'ನಂಬಿಕೆ ಉಳಿಸಲು ಹಿಂದೂ ಸಂಸ್ಕೃತಿ ಉಗ್ರವಾದವಾಯ್ತು' ಇಂಗ್ಲೆಂಡ್ ಎಡವಟ್ಟು!

By Suvarna NewsFirst Published Oct 8, 2020, 7:58 PM IST
Highlights

ಬ್ರಿಟಿಷರಿಗೆ ಮತ್ತೆ ಯಾಕೆ ಕೇಡು ಬಂತೋ ಗೊತ್ತಿಲ್ಲ/ ಹಿಂದೂ ಸಂಸ್ಕೃತಿಯನ್ನು ಟೆರರಿಸಂ  ಎಂದು ಕರೆದ ಇಂಗ್ಲೆಂಡ್ ಪಠ್ಯ/  ಇಂಥ ಎಡವಟ್ಟಿಗೆ ಕಾರಣ ಗೊತ್ತಿಲ್ಲ್/ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ

ಲಂಡನ್ (ಅ. 08)  ಭಾರತದ ಮೇಲೆ ಬ್ರಿಟಷರು ನೂರಾರು ವರ್ಷ ದೌರ್ಜನ್ಯ ನಡೆಸಿ  ಕೊನೆಗೆ ದೇಶ ಬಟ್ಟು ತೆಳಿದ್ದು ಇತಿಹಾಸ. ಈಗ ಮತ್ತೊಂದು ಎಡವಟ್ಟು ಕೆಲಸವನ್ನು  ಇಂಗ್ಲೆಂಡ್ ಮಾಡಿದೆ.

ಬ್ರಿಟಿಷ್ ಶಾಲಾ ಪಠ್ಯ ಹಿಂದೂ ಪರಂಪರೆ ಮೇಲೆ, ಭಾರತದ ಮೇಲೆ ದಾಳಿ ಮಾಡಿದೆ.  ತನ್ನ ನಂಬಿಕೆಗಳನ್ನು ಉಳಿಸಿಕೊಳ್ಳಲು ಹಿಂದೂಯಿಸಮ್ ಉಗ್ರವಾದವಾಗಿ ಬದಲಾಗಿದೆ ಎಂಬ ಅರ್ಥದಲ್ಲಿ ಹೇಳಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಹಿಂದೂಗಳಲ್ಲದವರು ತಿರುಪತಿಗೆ ಭೇಟಿ ಕೊಟ್ಟರೆ ಡಿಕ್ಲರೇಶನ್ ಕಡ್ಡಾಯ

ಮಧ್ಯಮವೊಂದರಲ್ಲಿ ಪ್ರಸಾರವಾದ ಸುದ್ದಿ ಈ ಅಂಶವನ್ನು ಬಹಿರಂಗ ಮಾಡಿದೆ.  ಬ್ರಿಟಿಷರು ಯಾವ ಕಾರಣಕ್ಕೆ ಇಂಥ ಸುಳ್ಳು ಹಬ್ಬಿಸಿದ್ದಾರೆ ಎಂಬುದು ದ್ಯದ ಮಟ್ಟಿಗೆ ಅರ್ಥವಾಗುತ್ತಿಲ್ಲ. ಸೋಶಿಯಲ್  ಮೀಡಿಯಾದಲ್ಲಿಯೂ ದೊಡ್ಡ ಸುದ್ದಿಯಾಗುತ್ತದೆ.

ಈ ಬಗ್ಗೆ ಭಾರತದ ರಾಯಭಾರ ಕಚೇರಿಗೂ ಮಾಹಿತಿ ತಲುಪಿದ್ದು ಶಿಕ್ಷಣ  ವ್ಯವಸ್ಥೆಯಲ್ಲಿ ಇಂಥದ್ದೊಂದು  ಪಾಠ ಯಾವ ಕಾರಣಕ್ಕೆ ಸೇರಿಸಿದ್ದಾರೆ ಎನ್ನುವುದು ಗೊತ್ತಾಗುತ್ತಿಲಕ್ಲ ಎಂದಿದೆ. ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆ ಅಧ್ಯಯನ ಮಾಡುವ ವೇಳೆ ಹಿಂದೂಯಿಸಂ ಅನ್ನು ಟೆರರಿಸಂ ಎಂಬ ಅರ್ಥದಲ್ಲಿ ಹೇಳಲಾಗಿದೆ. ಪ್ರಪಂಚದ ಧರ್ಮಗಳು ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೋತ್ತರ ಇದ್ದಲ್ಲಿಯೂ ಇದೆ ರೀತಿಯಾದ ಮಾಹಿತಿ ನೀಡಲಾಗಿದೆ.

click me!