ಅಪರಿಚಿತನ ಗುಂಡಿನ ದಾಳಿಗೆ ಪಾಕಿಸ್ತಾನ ಕಂಗಾಲು, ಉಗ್ರ ಹಫೀಸ್ ಸಯಿದ್, ಮಸೂದ್ ರಹಸ್ಯ ಸ್ಥಳಕ್ಕೆ ಶಿಫ್ಟ್

Published : Nov 15, 2026, 07:50 PM IST
hafiz saeed masood azhar pakistan safe houses unknown gunmen operation sindoor isi security

ಸಾರಾಂಶ

ಪಾಕಿಸ್ತಾನದಲ್ಲಿ ಅಪರಿಚಿತ ನಡೆಸುತ್ತಿರುವ ದಾಳಿಗೆ ಒಂದರ ಮೇಲೊಂದರಂತೆ ಉಗ್ರರ ಕತೆ ಮುಗಿಯುತ್ತಿದೆ. ಧುರಂಧರ್‌ನ ಅಟ್ಟಹಾಸಕ್ಕೆ ಪ್ರಮುಖ ಉಗ್ರರ ಆತಂಕ ಹೆಚ್ಚುತ್ತಿದೆ. ಇದರ ಬೆನ್ನಲ್ಲೇ ಮೋಸ್ಟ್ ವಾಂಟೆಡ್ ಉಗ್ರ ಹಫೀಸ್ ಸಯಿದ್‌ನ ಹಾಗೂ ಮಸೂದ್ ಅಜರ್ ರಹಸ್ಯ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.

ಇಸ್ಲಾಮಾಬಾದ್ (ನ.15) ಭಾರತದ ಮೇಲೆ ದಾಳಿ ನಡೆಸಿ ಪಾಕಿಸ್ತಾನದಲ್ಲಿ ಹಾಯಾಗಿರುವ ಪ್ರಮುಖ ಉಗ್ರರ ಒಬ್ಬರ ಹಿಂದೆ ಒಬ್ಬರು ಅಪರಿಚಿತನ ಗುಂಡಿನ ದಾಳಿಗೆ ಬಲಿಯಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಇದೀಗ ಉಗ್ರರು ಯಾವ ಭಯವಿಲ್ಲದೆ ಹೊರಗಡೆ ಓಡಾಡಲು ಸಾಧ್ಯವಾಗುತ್ತಿಲ್ಲ. ಯಾವ ಕ್ಷಣದಲ್ಲಿ ಧುರಂಧರನ್‌ ದಾಳಿಯಾಗುತ್ತೆ ಅನ್ನೋ ಸುಳಿವೇ ಇಲ್ಲ. ಭಾರತದ ಮೇಲೆ ಸಂಚು ರೂಪಿಸಿದ, ದಾಳಿ ನಡೆಸಿದ ಪ್ರಮುಖರು ಹತ್ಯೆಯಾಗುತ್ತಿದ್ದಾರೆ. ಇದು ಪಾಕಿಸ್ತಾನದ ನಿದ್ದೆಗೆಡಿಸಿದೆ. ಇದೀಗ ಲಷ್ಕರ್ ಈ ತೈಬಾ ಮುಖ್ಯಸ್ಥ ಹಫೀಸ್ ಸಯೀದ್‌ ಆತಂಕ ಹೆಚ್ಚಾಗಿದೆ. ತನ್ನನ್ನು ಅಪರಿಚಿತ ಟಾರ್ಗೆಟ್ ಮಾಡಿದ್ದಾನೆ ಅನ್ನೋ ಖಚಿತ ಸುಳಿವು ಸಿಗುತ್ತಿದ್ದಂತೆ ಮೋಸ್ಟ್ ವಾಂಟೆಡ್ ಉಗ್ರನ ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಲಷ್ಕರ್ ಮುಖ್ಯಸ್ಥನ ಜೊತೆಗೆ ಜೈಶ್ ಇ ಮೊಹಮ್ಮದ್ ಸಂಸ್ಥಾಪಕ ಮಸೂದ್ ಅಜರ್ ಇಬ್ಬರೂ ಕೂಡ ರಹಸ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಪಾಕಿಸ್ತಾನದ ಗುಪ್ತಚರ ವಿಭಾಗ ಐಎಸ್ಐ ಈ ಉಗ್ರರನ್ನು ಸ್ಥಳಾಂತರಿಸಿದೆ. ಹಫೀಸ್ ಸಯೀದ್‌ನ ಲಾಹೋರ್ ಟೌನ್‌ನ ಮನೆಯಿಂದ ರಾವಲ್ಪಿಂಡಿಯ ಗ್ಯಾರಿಸನ್ ಗ್ರೌಂಡ್ ಬಳಿಯ ರಹಸ್ಯ ನಿವಾಸಕ್ಕೆ ಸ್ಥಳಾಂತರ ಮಾಡಲಾಗಿದೆ. ಪಾಕಿಸ್ತಾನದ ಸೇನಾ ಪ್ರಧಾನ ಕಟ್ಡಡದ ವಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಮಸೂಜ್ ಅಜರ್‌ನ ಸಿಂಧ್ ಪ್ರಾಂತ್ಯದಲ್ಲಿರುವ ರಹಸ್ಯ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಾಗಿದೆ.

ಭಾರತದ ಮೇಲಿನ ದಾಳಿಗೆ ಸಣ್ಣ ಸಹಾಯ ಮಾಡಿದ ಉಗ್ರರನ್ನು ಹುಡುಕಿ ಹುಡುಕಿ ಅಪರಿಚಿತ ದಾಳಿ ನಡೆಸುತ್ತಿದ್ದಾನೆ. ಭಾರಿ ಭದ್ರತೆಯಲ್ಲಿರುವ ಪ್ರಮುಖ ಉಗ್ರರು ಕೊಂಚ ಸೇಫ್ ಆಗಿದ್ದಾರೆ. ಆದರೆ ಆತಂಕ ಹೆಚ್ಚಾಗುತ್ತಲೇ ಇದೆ. ಕಾರಣ ಅಪರಿಚಿತ ಗನ್‌ಮ್ಯಾನ್ ಯಾರು, ಆತ ಎಲ್ಲಂದ ಆಗಮಿಸಿ ಗುಂಡಿನ ದಾಳಿ ನಡೆಸುತ್ತಾನೆ ಅನ್ನೋ ಮಾಹಿತಿಯೇ ಇರುವುದಿಲ್ಲ. ಹೀಗಾಗಿ ಉಗ್ರರು ಇದೀಗ ಜೀವಭಯದಿಂದ ಇರುವಂತಾಗಿದೆ.

ಅಪರಿಚಿತನ ಜೊತೆಗೆ ಆಪರೇಶನ್ ಸಿಂಧೂರ್ ಭಯ

ಒಂದೆಡೆ ಅಪರಿಚಿತನ ಗುಂಡಿನ ದಾಳಿಯಾದರೆ ಮತ್ತೊಂದೆಡೆ ಭಾರತೀಯ ಸೇನೆಯ ಆಪರೇಶನ್ ಸಿಂಧೂರ್ ಭಯ ತೀವ್ರಗೊಂಡಿದೆ. ಇತ್ತೀಚೆಗೆ ಕಾಶ್ಮರದ ಕುಲ್ಗಾಂನ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಬಳಿ ಉಗ್ರರ ದಾಳಿಯಾಗಿದೆ. ಈ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಆತಂಕ ತೀವ್ರಗೊಂಡಿದೆ. ಕಾರಣ ಭಾರತದ ಮೇಲಿನ ಯಾವುದೇ ಉಗ್ರ ದಾಳಿಯನ್ನು ಭಾರತ ಗಂಭೀರವಾಗಿ ಪರಿಗಣಿಸಲಿದೆ, ಇಷ್ಟೇ ಅಲ್ಲ ಯುದ್ಧ ಎಂದೇ ಪರಿಗಣಿಸಲಾಗುತ್ತದೆ ಎಂದು ಪೆಹಲ್ಗಾಂ ದಾಳಿ ಬಳಿ ಭಾರತ ಸ್ಪಷ್ಟಪಡಿಸಿತ್ತು. ಕಳೆದ ಬಾರಿ ಆಪರೇಶನ್ ಸಿಂಧೂರ್ ವೇಳೆ ಉಗ್ರರ ಮನೆಗಳು, ಅಡಗುತಾಣಗಳನ್ನು ಭಾರತ ಧ್ವಂಸಗೊಳಿಸಿತ್ತು.

ಇದೀಗ ಭಾರತ ಮತ್ತೊಂದು ಆಪರೇಶನ್ ಸಿಂಧೂರ್ ನಡೆಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನ ಐಎಸ್ಐ ಆತಂಕಗೊಂಡಿದೆ. ಹೀಗಾಗಿ ಉಗ್ರರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕಿಸ್ತಾನಕ್ಕೆ ಅಮೆರಿಕಾ ನೀಡಿದ ಹಣವೆಷ್ಟು? ಲೆಕ್ಕ ಬಿಚ್ಚಿಟ್ಟ ಭಟ್ಕಳದ ಅಳಿಯ ಅಬ್ದುಲ್ ಅಲ್-ಸಯೀದ್
9/11ರ ಉಗ್ರ ದಾಳಿ ಬಳಿಕ ಅಮೆರಿಕ ಮತ್ತೊಮ್ಮೆ ಅಲ್ಲೋಲ-ಕಲ್ಲೋಲ: ಎಲ್ಲಾ ವಿಮಾನ ಸ್ಥಗಿತ- ವಿಶ್ವಾದ್ಯಂತ ಪರದಾಟ