ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಗಾಝಾ ಮೇಲೆ ಮುಗಿಬಿದ್ದಿರುವ ಇಸ್ರೇಲ್ ತಕ್ಷಣವೇ ಕದನ ವಿರಾಮ ಘೋಷಿಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಅಂಗೀಕರಿಸಿದೆ. ಇದೇ ವೇಳೆ ಹಮಾಸ್ ಉಗ್ರರಿಗೂ ಒಂದು ಷರತ್ತು ವಿಧಿಸಿದೆ.
ನ್ಯೂಯಾರ್ಕ್(ಮಾ.25) ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಸಂಘರ್ಷ ಅಂತ್ಯಗೊಳಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಹತ್ವದ ಸಭೆ ನಡೆಸಿ ನಿರ್ಣಯ ಅಂಗೀಕರಿಸಿದೆ. ತಕ್ಷಣವೇ ಗಾಝಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದೇ ವೇಳೆ ಒತ್ತೆಯಾಳಾಗಿ ಇರಿಸಿಕೊಂಡಿರುವ ನಾಗರೀಕರನ್ನು ಹಮಾಸ್ ತಕ್ಷಣವೇ ಬಿಡುಗಡೆ ಮಾಡಬೇಕು. ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳ ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಕೈಗೊಂಡಿದೆ.
ಇದೇ ಮೊದಲ ಬಾರಿಗೆ ವಿಶ್ವಂಸ್ಥೆ ಭದ್ರತಾ ಮಂಡಳಿ ಕದನ ವಿಮಾನ ಘೋಷಣೆಗೆ ಆಗ್ರಹಿಸಿದೆ. ಭದ್ರತಾ ಮಂಡಳಿಯ ಎಲ್ಲಾ 14 ಸದಸ್ಯರು ಕದನ ವಿಮಾನ ಘೋಷಣೆಗೆ ಮತ ಚಲಾಯಿಸದರು. ಪವಿತ್ರ ರಂಜಾನ್ ತಿಂಗಳ ಕಾರಣ ತಕ್ಷಣವೇ ಕದನ ವಿಮಾನ ಘೋಷಿಸಬೇಕು ಎಂದು ಆಗ್ರಹಿಸಿದೆ. ಇದೇ ವೇಳೆ ಅಕ್ಟೋಬರ್ 7, 2023ರಂದು ಹಮಾಸ್ ಉಗ್ರರು ಏಕಾಏಕಿ ಇಸ್ರೇಲ್‌ಗೆ ನುಗ್ಗಿ ಮಾರಣಹೋಮ ನಡೆಸಿದ್ದರು. ಇಸ್ರೇಲ್ ನಾಗರೀಕರ ಮೇಲೆ ಗುಂಡಿನ ದಾಳಿ ನೆಡೆಸಿದ್ದರು.
ಇಸ್ರೇಲ್ ಹಮಾಸ್ ಯುದ್ಧಕ್ಕೆ ಮೊದಲ ಭಾರತೀಯ ಬಲಿ: ಕೇರಳದ ಮ್ಯಾಕ್ಸ್‌ವೆಲ್ ಸಾವು
ಇತ್ತೀಚೆಗೆ ಹಮಾಸ್ ನಡುವಿನ ಸಂಘರ್ಷ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಇದೇ ಮೊದಲ ಬಾರಿಗೆ ಗಾಜಾ ಯುದ್ಧದ ವಿಷಯದಲ್ಲಿ ತಟಸ್ಥ ಧೋರಣೆ ಕೈಬಿಟ್ಟು ತತ್ವಾಧಾರಿತವಾಗಿ ಮುನ್ನಡೆದಿದೆ. ಈಜಿಪ್ಟ್ ಮಂಡಿಸಿದ ಗೊತ್ತುವಳಿ ಪರವಾಗಿ 153 ದೇಶಗಳು ಒಪ್ಪಿಗೆ ಸೂಚಿಸಿದರೆ ಆಸ್ಟ್ರಿಯಾ, ಇಸ್ರೇಲ್ ಹಾಗೂ ಅಮೆರಿಕ ಸೇರಿದಂತೆ 10 ರಾಷ್ಟ್ರಗಳು ವಿರೋಧಿಸಿದವು. 23 ರಾಷ್ಟ್ರಗಳು ಸಭೆಗೆ ಗೈರಾಗಿದ್ದವು.
ಒತ್ತೆಯಾಳುಗಳ ಬಿಡುಗಡೆ ಇಸ್ರೇಲ್ ನವೆಂಬರ್ ತಿಂಗಳಲ್ಲಿ ಕೆಲ ದಿನಗಳ ಕಾಲ ಕದನ ವಿರಾಮ ಘೋಷಿಸಿತ್ತು. ಈ ವೇಳೆ ಇಸ್ರೇಲ್‌ನ 13 ಹಾಗೂ ಥಾಯ್ಲೆಂಡ್‌ನ 11, ಒಬ್ಬರ ಫಿಲಿಪ್ಪೀನಿ ಜನ ಸೇರಿದಂತೆ 24 ಒತ್ತೆಯಾಳುಗಳಯನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದರು.
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಯುದ್ಧದಲ್ಲಿ 7 ವಾರದ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರ ಕದನ ವಿರಾಮ ಜಾರಿಗೆ ಬಂದಿದೆ. 4 ದಿನದ ಕದನವಿರಾಮ ಅಂಗವಾಗಿ ಶುಕ್ರವಾರ ಇಸ್ರೇಲ್‌ನ 13 ಹಾಗೂ ಥಾಯ್ಲೆಂಡ್‌ನ 11, ಒಬ್ಬರ ಫಿಲಿಪ್ಪೀನಿ ಜನ ಸೇರಿದಂತೆ 24 ಒತ್ತೆಯಾಳುಗಳಯನ್ನು ಹಮಾಸ್ ಉಗ್ರರು ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನಾಪಡೆ 39 ಕೈದಿಗಳನ್ನು ಬಿಡುಗಡೆ ಮಾಡಿತ್ತು. ಒಪ್ಪಂದದ ಅನ್ವಯ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ರೆಡ್‌ಕ್ರಾಸ್ ಸಂಸ್ಥೆಗೆ ಒಪ್ಪಿಸಿದ್ದರು. ಬಳಿಕ ರೆಡ್‌ಕ್ರಾಸ್‌ನವರು ಗಾಜಾ-ಇಸ್ರೇಲ್ ಗಡಿಯಲ್ಲಿ ಅವರನ್ನು ಇಸ್ರೇಲ್ ವಶಕ್ಕೆ ಒಪ್ಪಿಸಿದ್ದರು.
ಹಮಾಸ್ ವಿರುದ್ಧ ಯುದ್ಧ, ಇಸ್ರೇಲ್ ವಶದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 4 ರೋಗಿಗಳು ಸಾವು
4 ದಿನಗಳ ಕದನ ವಿರಾಮ ಘೋಷಿಸಲಾಗಿತ್ತು. ಬಳಿಕ ಮತ್ತೆ ಕೆಲ ದಿನಗಳ ಕಾಲ ವಿಸ್ತರಿಸಲಾಗಿತ್ತು.ಇದೇ ವೇಳೆ ಹಮಾಸ್ ಒಟ್ಟು 50 ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿದ್ದರು. ಇತ್ತ ಇಸ್ರೇಲ್ 150 ಜನರ ಬಿಡುಗಡೆಗೆ ಸಮ್ಮತಿಸಿತ್ತು.. ಇದರಂತೆ ಒತ್ತೆಯಾಳುಗಳು ಹಾಗೂ ಕೈದಿಗಳ ಬಿಡುಗಡೆ ಮಾಡಲಾಗಿತ್ತು. ಯಾವುದೇ ಷರತ್ತುಗಳಿಲ್ಲದೇ ಒತ್ತೆಯಾಳುಗಳ ಬಿಡುಗಡೆ ಮಾಡಲು ಹಮಾಸ್ ನಿರಾಕರಿಸಿತ್ತು. ಹೀಗಾಗಿ ಕದನ ವಿರಾಮ ಮುರಿದು ಬಿದ್ದಿತ್ತು.