ಬರಾಕ್ ಒಬಾಮ ಬಂಧನದ ಎಐ ವಿಡಿಯೋ ಹಂಚಿಕೊಂಡ ಡೋನಾಲ್ಡ್ ಟ್ರಂಪ್, ಭಾರಿ ವಿವಾದ

Published : Jul 21, 2025, 07:13 PM IST
Donald Trump Posts AI Video Of Barack Obama's Arrest, Seen Behind Bars

ಸಾರಾಂಶ

ಅಮೆರಿದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಬಂಧನ ಎಐ ವಿಡಿಯೋವನ್ನು ಡೋನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ. ಎಫ್‌ಬಿಐ ಅಧಿಕಾರಿಗಳು ಒಬಾಮ ಬಂಧಿಸುತ್ತಿರುವ ಈ ವಿಡಿಯೋ ಮೂಲಕ ವಿವಾದ ಮಾತ್ರವಲ್ಲ ಕೆಲ ಸೂಚನೆ ನೀಡಿದ್ದಾರಾ ಅನ್ನೋ ಅನುಮಾನಗಳು ಮೂಡಿವೆ.

ವಾಶಿಂಗ್ಟನ್ (ಜು.21) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ತೆಗೆದುಕೊಂಡ ಒಂದೊಂದು ನಿರ್ಧಾರಗಳು ಭಾರಿ ವಿವಾದಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲ ಟ್ರಂಪ್ ಹೇಳಿಕೆ, ಸ್ಪಷ್ಟನೆ ಕೂಡ ವಿವಾದಕ್ಕೆ ಕಾರಣವಾಗಿದೆ. ಇದೀಗ ಡೋನಾಲ್ಡ್ ಟ್ರಂಪ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ಎಫ್‌ಬಿಐ ಅಧಿಕಾರಿಗಳು ಬಂದಿಸುತ್ತಿರುವ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವಿಡಿಯೋವನ್ನು ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಭಾರಿ ವಿವಾದ ಸಷ್ಟಿಯಾಗಿದೆ. ಈ ವಿಡಿಯೋ ಮೂಲಕ ಟ್ರಂಪ್ ಕೆಲ ಸೂಚನೆ ಹಾಗೂ ಸುಳಿವು ನೀಡಿದ್ರಾ ಅನ್ನೋ ಅನುಮಾನ ಮೂಡಿದೆ.

ಓವಲ್ ಕಚೇರಿಯಲ್ಲಿ ಒಬಾಮ ಬಂಧನ ವಿಡಿಯೋ

ಡೋನಾಲ್ಡ್ ಟ್ರಂಪ್ ಹಂಚಿಕೊಂಡ ವಿಡಿಯೋದಲ್ಲಿ ಎಫ್‌ಬಿಐ ಅಧಿಕಾರಿಗಳು ದಿಢೀರ್ ಓವಲ್ ಕಚೇರಿಗೆ ಎಂಟ್ರಿಕೊಟ್ಟಿದ್ದಾರೆ. ಡೋನಾಲ್ಡ್ ಟ್ರಂಪ್ ಹಾಗೂ ಓಬಾಮ ಮಾತುಕತೆಯಲ್ಲಿರುವಾಗ ಎಂಟ್ರಿಕೊಟ್ಟ ಅಧಿಕಾರಿಗಳು ಓಬಾಮ್ ಹಿಡಿದು ನೆಲಕ್ಕೆ ಮುಖ ಮಾಡಿ ಮಲಗುವಂತೆ ಹೇಳಿ ಕೈಗಳಿಗೆ ಕೋಳ ತೊಡಸಿದ್ದಾರೆ. ಒಬಾಮ ಬಂಧಿಸಿ ಕರೆದೊಯ್ಯುತ್ತಿರುವ ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಸೃಷ್ಟಿಸಿದ ವಿಡಿಯೋ ಇದಾಗಿದೆ.

ಯಾರೂ ಕಾನೂನಿಂಗಿಂತ ದೊಡ್ಡವರಲ್ಲ

ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಹೇಳುತ್ತಿರುವಾಗಲೇ ಈ ಬಂಧನವಾಗುವಂತೆ ವಿಡಿಯೋ ನಿರ್ಮಿಸಲಾಗಿದೆ. ಈ ವಿಡಿಯೋವನ್ನು ಡೋನಾಲ್ಡ್ ಟ್ರಂಪ್ ತಮ್ಮ ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

 

ಡೋನಾಲ್ಡ್ ಟ್ರಂಪ್ ವಿಡಿಯೋ ವಿವಾದ

ಡೋನಾಲ್ಡ್ ಟ್ರಂಪ್ ಎಐ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ವಿವಾದಗಳು ಸೃಷ್ಟಿಯಾಗಿದೆ. ಬರಾಕ್ ಒಬಾಮ ಬಂಧನ ವಿಡಿಯೋ ಎಐ ವಿಡಿಯೋ ಹಂಚಿಕೊಂಡಿದ್ದು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಅಮೆರಿಕದಲ್ಲಿ 2ನೇ ಬಾರಿಗೆ ಅಧ್ಯಕ್ಷರಾದ ಡೋನಾಲ್ಡ್ ಟ್ರಂಪ್, ಅಮೆರಿಕ ಇತಿಹಾಸದಲ್ಲೇ ಕಂಡು ಕೇಳರಿಯದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿದೆ.

ಡೋನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು ಎಐ ವಿಡಿಯೋ. ಆದರೆ ಈ ವಿಡಿಯೋ ಎಐ ಅನ್ನೋದನ್ನು ಸ್ಪಷ್ಟಪಡಿಸಿಲ್ಲ. ಎಐ ವಿಡಿಯೋಗಳನ್ನು ಹಂಚಿಕೊಳ್ಳವು ಮೂಲಕ ಡೋನಾಲ್ಡ್ ಟ್ರಂಪ್ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಮರಿಕ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಪೋಸ್ಟ್ ಮಾಡುತ್ತಿರುವುದು ಗೌರವ ತರುವ ವಿಚಾರವಲ್ಲ. ಕನಿಷ್ಠ ಎಐ ವಿಡಿಯೋ ಎಂದು ಉಲ್ಲೇಖಿಸಬೇಕಿತ್ತು. ಅದು ಕೂಡ ಮಾಡಿಲ್ಲ ಎಂದು ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌