
ವಾಷಿಂಗ್ಟಟನ್(ಆ.18): ಅಮೆರಿಕ ಕಳೆದ 20 ವರ್ಷಗಳಲ್ಲಿ ಅಷ್ಘಾನಿಸ್ತಾನ ಸೇನೆಯನ್ನು ಬಲಪಡಿಸಲು ಸುಮಾರು 61 ಲಕ್ಷ ಕೋಟಿಗಳನ್ನು ವೆಚ್ಚ ಮಾಡಿದೆ. ಆದರೆ ಆಫ್ಘನ್ ಸೇನೆ ಹೋರಾಟ ನೀಡದೇ ತಾಲಿಬಾನಿಗಳಿಗೆ ಶರಣಾಗಿದೆ. ಇದರಿಂದಾಗಿ ಅಮೆರಿಕದ ಹೂಡಿಕೆ ತಾಲಿಬಾನಿಗಳಿಗೆ ಲಾಭವಾಗಿ ಪರಿಣಮಿಸಿದೆ.
ತಾಲಿಬಾನಿಗಳು ಕೇವಲ ಅಷ್ಘಾನಿಸ್ತಾನದಲ್ಲಿ ರಾಜಕೀಯ ಬಲ ಪಡೆದದ್ದಷ್ಟೇ ಅಲ್ಲದೇ ಅಮೆರಿಕ ಪೂರೈಸಿದ್ದ ಬಂದೂಕುಗಳು, ಸ್ಫೋಟಕಗಳು, ಹೆಲಿಕಾಪ್ಟರ್ ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಹ ಪಡೆದುಕೊಂಡಿದ್ದಾರೆ. ಕೆಲವೊಂದು ಕಡೆಗಳಲ್ಲಿ ಆಫ್ಘನ್ ಸೇನೆ ಕನಿಷ್ಟಪ್ರತಿರೋಧವನ್ನೂ ತೋರದೇ ತಾಲಿಬಾನಿಗಳಿಗೆ ಶರಣಾಗಿದೆ.
ಹಣಕಾಸಿನ ನೆರವು ನೀಡಿದ ಅಮೆರಿಕಕ್ಕೆ ಸುಸಜ್ಜಿತವಾದ ಆಫ್ಘನ್ ಸೈನ್ಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಆದರೆ ಅಮೆರಿಕಾ ಸಾಕಷ್ಟುಯುದ್ದೋಪಕರಣಗಳನ್ನು ಅಷ್ಘಾನಿಸ್ತಾನಕ್ಕೆ ನೀಡಿದೆ. ಈಗ ಅವೆಲ್ಲವೂ ತಾಲಿಬಾನಿಗಳ ವಶವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ