
ನವದೆಹಲಿ (ಏ.11): ಉಕ್ರೇನ್ (Ukraine) ಮತ್ತು ರಷ್ಯಾ (Russia) ನಡುವಿನ ಯುದ್ಧ ಇನ್ನೂ ನಡೆಯುತ್ತಿದೆ. ಈ ಯುದ್ಧದ ಮೊದಲ ದಿನದಿಂದ, ಉಕ್ರೇನ್ ಒಳಗಿನಿಂದ ಅನೇಕ ಕಥೆಗಳು ಹೊರಬರುತ್ತಿವೆ. ಇಂಥ ಕಥೆಗಳಲ್ಲಿ ಉಕ್ರೇನ್ ಸೈನಿಕನೊಬ್ಬ ತನ್ನ ಗೆಳತಿಯೊಂದಿಗೆ ಕಾಣಿಸಿಕೊಂಡಿರುವ ಮತ್ತೊಂದು ವಿಚಾರ ಸಾಕಷ್ಟು ವೈರಲ್ ಆಗಿದೆ. ಯುದ್ಧದ ನಂತರ ತನ್ನ ಗೆಳತಿಯನ್ನು ಭಾರತದಲ್ಲಿ (India) ಮದುವೆಯಾಗುತ್ತೇನೆ ಎಂದು ಈ ಸೈನಿಕ ಬಯಸಿದ್ದು, ಗೆಳತಿಯೊಂದಿಗಿನ ಚಿತ್ರ ಕೂಡ ವೈರಲ್ (Viral) ಆಗಿದೆ.
ಉಕ್ರೇನ್ ನ ಯೋಧ ತನ್ನ ಗೆಳತಿಯ ಜೊತೆಗಿರುವ ಎರಡು ಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಉಕ್ರೇನ್ ನಲ್ಲಿ ಯುದ್ಧದ ವರದಿ ಮಾಡಲು ತೆರಳಿರುವ ಭಾರತೀಯ ಮೂಲದ ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಉಕ್ರೇನ್ ಯೋಧ ಇದನ್ನು ಹಂಚಿಕೊಂಡಿದ್ದು, ಇದನ್ನು ಪತ್ರಕರ್ತ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಯುದ್ಧವೆಲ್ಲ ಮುಗಿದ ಬಳಿಕ, ಭಾರತಕ್ಕೆ ತೆರಳಿ, ತನ್ನ ಗರ್ಲ್ ಫ್ರೆಂಡ್ ಅನ್ನು ವಿವಾಹವಾಗುವ ಇಚ್ಛೆ ಇದೆ ಎಂದು ಹೇಳಿದ್ದಾರೆ. ಅದಲ್ಲದೆ, ತಮಗೆ ಭಾರತೀಯ ಮೂಲ ಕೂಡ ಇದೆ ಎಂದು ಹೇಳಿದ್ದಾರೆ.
ಇಷ್ಟು ಮಾತ್ರವಲ್ಲದೆ, ವೇದ ಮಂತ್ರಗಳ (Veda Mantra) ಟ್ಯಾಟೂಗಳನ್ನು ಸೈನಿಕ ತಮ್ಮ ಎದೆ ಹಾಗೂ ಕುತ್ತಿಗೆಯ ಮೇಲೆ ಹೊಂದಿದ್ದಾರೆ ಎನ್ನುವುದು ವಿಶೇಷ. ಈ ವೇಳೆ ಯೋಧ, ತನ್ನ ಎಂದಿನ ಉಕ್ರೇನ್ ಸೇನಾ ಸಮವಸ್ತ್ರದಲ್ಲಿದ್ದರೆ, ಆತನ ಗೆಳತಿ ಹಳದಿ ಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ದರು. ಇಬ್ಬರ ಈ ಫೋಟೋ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಭಾರೀ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರ ಮುದ್ದಾದ ಪ್ರೇಮಕಥೆಯನ್ನು ನೋಡಿ ನನ್ನ ಕಣ್ಣುಗಳು ತುಂಬಿದವು ಎಂದು ಒಬ್ಬ ಟ್ವಿಟರ್ ಯೂಸರ್ ಬರೆದುಕೊಂಡಿದ್ದಾನೆ.
ರಷ್ಯಾದ ಸೈನ್ಯವು ಉಕ್ರೇನ್ ನಗರಗಳ ಮೇಲೆ ತೀವ್ರವಾಗಿ ದಾಳಿ ಮಾಡುತ್ತಿದೆ. ತೀರಾ ಇತ್ತೀಚೆಗೆ, ರಷ್ಯಾದ ಮಿಲಿಟರಿಯು ತಮ್ಮ ಗಮನವನ್ನು ಡಾನ್ಬಾಸ್ ಅನ್ನು ನಿಶಸ್ತ್ರೀಕರಣ ಮಾಡುವತ್ತ ಕೇಂದ್ರೀಕರಿಸಿದೆ ಎಂದು ಹೇಳಲಾಗಿದೆ. ಡಾನ್ಬಾಸ್ ಅದೇ ಪ್ರದೇಶವಾಗಿದ್ದು, ಹಲವು ವರ್ಷಗಳಿಂದ ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಮತ್ತು ಉಕ್ರೇನಿಯನ್ ಸೇನೆಯ ನಡುವೆ ಸಂಘರ್ಷ ನಡೆಯುತ್ತಿದೆ.
ರಷ್ಯಾಧಿಪತಿಗೆ ಶಾಕ್ ನೀಡಲು ಅಮೆರಿಕ ಸಜ್ಜು, ಬೈಡೆನ್ ಸೇಡಿನ ಜ್ವಾಲೆಗೆ ಪುಟಿನ್ ಮಕ್ಕಳು ಟಾರ್ಗೆಟ್!
ಯುದ್ಧದ ನಡುವೆ ಉಕ್ರೇನ್‌ನಲ್ಲಿ ಅನೇಕ ಪ್ರೇಮಕಥೆಗಳು ತೆರೆದುಕೊಳ್ಳುತ್ತಿವೆ. ರಷ್ಯಾದ ಬಾಂಬ್‌ಗಳು ಮತ್ತು ಶೆಲ್‌ಗಳು 43 ಮಿಲಿಯನ್ ಜನರ ದೇಶದ ಮೇಲೆ ದಾಳಿ ಮಾಡುವುದನ್ನು ಮುಂದುವರೆಸುತ್ತಿದ್ದಂತೆ, ಯುದ್ಧ-ಹಾನಿಗೊಳಗಾದ ದೇಶದಿಂದ ಪ್ರೀತಿ, ಜೀವನ ಮತ್ತು ಸಂತೋಷದ ಈ ಕಥೆ ಹೊರಹೊಮ್ಮಿದೆ. ಉಕ್ರೇನ್ ದೇಶವು ರಷ್ಯಾದಿಂದ ಎಲ್ಲಾ ಆಮದುಗಳನ್ನು ನಿಷೇಧಿಸಿದೆ. ಯುದ್ಧದ ಮೊದಲು ತನ್ನ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾದ ರಷ್ಯಾದೊಂದಿಗೆ ವಾರ್ಷಿಕ ಸುಮಾರು $6 ಬಿಲಿಯನ್ ಮೌಲ್ಯದ ಆಮದುಗಳನ್ನು ಮಾಡಿಕೊಳ್ಳುತ್ತಿತ್ತು. ಯುದ್ಧದ ಬಳಿಕ ಮಾಸ್ಕೋದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಅನುಸರಿಸಲು ಮತ್ತು ವಿಧಿಸಲು ಇತರ ದೇಶಗಳಿಗೆ ಕರೆ ನೀಡಿದೆ.
'ಉಕ್ರೇನ್ ನಿರಾಶ್ರಿತರಿಗೆ ಸಹಾಯ ಮಾಡುತ್ತೀರಾ..'ವಿಶ್ವನಾಯಕರಿಗೆ ಪ್ರಿಯಾಂಕ ಚೋಪ್ರಾ ಮನವಿ
"ಇಂದು ನಾವು ಆಕ್ರಮಣಕಾರಿ ರಾಜ್ಯದೊಂದಿಗೆ ಸರಕುಗಳ ವ್ಯಾಪಾರದ ಸಂಪೂರ್ಣ ಮುಕ್ತಾಯವನ್ನು ಅಧಿಕೃತವಾಗಿ ಘೋಷಿಸಿದ್ದೇವೆ" ಎಂದು ಆರ್ಥಿಕ ಸಚಿವ ಯುಲಿಯಾ ಸ್ವೈರಿಡೆಂಕೊ ಶನಿವಾರ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ. "ಇನ್ನು ಮುಂದೆ, ರಷ್ಯಾದ ಒಕ್ಕೂಟದ ಯಾವುದೇ ಉತ್ಪನ್ನಗಳನ್ನು ನಮ್ಮ ರಾಜ್ಯದ ಪ್ರದೇಶಕ್ಕೆ ಆಮದು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ