ಅವಳಿ-ಜವಳಿಗೆ ಲಿಂಗ ಪರಿವರ್ತನೆ ಚಿಕಿತ್ಸೆ: ವಿಶ್ವದಲ್ಲೇ ಮೊದಲ ಪ್ರಕರಣ!

By Suvarna NewsFirst Published Feb 25, 2021, 8:02 AM IST
Highlights

ಅವಳಿ-ಜವಳಿಗೆ ಲಿಂಗ ಪರಿವರ್ತನೆ ಚಿಕಿತ್ಸೆ| ದೈಹಿಕ- ಮಾನಸಿಕ ವೈರುಧ್ಯದ ಸಮಸ್ಯೆ ನಿವಾರಣೆಗೆ ಶಸ್ತ್ರಚಿಕಿತ್ಸೆ| ಬ್ರೆಜಿಲ್‌ನಲ್ಲಿ ವಿಶ್ವದಲ್ಲೇ ಮೊದಲ ಪ್ರಕರಣ ದಾಖಲು

ಸಾವೋಪೌಲೋ(ಫೆ.25): ಬ್ರೆಜಿಲ್‌ನ ಮಾಯ್ಲಾ ಮತ್ತು ಸೋಫಿಯಾ 19ರ ಹರೆಯದ ಅವಳಿಗಳು. ಸಮಾನ ಅವಳಿಗಳಿಗಾಗಿ ಬಾಲ್ಯದಿಂದಲೂ ಒಂದೇ ರೀತಿಯ ಕನಸು, ಜೀವನ ನಡೆಸಿಕೊಂಡು ಬಂದಿದ್ದ ಈ ಅವಳಿಗೆ ಜೀವನದಲ್ಲಿ ಅದೇನೋ ಕೊರತೆಯ ಭಾವ. ದೈಹಿಕವಾಗಿ ಯುವಕರಂತಿದ್ದರೂ, ಮನಸ್ಸು ಪೂರ್ಣ ಹೆಣ್ಣಿನದು. ದೇವರು ನಮ್ಮನ್ನು ಹೆಣ್ಣಾಗಿ ಹುಟ್ಟಿಸಬಾರದಿತ್ತೇ ಎಂದು ಮಾಡಿದ ಪ್ರಾರ್ಥನೆಗೆ ಲೆಕ್ಕವಿಲ್ಲ. ಅದರಲ್ಲೂ ಲೈಂಗಿಕ ಅಲ್ಪಸಂಖ್ಯಾರೆಡೆಗೆ ಅತ್ಯಂತ ಕೀಳು ಮನೋಭಾವ ಹೊಂದಿರುವ ದೇಶದಲ್ಲೇ ಹುಟ್ಟಿಇಂಥದ್ದೊಂದು ಅವಮಾನ, ನೋವು ಎದುರಿಸಬೇಕಾಗಿದ್ದು ಬಂದಿದ್ದು ಇಬ್ಬರಿಗೂ ಇನ್ನಿಲ್ಲದ ಬೇಸರ ತರಿಸಿತ್ತು.

ಆದರೆ ಇಂಥದ್ದೆಲ್ಲ ಅವಮಾನಗಳನ್ನು ಇನ್ನಿಲ್ಲದಂತೆ ದೂರ ಮಾಡುವ ಮತ್ತು ಹೆಣ್ಣುತನದ ಸಂಭ್ರಮ ಅನುಭವಿಸುವ ಸಂಭ್ರಮ ಇದೀಗ ಮಾಯ್ಲಾ ಮತ್ತು ಸೋಫಿಯಾರಲ್ಲಿ ಮನೆ ಮಾಡಿದೆ. ಕಾರಣ ಇಬ್ಬರು ಒಟ್ಟಿಗೆ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಪರಿಣಾಮ ಗಂಡಿನ ದೇಹ, ಹೆಣ್ಣಿನ ಮನಸ್ಸಿನ ಬದಲಾಗಿ ಇಬ್ಬರಲ್ಲೂ ಇದೀಗ ಹೆಣ್ಣಿನ ದೇಹ ಮತ್ತು ಅದೇ ಮನಸ್ಸು. ಇಂಥ ಶಸ್ತ್ರಚಿಕಿತ್ಸೆ ವಿಶ್ವದಲ್ಲಿ ಹೊಸದಲ್ಲವಾದರೂ, ಅವಳಿಗಳು ಒಟ್ಟಾಗಿಯೇ ಇಂಥ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದು ವಿಶ್ವದಲ್ಲೇ ಇದೇ ಮೊದಲು ಎಂದಿದ್ದಾರೆ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಜೋಸ್‌ ಕಾರ್ಲೋಸ್‌ ಮಾರ್ಟಿನ್‌.

click me!