
ಲಂಡನ್(ಅ. 09) ರಾಷ್ಟ್ರದಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತ ಜನರ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದ್ದರೂ ಜನಪ್ರತಿನಿಧಿಗಳಿಗೆ ಮಾತ್ರ ತಮ್ಮ ಸಂಬಳದ ಮೋಹ ಹೋಗಿಲ್ಲ. ಇದು ಭಾರತ ಮಾತ್ರ ಅಲ್ಲ ಇಂಗ್ಲೆಂಡ್ ಗೂ ಅನ್ವಯವಾಗುತ್ತದೆ.
ಇಂಗ್ಲೆಂಡಿನ ಎಂಪಿಗಳು ಕೊರೋನಾ ಇದ್ದರೂ ಮುಂದಿನ ವರ್ಷ 3,300 ಪೌಂಡ್ ಹೆಚ್ಚುವರಿಯಾಗಿ ಪಡೆದುಕೊಳ್ಳಲಿದ್ದಾರೆ. ಇಂಗ್ಲೆಂಡ್ ಸಂಸದೀಯ ಪ್ರಾಧಿಕಾರ (ಐಪಿಎಸ್‌ಎ) ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ಸಂಸದರ ವೇತನ ಸಾರ್ವಜನಿಕ ಕ್ಷೇತ್ರದ ಬೆಳವಣಿಗೆ ದರ ಅಂದರೆ ಶೇ 4.1 ರೊಂದಿಗೆ ಹೆಜ್ಜೆ ಹಾಕಬೇಕು ಎಂದು ತಿಳಿಸಿದೆ.
ಮತ್ತೆ ಲಾಕ್ ಡೌನ್; ಸೋಮವಾರದಿಂದ ಬಾರ್ ಬಂದ್
ಈಗಾಗಲೆ ಇಂಗ್ಲೆಂಡ್ ಎಂಪಿಗಳು 81,932 ಪವಂಡ್ ಪಡೆದುಕೊಳ್ಳುತ್ತಿದ್ದು ಮುಂದಿನ ವರ್ಷದಿಂದ 3,300 ಪೌಂಡ್ ಹೆಚ್ಚುವರಿಯಾಗಿ ಪಡೆದುಕೊಳ್ಳಲಿದ್ದಾರೆ ಸುಮಾರು ಏಳು ಲಕ್ಷ ಜನ ಇಂಗ್ಲೆಂಡಿನಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ವಾಣಿಜ್ಯ ಕ್ಷೇತ್ರ ಸಹ ನಷ್ಟದ ಹಾದಿಯಲ್ಲಿ ಇದೆ. ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ.
ದೇಶದ ವಿವಿಧ ಭಾಗಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮೊರೆ ಹೋಗಲಾಗಿದೆ. ರಾತ್ರಿ 10 ಗಂಟೆಯ ಕರ್ಫ್ಯೂ ಜಾರಿಯಲ್ಲಿದೆ. ಹೊಟೆಲ್ ಉದ್ಯಮದಲ್ಲಿ ಉದ್ಯಮದಲ್ಲಿ 500,000 ಕ್ಕೂ ಹೆಚ್ಚು ಉದ್ಯೋಗಗಳು ವರ್ಷದ ಅಂತ್ಯದ ವೇಳೆಗೆ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ವರದಿಯಿದೆ
ಆದರೆ ಸಂಸತ್ತಿನ ಶ್ರೀಮಂತ ಸಂಸದರಲ್ಲಿ ಒಬ್ಬರಾಗಿರುವ ಮಿಲಿಯನೇರ್ ಆಗಿರುವ ವಾಣಿಜ್ಯ ಸಚಿವ ನಾಧಿಮ್ ಜಹಾವಿ ಅವರು ತಮ್ಮ ವೇತನ ಹೆಚ್ಚಳವನ್ನು ದಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವೇತನ ಹೆಚ್ಚಳ ಇಂಗ್ಲೆಂಡಿನಲ್ಲಿ ಮತ್ತೊಂದು ಸುತ್ತಿನ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ