ವಿರೋಧ ಮುಂದುವರಿಸಿದ್ರೆ ಆಫ್ರಿಕಾಗೆ ಓಡಿಸುವೆ: ಮಸ್ಕ್‌ಗೆ ಟ್ರಂಪ್ ಎಚ್ಚರಿಕೆ

Published : Jul 02, 2025, 08:12 AM IST
Donald Trump Elon Musk

ಸಾರಾಂಶ

ತೆರಿಗೆ ಮಸೂದೆ ವಿರೋಧಿಸಿದ ಎಲಾನ್ ಮಸ್ಕ್‌ಗೆ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದು, ಟೆಸ್ಲಾ ಕಂಪನಿಗೆ ನೀಡಿರುವ ತೆರಿಗೆ ವಿನಾಯ್ತಿ ರದ್ದು ಮಾಡುವುದಾಗಿ ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಸ್ಕ್ ಹೊಸ ಪಕ್ಷ ಕಟ್ಟುವುದಾಗಿ ತಿರುಗೇಟು ನೀಡಿದ್ದಾರೆ.

ವಾಷಿಂಗ್ಟನ್: ತಮ್ಮ ಮಹತ್ವಾಕಾಂಕ್ಷಿ ತೆರಿಗೆ ಮಸೂದೆಯನ್ನು ವಿರೋಧಿಸುತ್ತಿರುವ ವಿಶ್ವದ ನಂ.1 ಶ್ರೀಮಂತ ಹಾಗೂ ತಮ್ಮ ಮಾಜಿ ಆಪ್ತ ಎಲಾನ್‌ ಮಸ್ಕ್‌ ಅವರಿಗೆ ಬೆದರಿಕೆ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವಿರೋಧ ಮುಂದುವರಿಸಿದರೆ ನಿಮ್ಮ ಟೆಸ್ಲಾ ಇ.ವಿ. ಕಾರು ಕಂಪನಿಗೆ ನೀಡಿರುವ ತೆರಿಗೆ ವಿನಾಯ್ತಿ ರದ್ದು ಮಾಡುತ್ತೇವೆ. ಹೀಗಾದರೆ ನಿಮ್ಮ ಅಂಗಡಿಯನ್ನು ಮುಚ್ಚಿಕೊಂಡು ಮಾತೃದೇಶ ದ.ಆಫ್ರಿಕಾಗೆ ಮರಳಬೇಕಾದೀತು’ ಎಂದು ಎಚ್ಚರಿಸಿದ್ದಾರೆ.

ಟ್ರಂಪ್ ಅವರು ಅಮರಿಕದಲ್ಲಿ ಈಗ ‘ಒನ್‌ ಬಿಗ್‌ ಬ್ಯೂಟಿಫುಲ್‌ ಬಿಲ್‌’ ಹೆಸರಿನ ತೆರಿಗೆ ಮಸೂದೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದಾರೆ. ಇದು ಸರ್ಕಾರ ನೀಡುವ ಸಬ್ಸಿಡಿಗಳನ್ನು 4.5 4.5 ಟ್ರಿಲಿಯನ್‌ ಡಾಲರ್‌ನಷ್ಟು ಕಡಿತಗೊಳಿಸುವ ಮತ್ತು ಮಿಲಿಟರಿ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಉದ್ದೇಶ ಹೊಂದಿದೆ.

ಆದರೆ ಸಬ್ಸಿಡಿ ಕಡಿತ ಮಾಡಿದರೆ ಅಮೆರಿಕ ಆರ್ಥಿಕತೆಗೆ ಹೊಡೆತ ಬೀಳಲಿದೆ. ಇದು ಕಂಪನಿಗಳಿಗೆ ಹೊಡೆತ ನೀಡಿ ಭಾರಿ ಉದ್ಯೋಗ ಹಾನಿಗೆ ಕಾರಣವಾಗಬಹುದು. ಇದನ್ನು ಜಾರಿಗೆ ತರಬಾರದು ಎಂಬುದು ಮಸ್ಕ್‌ ವಾದ. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಅಮೆರಿಕದ ಆಡಳಿತ ಸುಧಾರಣಾ ವಿಭಾಗಕ್ಕೆ ರಾಜೀನಾಮೆ ನೀಡಿದ್ದರು. ಮಸ್ಕ್‌ ಮೂಲತಃ ದಕ್ಷಿಣ ಆಫ್ರಿಕದವರು. ಅಲ್ಲಿಂದ ವಲಸೆ ಬಂದು ಅಮೆರಿಕದಲ್ಲಿ ಉದ್ಯಮ ಕಟ್ಟಿದ್ದರು.

ಹೊಸ ಪಕ್ಷ ಕಟ್ಟುವೆ: ಟ್ರಂಪ್‌ಗೆ ಮಸ್ಕ್‌ ತಿರುಗೇಟು

‘ಅಮೆರಿಕ ಸೆನೆಟ್‌ನಲ್ಲಿ ಟ್ರಂಪ್‌ರ ಖರ್ಚು ಮಸೂದೆಯನ್ನು ಅಂಗೀಕರಿಸಿದರೆ, ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್ ಪಕ್ಷಗಳಿಗೆ ಪರ್ಯಾಯವಾಗಿ ಅಮೆರಿಕನ್ ಪಾರ್ಟಿ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸುವೆ’ ಎಂದು ಅಧ್ಯಕ್ಷ ಟ್ರಂಪ್‌ಗೆ ಟೆಸ್ಲಾ ಕಂಪನಿ ಮಾಲೀಕ ಹಾಗೂ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್ ಎಚ್ಚರಿಸಿದ್ದಾರೆ.ಟೆಸ್ಲಾ ಕಂಪನಿಯ ತೆರಿಗೆ ಕಡಿತದ ಎಚ್ಚರಿಕೆ ನೀಡಿರುವ ಟ್ರಂಪ್‌ಗೆ ಸವಾಲು ಎಸೆದಿರುವ ಮಸ್ಕ್‌, ‘ನೋಡೇಬಿಡೋಣ. ನಮ್ಮ ಕಂಪನಿ ಮೇಲಿನ ತೆರಿಗೆ ವಿನಾಯ್ತಿ ನಿಲ್ಲಿಸಿ. ಅಲ್ಲದೆ, ಈ ಹುಚ್ಚುತನದ ತೆರಿಗೆ ಮಸೂದೆ ಅಂಗೀಕಾರವಾದರೆ, ಮರುದಿನ ಅಮೆರಿಕ ಪಕ್ಷ ರಚನೆಯಾಗುತ್ತದೆ. ನಮ್ಮ ದೇಶಕ್ಕೆ ಡೆಮಾಕ್ರಾಟ್-ರಿಪಬ್ಲಿಕನ್ ಯುನಿಪಾರ್ಟಿಗೆ ಪರ್ಯಾಯ ಪಕ್ಷದ ಅಗತ್ಯವಿದೆ. ಇದರಿಂದ ಜನರಿಗೆ ನಿಜವಾಗಿಯೂ ಧ್ವನಿ ಇರುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

ಟ್ರಂಪ್‌ ಅವರು ಕಂಪನಿಗಳಿಗೆ ನೀಡುವ ಸಬ್ಸಿಡಿ ಕಡಿತ ಮಾಡಿದರೆ ಅಮೆರಿಕ ಆರ್ಥಿಕತೆಗೆ ಹೊಡೆತ ಬೀಳಲಿದೆ. ಇದು ಕಂಪನಿಗಳಿಗೆ ಹೊಡೆತ ನೀಡಿ ಭಾರಿ ಉದ್ಯೋಗ ಹಾನಿಗೆ ಕಾರಣವಾಗಬಹುದು. ಇದನ್ನು ಜಾರಿಗೆ ತರಬಾರದು ಎಂಬುದು ಮಸ್ಕ್‌ ವಾದ. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಅಮೆರಿಕದ ಆಡಳಿತ ಸುಧಾರಣಾ ವಿಭಾಗಕ್ಕೆ ರಾಜೀನಾಮೆ ನೀಡಿದ್ದರು.

ಭಾರತದ ಮೇಲೆ ಟ್ರಂಪ್ ಶೇ.500 ತೆರಿಗೆ?

ವಾಷಿಂಗ್ಟನ್: ಭಾರತ ಮತ್ತು ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಶೇ.500 ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ. ‘ನೀವು ರಷ್ಯಾದಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕಕ್ಕೆ ಬರುವ ನಿಮ್ಮ ಉತ್ಪನ್ನಗಳ ಮೇಲೆ ಶೇ. 500 ರಷ್ಟು ಸುಂಕ ವಿಧಿಸಲಾಗುತ್ತದೆ’ ಎಂದು ಲಿಂಡ್ಡ್ ಹೇಳಿದ್ದಾರೆ. ಭಾರತ ಮತ್ತು ಚೀನಾ ರಷ್ಯಾದಿಂದ ಶೇ.70ರಷ್ಟು ತೈಲ ಖರೀದಿಸುತ್ತವೆ.

ಇದನ್ನೂ ಓದಿ: ಉಟ್ಹಾ ರಾಧಾ ಕೃಷ್ಣ ಮಂದಿರ ಮೇಲೆ 20 ಸುತ್ತು ಗುಂಡಿನ ದಾಳಿ, ದೇವರ ಕೃಪೆಯಿಂದ ಎಲ್ಲರೂ ಸೇಫ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ
ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ