ಉಗಾಂಡದಲ್ಲಿ ಇನ್ನು ಸಲಿಂಗಕಾಮದ ಅಪರಾಧಕ್ಕೆ ಗಲ್ಲು ಶಿಕ್ಷೆ!

By Santosh Naik  |  First Published Mar 22, 2023, 11:57 AM IST

ಭಾರತದಲ್ಲಿ ಸಲಿಂಗಿಗಳ ಮದುವೆಯನ್ನು ಮಾನ್ಯ ಮಾಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ ಬೆನ್ನಲ್ಲಿಯೇ, ಆಫ್ರಿಕಾ ದೇಶ ಉಗಾಂಡ ಕೂಡ ಸಲಿಂಗ ಕಾಮದ ವಿಚಾರದಲ್ಲಿ ಕಠಿಣ ಧೋರಣೆ ತಳೆದಿದೆ. ಉಗಾಂಡ ಸಂಸತ್ತು ಮಂಗಳವಾರ ಎಲ್‌ಜಿಬಿಟಿಕ್ಯೂ ಅಪರಾಧ ಎಂದು ಹೇಳುವ ಕಾನೂನನ್ನು ಅಂಗೀಕಾರ ಮಾಡಿದೆ.


ನವದೆಹಲಿ (ಮಾ.22): ವ್ಯಕ್ತಿಗಳು ತಾವು ಎಲ್‌ಜಿಬಿಟಿಕ್ಯೂ (ಲೆಸ್ಬಿಯನ್‌, ಗೇ, ಬೀಸೆಕ್ಶುಯಲ್‌,, ಟ್ರಾನ್ಸ್‌ಜೆಂಡರರ್‌ ಮತ್ತು ಕ್ವೀರ್‌) ಎಂದು ಗುರುತಿಸಿಕೊಳ್ಳುವುದನ್ನು ಅಪರಾಧ ಎಂದು ಉಗಾಂಡ ಹೇಳಿದೆ. ಈ ಕುರಿತಾದ ಕಾನೂನನ್ನು ಮಂಗಳವಾರ ಉಗಾಂಡ ಸಂಸತ್ತು ಅಂಗೀಕರಿಸಿದೆ. ಈಗಾಗಲೇ ಕಾನೂನು ತಾರತಮ್ಯ ಮತ್ತು ಜನಸಮೂಹದ ಹಿಂಸಾಚಾರವನ್ನು ಎದುರಿಸುತ್ತಿರುವ ಉಗಾಂಡದ ಜನರನ್ನು ಗುರಿಯಾಗಿಸಲು ಅಧಿಕಾರಿಗಳಿಗೆ ಇನ್ನಷ್ಟು ಹೆಚ್ಚಿನ ಅಧಿಕಾರವನ್ನು ಈ ಕಾನೂನು ನೀಡಲಿದೆ ಎನ್ನುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಉಗಾಂಡ ಸೇರಿದಂತೆ 30ಕ್ಕೂ ಅಧಿಕ ಆಫ್ರಿಕನ್‌ ದೇಶಗಳು, ಸಲಿಂಗ ಕಾಮದ ಸಂಬಂಧಕ್ಕೆ ನಿಷೇಧ ಹೇರಿವೆ. ಮಾನವ ಹಕ್ಕುಗಳ ಗುಂಪು ಹ್ಯೂಮನ್ ರೈಟ್ಸ್ ವಾಚ್ ಪ್ರಕಾರ, ಹೊಸ ಕಾನೂನು ತಾವು ಎಲ್‌ಜಿಬಿಟಿಕ್ಯೂ ಎಂದು ಗುರುತಿಸುವುದನ್ನು ಕಾನೂನುಬಾಹಿರಗೊಳಿಸಿದ ಮೊದಲನೆಯ ದೇಶ ಎನ್ನಲಾಗಿದೆ.ಹೊಸ ಕಾನೂನಿನ ಬೆಂಬಲಿಗರು ಎಲ್‌ಜಿಬಿಟಿಕ್ಯು ಚಟುವಟಿಕೆಗಳ ವ್ಯಾಪಕ ಶ್ರೇಣಿಯನ್ನು ಶಿಕ್ಷಿಸಲು ಅಗತ್ಯವಿದೆ ಎಂದು ಹೇಳುತ್ತಾರೆ, ಇದು ಸಂಪ್ರದಾಯವಾದಿ ಮತ್ತು ಧಾರ್ಮಿಕ ಪೂರ್ವ ಆಫ್ರಿಕಾದ ರಾಷ್ಟ್ರದಲ್ಲಿ ಸಾಂಪ್ರದಾಯಿಕ ಮೌಲ್ಯಗಳಿಗೆ ಬೆದರಿಕೆಯನ್ನುಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಸಲಿಂಗ ಸಂಭೋಗದ ಜೊತೆಗೆ, ಸಲಿಂಗಕಾಮವನ್ನು ಉತ್ತೇಜಿಸುವುದು ಮತ್ತು ಪ್ರೋತ್ಸಾಹಿಸುವುದು ಮತ್ತು ಸಲಿಂಗಕಾಮದಲ್ಲಿ ತೊಡಗಿಕೊಳ್ಳುವ ಯೋಚನೆ ಕೂಡ ಈ ಕಾನೂನಿನ ಪ್ರಕಾರ ಅಪರಾಧವಾಗಿದೆ.

ಇನ್ನು ಈ ಕಾನೂನು ಮೀರಿದರೆ, ಕಠಿಣ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಗೇ ಸೆಕ್ಸ್‌ನಲ್ಲಿ ಭಾಗಿಯಾದಲ್ಲಿ ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆಅವಕಾಶವನ್ನೂ ಕಾನೂನು ನೀಡುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯ ಜೊತೆ ಒತ್ತಾಯದ ಸಲಿಂಗಕಾಮ ಅಥವಾ ಗೇ ಸೆಕ್ಸ್‌ನಲ್ಲಿ ಭಾಗಿಯಾದಲ್ಲಿ, ಎಚ್‌ಐವಿ ಪಾಸಿಟಿವ್‌ ಆಗಿರುವ ವ್ಯಕ್ತಿ ಹಾಗೂ ಇತರ ಗಂಭೀರ ಕಾಯಿಲೆ ಇರುವ ವ್ಯಕ್ತಿ ಸಲಿಂಗಕಾಮದಲ್ಲಿ ಭಾಗಿಯಾದಲ್ಲಿ ಆತನಿಗೆ ಮರಣದಂಡನೆ ಶಿಕ್ಷೆಯನ್ನು ಕಾನೂನಿನ ಅಡಿಯಲ್ಲಿ ವಿಧಿಸಬಹುದಾಗಿದೆ.

'ನಮ್ಮನ್ನು ಸೃಷ್ಟಿಸಿದ ದೇವರು ಕೂಡ ಇಂದು ಈ ಕಾನೂನಿನ ಬಗ್ಗೆ ಖುಷಿಯಾಗಿರುತ್ತಾನೆ. ನಾನು ಈ ಮಸೂದೆಗೆ ಬೆಂಬಲ ನೀಡುತ್ತೇನೆ ಹಾಗೂ ನಮ್ಮ ಮಕ್ಕಳ ಭವಿಷ್ಯವನ್ನು ರಕ್ಷಿಸಲು ಬದ್ಧನಾಗಿದ್ದೇನೆ' ಎಂದು ಸಂಸದ ಡೇವಿಡ್‌ ಬಹಾತಿ ಈ ಮಸೂದೆಯ ಕುರಿತು ನಡೆದ ಚರ್ಚೆಯ ವೇಳೆ ಹೇಳಿದ್ದಾರೆ.  "ಇದು ನಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕೆ ಸಂಬಂಧಿಸಿದೆ, ಯಾರೂ ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಾರದು, ಯಾರೂ ನಮ್ಮನ್ನು ಹೆದರಿಸಬಾರದು." ಶಾಸನವನ್ನು ಕಾನೂನಾಗಿ ಸಹಿ ಮಾಡಲು ಅಧ್ಯಕ್ಷ ಯೊವೆರಿ ಮುಸೆವೆನಿ ಅವರಿಗೆ ಕಳುಹಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿದ್ದ ಎಲ್ಲಾ ಅರ್ಜಿ ತನಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್ !

ಪ್ರಸ್ತುತ ಪ್ರಸ್ತಾಪದ ಕುರಿತು ಮುಸೆವೆನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಅವರು ಎಲ್‌ಜಿಬಿಟಿಕ್ಯೂ ಹಕ್ಕುಗಳನ್ನು ದೀರ್ಘಕಾಲ ವಿರೋಧಿಸಿದ್ದಾರೆ ಮತ್ತು 2013 ರಲ್ಲಿ ಎಲ್‌ಜಿಬಿಟಿಕ್ಯೂ ವಿರೋಧಿ ಕಾನೂನಿಗೆ ಸಹಿ ಹಾಕಿದ್ದರು. ಉಗಾಂಡದ ನ್ಯಾಯಾಲಯವು ಈ ಕಾನೂನನ್ನು ಮೊದಲಿಗೆ ಧಿಕ್ಕರಿಸುವ ಮುನ್ನ ಪಾಶ್ಚಿಮಾತ್ಯ ದೇಶಗಳು ಇದನ್ನು ಖಂಡನೆ ಮಾಡಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಉಗಾಂಡದ ಅಧಿಕಾರಿಗಳು ಎಲ್‌ಜಿಬಿಟಿಕ್ಯು ವ್ಯಕ್ತಿಗಳನ್ನು ದಮನ ಮಾಡುವಲ್ಲಿ ಶಕ್ತರಾಗಿದ್ದರು. ರೆ ಧಾರ್ಮಿಕ ಮುಖಂಡರು ಮತ್ತು ರಾಜಕಾರಣಿಗಳು ಶಾಲೆಗಳಲ್ಲಿ ಸಲಿಂಗಕಾಮಕ್ಕೆ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು.

Latest Videos

ಸಲಿಂಗ ವಿವಾಹಕ್ಕೆ ಬಿಜೆಪಿ ಸಂಸದ ಸುಶೀಲ್‌ ಮೋದಿ ಪ್ರಬಲ ವಿರೋಧ

ಈ ತಿಂಗಳು, ಪೂರ್ವ ಉಗಾಂಡಾದ ಜಿಂಜಾ ಜಿಲ್ಲೆಯ ಮಾಧ್ಯಮಿಕ ಶಾಲಾ ಶಿಕ್ಷಕಿಯನ್ನುನನ್ನು ಅಧಿಕಾರಿಗಳು ಬಂಧಿಸಿದ್ದರು. ಎಳೆಯ ಹುಡುಗಿಯರನ್ನು ಅಸ್ವಾಭಾವಿಕ ಸೆಕ್ಸ್‌ನ ಅಭ್ಯಾಸಗಳತ್ತ ಒತ್ತಾಯಪೂರ್ವಕವಾಗಿ ತಳ್ಳುತ್ತಿದ್ದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿತ್ತು. ಆ ಬಳಿಕ ಆಕೆಯ ಮೇಲೆ ಇನ್ನಷ್ಟು ಆರೋಪಗಳನ್ನು ಹೊರಿಸಿ ಜೈಲಿನಲ್ಲಿ ಇರಿಸಲಾಗಿದ್ದು ವಿಚಾರಣೆಗಾಗಿ ಕಾಯುತ್ತಿದ್ದಾರೆ.

click me!