಾಲರ್‌ ) ಹೆಚ್ಚುವರಿ ಶುಲ್ಕವನ್ನು ಪಾವತಿಸಿದರೆ, ಸಂಖ್ಯೆಗಳ ಮಿತಿಯನ್ನು ಪರಿಗಣಿಸದೇ ಗ್ರೀನ್‌ ಕಾರ್ಡ್‌ಗೆ ಅರ್ಹತೆಗಿಟ್ಟಿಸಲಿದ್ದಾರೆ. ಅಂದರೆ ಹೆಚ್ಚುವರಿ ಶುಲ್ಕ ಪಾವತಿಸಲು ಸಿದ್ಧವಿದ್ದವರಿಗೆ ಗ್ರೀನ್‌ ಕಾರ್ಡ್‌ ಪಡೆಯಲು ಇರುವ ಮಿತಿ ರದ್ದಾಗಲಿದೆ ಎಂದು ಹೇಳಲಾಗಿತ್ತು. ಇದೀಗ ಈ ನಿಯಮದಲ್ಲಿಯೂ ಮತ್ತಷ್ಟು ಸರಳೀಕರಣ ಮಾಡುವ ಸಾಧ್ಯತೆ ಕಾಣುತ್ತಿದೆ.

ಇ ಪಾಸ್‌ ಪೋರ್ಟ್ ಎಂದರೆ ಏನು? ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಾರಿಯ ಬಜೆಟ್‌ ನಲ್ಲಿ ಇ-ಪಾಸ್‌ಪೋರ್ಟ್‌ (E-Passport) ವಿಚಾರ ಪ್ರಸ್ತಾಪ ಮಾಡಿದ್ದರು.  ಎಂಬೆಡೆಡ್ ಚಿಪ್ ತಂತ್ರಜ್ಞಾನದೊಂದಿಗೆ ಸರ್ಕಾರ ಇ-ಪಾಸ್‌ಪೋರ್ಟ್‌ಗಳನ್ನು ಹೊರತರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಘೋಷಿಸಿದ್ದರು.

ನಾಗರಿಕರ ಅನುಕೂಲಕ್ಕಾಗಿ 2022-23 ರಲ್ಲಿ ಇ-ಪಾಸ್‌ಪೋರ್ಟ್‌ಗಳ ವಿತರಣೆಯನ್ನು ಹೊರತರಲಾಗುವುದು" ಎಂದು ಸೀತಾರಾಮನ್ ಇಂದು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದರು. ಇದಕ್ಕೂ ಮೊದಲು, ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಭಟ್ಟಾಚಾರ್ಯ ಅವರು ಟ್ವಿಟರ್‌ನಲ್ಲಿ ಭಾರತವು ಶೀಘ್ರದಲ್ಲೇ ಸುರಕ್ಷಿತ ಬಯೋಮೆಟ್ರಿಕ್ ಡೇಟಾದೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ಪಡೆಯಲಿದೆ  ಎಂದಿದ್ದರು.
 

 

 

 

 



 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ