ಯುಎಐನಲ್ಲಿ ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ 17 ಭಾರತೀಯರು ಸೇರಿ 35 ಮಂದಿ ಅರೆಸ್ಟ್

Published : Mar 16, 2026, 03:37 PM IST
Dubai Police

ಸಾರಾಂಶ

ಯುಎಐನಲ್ಲಿ ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ 17 ಭಾರತೀಯರು ಸೇರಿ 35 ಮಂದಿ ಅರೆಸ್ಟ್, ಎಲ್ಲರೂ ವಿದೇಶಿಗರಾಗಿದ್ದಾರೆ. ಎಐ, ಹಳೇ ವಿಡಿಯೋಗಳನ್ನು ಬಳಸಿ ದೇಶದ ಭದ್ರತೆಗೆ ಧಕ್ಕೆ ಆರೋಪಿಗಳು ತರಲು ಯತ್ನಿಸಿದ್ದಾರೆ. 

ದುಬೈ (ಫೆ.16) : ದುಬೈ, ಸೌದಿ ಅರೇಬಿಯಾ ಸೇರಿದಂತೆ ಅರಬ್ ರಾಷ್ಟ್ರಗಳ ಮೇಲೆ ಇರಾನ್ ಸತತ ದಾಳಿ ನಡೆಸುತ್ತಿದೆ. ಅಮೆರಿಕ ಸೇನಾ ನೆಲೆ ಗುರಿಯಾಗಿಸಿ ನಡೆಸುತ್ತಿರುವ ದಾಳಿ ಅರಬ್ ರಾಷ್ಟ್ರಗಳ ನಗ ವಸತಿಗಳ ಮೇಲೂ ಬೀಳುತ್ತಿದೆ. ಇಸ್ರೇಲ್ ಹಾಗೂ ಅಮೆರಿಕ ವಿರುದ್ದ ಹೋರಾಡುತ್ತಿರುವ ಇರಾನ್ ಸಿಕ್ಕ ಸಿಕ್ಕ ಕಡೆ ಮಿಸೈಲ್, ಡ್ರೋನ್ ದಾಳಿ ಮಾಡುತ್ತಿದೆ. ಇರಾನ್ ಪ್ರತಿದಾಳಿಯಲ್ಲಿ ಹೆಚ್ಚು ನಷ್ಟ ಅನಭವಿಸುತ್ತಿರುವುದು ಗಲ್ಫ್ ರಾಷ್ಟ್ರಗಳು. ಇದೇ ವೇಳೆ ಹಲವರು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಕಲಿ, ಎಐ ಆಧಾರಿತ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡುತ್ತಿದ್ದಾರೆ. ಭಾರತದಲ್ಲೂ ಈ ರೀತಿಯ ನಕಲಿ ಸುದ್ದಿಗಳು ಹರಿದಾಡುತ್ತಿದೆ. ಸಂಘರ್ಷದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ವಿರುದ್ಧ ಯುಎಇ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಎಐ ಬಳಸಿ ನಕಲಿ ಪ್ರಚಾರ ನಡೆಸಿದ ಆರೋಪದ ಮೇಲೆ ಯುಎಇ ಅಟಾರ್ನಿ ಜನರಲ್, ವಿವಿಧ ದೇಶಗಳ 35 ಜನರನ್ನು ಬಂಧಿಸಿದ್ದಾರೆ. ಇವರಲ್ಲಿ 17 ಮಂದಿ ಭಾರತೀಯರಾಗಿದ್ದಾರೆ.

ಆರೋಪಿಗಳ ಶೀಘ್ರ ವಿಚಾರಣೆ

ಈ ಪ್ರಕರಣದ ಆರೋಪಿಗಳ ಶೀಘ್ರ ವಿಚಾರಣೆಗೆ ಆದೇಶಿಸಲಾಗಿದೆ. ಕೃತಕವಾಗಿ ಸೃಷ್ಟಿಸಿದ ವಿಡಿಯೋಗಳನ್ನು ಬಳಸಿ ತಪ್ಪು ಮಾಹಿತಿ ಹರಡಿದ್ದಾರೆ ಎಂಬುದು ಇವರ ಮೇಲಿರುವ ಪ್ರಮುಖ ಆರೋಪ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ತೀವ್ರ ನಿಗಾ ಇರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ದೇಶದ ಭದ್ರತೆಗೆ ಧಕ್ಕೆ

ಜನರನ್ನು ದಾರಿ ತಪ್ಪಿಸಿ, ಭಯ ಹುಟ್ಟಿಸಿ ದೇಶದ ಭದ್ರತೆಗೆ ಕುತ್ತು ತರಲು ಯತ್ನಿಸಿದ್ದಾರೆ ಎಂದು ಈ ಪ್ರಕರಣವನ್ನು ದಾಖಲಿಸಲಾಗಿದೆ. ಬೇರೆ ದೇಶಗಳಲ್ಲಿ ನಡೆದ ಸೇನಾ ದಾಳಿಗಳ ವಿಡಿಯೋಗಳನ್ನು ಯುಎಇಯಲ್ಲಿ ನಡೆದಿದ್ದು ಎಂದು ಸುಳ್ಳು ಹೇಳಿ ಹರಿಬಿಟ್ಟಿದ್ದಾರೆ. ಜನರ ಮೇಲೆ ದಾಳಿ ನಡೆಯುತ್ತಿರುವ ವಿಡಿಯೋಗಳನ್ನೂ ಪ್ರಚಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಎಐ ತಂತ್ರಜ್ಞಾನ ಬಳಸಿ ಯುಎಇಯ ಪ್ರಮುಖ ಐಕಾನಿಕ್ ಸ್ಥಳಗಳು ಧ್ವಂಸವಾದಂತೆ ನಕಲಿ ವಿಡಿಯೋ ಸೃಷ್ಟಿಸಿ ಹಂಚಿಕೊಂಡಿದ್ದಾರೆ. ಈ ಆರೋಪ ಸಾಬೀತಾದರೆ, ಆರೋಪಿಗಳಿಗೆ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ದಿರಾಮ್ ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಈ ಹಿಂದೆ, ಇದೇ ರೀತಿ ದೃಶ್ಯಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಅಬುಧಾಬಿ ಪೊಲೀಸರು 45 ಜನರನ್ನು ಬಂಧಿಸಿದ್ದರು.

ಯುದ್ಧದ ಸಂದರ್ಭದಲ್ಲಿ ಅರಬ್ ರಾಷ್ಟ್ರಗಳು ತತ್ತರಿಸಿದೆ. ಅರಬ್ ಉದ್ಯಮದ ಜೊತೆಗೆ ಪ್ರವಾಸೋದ್ಯಮದ ಮೇಲೂ ಹೊಡೆತ ಬಿದ್ದಿದೆ. ದುಬೈ ಸೇರಿದಂತೆ ಅರಬ್ ರಾಷ್ಟ್ರಗಳು ಸುರಕ್ಷಿತ ಎಂಬ ಭಾವನೆ ಅಂತ್ಯಗೊಂಡಿದೆ. ಇದರಿಂದ ಅರಬ್ ರಾಷ್ಟ್ರಗಳಲ್ಲಿ ಹೂಡಿಕೆಗಳು ಕುಂಠಿತವಾಗುವ, ಕಂಪನಿಗಳು ಬೇರೆಡೆಡೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ ಎಂಬ ಆತಂಕ ಕಾಡುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಿಸಿಗೆ ಬಾಡಿಗೆ ನೀಡಲು ಮುಂದಾದ ಪತ್ನಿ, ತಿಂಗಳಿಗೆ 85000 ರೂ
ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?