ಕ್ಯಾನ್ಸರ್‌ನಿಂದ ಕಣ್ಣು ಕಳೆದುಕೊಂಡಿದ್ದ ಹುಡುಗಿಗೆ ಈಗ ಚಿನ್ನದ ಕಣ್ಣಿನ ರಂಗು

Published : Jul 30, 2022, 05:24 PM ISTUpdated : Jul 30, 2022, 05:28 PM IST
ಕ್ಯಾನ್ಸರ್‌ನಿಂದ ಕಣ್ಣು ಕಳೆದುಕೊಂಡಿದ್ದ ಹುಡುಗಿಗೆ ಈಗ ಚಿನ್ನದ ಕಣ್ಣಿನ ರಂಗು

ಸಾರಾಂಶ

ಇಂಗ್ಲೆಂಡ್‌ನ ಬಾರ್‌ನಲ್ಲಿ ಸರ್ವೆಂಟ್ ಆಗಿ ಕೆಲಸ ಮಾಡುವ 25 ವರ್ಷದ ಯುವತಿ ಡಾನಿ ವಿನ್ರೋಗೆ ಒಂದು ಕಣ್ಣಿಲ್ಲ. ಇದಕ್ಕೆ ಗ್ಲಾಸ್ ಐ ಇಟ್ಕೊಂಡಿದ್ದ ಆಕೆಗೆ ಜನರ ಟೀಕೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದಳು.

ದೇವರು ಎಲ್ಲರಿಗೂ ಒಂದೇ ತರಹದ ದೇಹ ಸಿರಿಯನ್ನು ಕೊಟ್ಟಿರುವುದಿಲ್ಲ. ಅನೇಕರಿಗೆ ಏನೇನೋ ಕೊರತೆಗಳಿವೆ ಕೆಲವು ಕಣ್ಣಿಗೆ ಕಾಣುವಂತಹವು ಆದರೆ ಮತ್ತೆ ಕೆಲವು ಕಾಣದ್ದು, ಕಾಣದ ಕೊರೆತೆಗಳ ಬಗ್ಗೆ ಜನ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಕಾಣುವ ಕೊರತೆಗಳು ಬೇಸರ ಮೂಡಿಸುತ್ತವೆ. ಎಲ್ಲಕ್ಕಿಂತ ಹೆಚ್ಚು ಕಾಣುವ ಕೊರತೆಯನ್ನು ಎಲ್ಲರೂ ಗಮನಿಸಿ ನೂರೆಂಟು ಸಲಹೆ ಟೀಕೆಗಳನ್ನು ಮಾಡುತ್ತಿರುತ್ತಾರೆ. ಇದು ಮನಸ್ಸನ್ನು ಇನ್ನಷ್ಟು ಕೆಡಿಸುವುದು. ಹಾಗೆಯೇ ಒಂದು ಕಣ್ಣನ್ನು ಮಾತ್ರ ಹೊಂದಿದ್ದ ಯುವತಿಯೊಬ್ಬಳು ಜನರ ಟೀಕೆಗಳಿಂದ ಬೇಸತ್ತು ಅದಕ್ಕೊಂದು ಉಪಾಯ ಮಾಡಿದ್ದು, ಈ ಮೂಲಕ ಆಕೆ ಅನೇಕರನ್ನು ಬೆರಗಾಗಿಸಿದ್ದಾಳೆ. 

ಇಂಗ್ಲೆಂಡ್‌ನ ಬಾರ್‌ನಲ್ಲಿ ಸರ್ವೆಂಟ್ ಆಗಿ ಕೆಲಸ ಮಾಡುವ 25 ವರ್ಷದ ಯುವತಿ ಡಾನಿ ವಿನ್ರೋಗೆ ಒಂದು ಕಣ್ಣಿಲ್ಲ. ಇದಕ್ಕೆ ಗ್ಲಾಸ್ ಐ ಇಟ್ಕೊಂಡಿದ್ದ ಆಕೆಗೆ ಜನರ ಟೀಕೆಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದಳು. ತನ್ನ ಒಂದು ಕೆಟ್ಟ ಕಣ್ಣಿನ ಬಗ್ಗೆ ಹಲವು ವರ್ಷಗಳ ಕಾಳಜನರ ಟ್ರೋಲ್‌ ಹಾಗೂ ನೋವು ನೀಡುವ ಕಾಮೆಂಟ್‌ಗಳಿಂದ ನೊಂದ ಆಕೆ ಅದನ್ನು ಮಿಂಚುವ ಬಂಗಾರದ ಕಣ್ಣಾಗಿಸಲು ನಿರ್ಧರಿಸಿದಳು. ಸಾಮಾನ್ಯ ಬಾರ್ ಕೆಲಸಗಾರಳಾಗಿದ್ದ ಡಾನಿ ವಿನ್ರೋಗೆ ಇದು ಸುಲಭದ ಮಾತಾಗಿರಲಿಲ್ಲ. ಹಾಗಂತ ಜನರ ಟೀಕೆಗಳನ್ನು ಕೇಳಿ ಸಹಿಸಿಕೊಳ್ಳುವುದಕ್ಕೆ ಆಕೆ ಸಿದ್ಧಳಿರಲಿಲ್ಲ. ಆದಾಗ್ಯೂ ಬೇರೆ ಯಾವುದೇ ಆಯ್ಕೆಗಳಿಲ್ಲದ ಡಾನಿ ಈ ಚಿನ್ನದ ಐ ಬಾಲ್ (ಕಣ್ಣು ಗುಡ್ಡೆ) ಕೂರಿಸಲು ಮನಸ್ಸು ಗಟ್ಟಿ ಮಾಡಿ ಸಾಕಷ್ಟು ದುಡಿದ ಆಕೆ ಈಗ ಚಿನ್ನದ ಕಂಗಳ ಸುಂದರಿ ಎನಿಸಿದ್ದಾಳೆ. 

 

ಡಾನಿಗೆ ಕೇವಲ ಆರು ತಿಂಗಳ ಮಗುವಿದ್ದಾಗ ರೆಟಿನೋ ಬ್ಲಸ್ಟೋಮಾ (An eye cancer that begins in the back of the eye) ಎಂದು ಕರೆಯಲ್ಪಡುವ ಕಣ್ಣಿನ ಕ್ಯಾನ್ಸರ್‌ಗೆ ಒಳಗಾಗಿದ್ದಳು. ಹೀಗಾಗಿ ಆಕೆಯ ಒಂದು ಕಣ್ಣನ್ನು ವೈದ್ಯರು ಸಂಪೂರ್ಣವಾಗಿ ತೆಗೆದು ಹಾಕಬೇಕಾಗಿತ್ತು. ನಂತರ ವೈದರು ಆ ಜಾಗದಲ್ಲಿ ಕೃತಕ ಕಣ್ಣೊಂದನ್ನು ಅಳವಿಡಿಸಿದ್ದರು. ಇದು ಆಕೆ ನವಜಾತ ಶಿಶುವಿದ್ದಾಗಲೇ ನಡೆದಿತ್ತು. ರೆಟಿನೋಬ್ಲಸ್ಟೋಮಾ (retinoblastoma) ಎಂಬುದು ಅತ್ಯಂತ ವಿರಳವಾಗಿ ಕಾಣಿಸಿಕೊಳ್ಳುವ ಕಣ್ಣಿನ ಕ್ಯಾನ್ಸರ್ ಆಗಿದ್ದು, ಕಣ್ಣು ಗುಡ್ಡೆಯ ಒಳಭಾಗದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. ಒಂದು ವೇಳೆ ಕಣ್ಣನ್ನು ತೆಗೆಯದೇ ಹೋದಲ್ಲಿ ಆ ಕ್ಯಾನ್ಸರ್ ಇಡೀ ದೇಹವನ್ನು ವ್ಯಾಪಿಸಿ ಅದು ಕೊನೆಗೆ ಜೀವಕ್ಕೆ ಎರವಾಗುವ ಸಾಧ್ಯತೆ ಇತ್ತು. 

ಹೀಗಾಗಿ ಅನಿವಾರ್ಯವಾಗಿ ಡಾನಿಗೆ ತನ್ನ ಕಣ್ಣನ್ನು ಕಳೆದುಕೊಳ್ಳಲೇಬೇಕಾದಂತಹ ಸ್ಥಿತಿ ನಿರ್ಮಾಣವಾಗಿತ್ತು. ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಆಕೆಗೆ ಕೃತಕ ಕಣ್ಣೊಂದನ್ನು ಜೋಡಿಸಿದ್ದರು. ಇದರಿಂದ ಬಾಲ್ಯದಲ್ಲಿ ಶಾಲೆಯಲ್ಲಿ ಸ್ನೇಹಿತರು ಹಾಗೂ ನಂತರ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಪಬ್‌ಗೆ ಬರುತ್ತಿದ್ದ ಗ್ರಾಹಕರು ಆಕೆಯನ್ನು ಟೀಕಿಸುತ್ತಿದ್ದರಂತೆ. ಅಲ್ಲದೇ ಒಬ್ಬ ಗ್ರಾಹಕನಂತೂ ಆಕೆಗೆ ಕಣ್ಣನ್ನು ಸರಿಪಡಿಸಿಕೊಳ್ಳಲು ಟಿಪ್ಸ್‌ ನೀಡಿದ್ದನಂತೆ. ಇದು ಶವಪೆಟ್ಟಿಗೆಗೆ ಹೊಡೆವ ಕೊನೆಯ ಮೊಳೆ ಎಂಬಂತೆ ಆಕೆಗೆ ಭಾಸವಾಯಿಂತೆ. 

ನನಗೆ ಕ್ಯಾನ್ಸರ್ ಎಂದ ಜೋ ಬೈಡನ್, ಅಮೆರಿಕ ಅಧ್ಯಕ್ಷರ ಭಾಷಣಕ್ಕೆ ಶ್ವೇತ ಭವನ ಸ್ಪಷ್ಟನೆ!

ಇದಾದ ಬಳಿಕ ಹರೆಯದ ಯುವತಿ ಹೇಗಾದರು ಮಾಡಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕು ಎಂದು ನಿರ್ಧರಿಸಿದ್ದು, ಇದಕ್ಕಾಗಿ 15,000 ರೂಪಾಯಿ ವೆಚ್ಚ ಮಾಡಲು ನಿರ್ಧರಿಸಿದ್ದಾಳೆ. ನಂತರ ರಾಷ್ಟ್ರೀಯ ಕೃತಕ ಕಣ್ಣಿನ ಸೇವಾ ಘಟಕದ ಸಹಾಯದಿಂದ ಚಿನ್ನದ ಕಣ್ಣನ್ನು ಅಳವಡಿಸಿಕೊಂಡಿದ್ದಾಳೆ. ಈಗ ಸುಂದರವಾಗಿ ಕಾಣುತ್ತಿರುವ ಆಕೆಯ ನೋಟಕ್ಕೆ ಆಕೆಯ ಗೆಳೆಯ, ಅಪ್ಪ ಅಮ್ಮ ಎಲ್ಲರೂ ಖುಷಿಯಾಗಿದ್ದಾರಂತೆ. ಇದಾದ ಬಳಿಕ ತಾನೂ ತುಂಬಾ ಖುಷಿಯಾಗಿದ್ದು, ನನ್ನ ಜೀವನದ ಉತ್ತಮ ಬದುಕನ್ನು ಬದುಕುತ್ತಿದ್ದೇನೆ ಎಂದು ಡಾನಿ ಹೇಳಿಕೊಂಡಿದ್ದಾಳೆ. ಅಲ್ಲದೇ ತನ್ನ ಚಿನ್ನದ ಕಂಗಳನ್ನು ಹೆಮ್ಮೆಯಿಂದ ತೋರಿಸಿಕೊಳ್ಳುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. 

ಅಲ್ಲದೇ ಕನ್ನಡಿ ನೋಡುವಾಗ ತನಗೆ ತುಂಬಾ ಖುಷಿಯಾಗುತ್ತಿದೆ. ಅಲ್ಲದೇ ನನ್ನ ಟೀಕಾಕಾರಿಗೆ ನಾನು ಎಂದೆಂದಿಗೂ ಚಿನ್ನದ ಕಂಗಳನ್ನು ಹೊಂದಿದ್ದೇನೆ ಎಂಬ ಉತ್ತರ ನೀಡಬಹುದು ಎಂದು ಆಕೆ ಹೇಳಿಕೊಂಡಿದ್ದಾಳೆ. 

ಐ ಡ್ರಾಪ್ ಬಳಸೋವಾಗ ನಾವೆಲ್ಲ ಮಾಡ್ತೇವೆ ಈ ತಪ್ಪು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!