
ವಾಷಿಂಗ್ಟನ್: ‘ನಮ್ಮ ಜತೆ ಒಪ್ಪಂದ ಮಾಡಿಕೊಳ್ಳಲು ಇರಾನ್ ಬೇಡಿಕೊಳ್ಳುತ್ತಿದೆ. ಒಂದು ವೇಳೆ ಅದು ಭಾನುವಾರದೊಳಗೆ ಒಪ್ಪಂದಕ್ಕೆ ಬರದಿದ್ದರೆ ಮುಂದಿನ ದಿನಗಳಲ್ಲಿ ಅಮೆರಿಕ ಹೊಸ ದಾಳಿ ನಡೆಸಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.
ಅಲ್ಲದೆ, ‘ಮಂಗಳವಾರವೇ ನಾವು ದಾಳಿ ಮಾಡಬೇಕಿತ್ತು. ಇನ್ನೇನು 1 ತಾಸಿನಲ್ಲಿ ನಾವು ದಾಳಿ ಮಾಡುವವರಿದ್ದೆವು. ಆದರೆ ಮಧ್ಯಪ್ರಾಚ್ಯ ದೇಶಗಳ ಕೋರಿಕೆ ಮೇಲೆ ಸುಮ್ಮನಾದೆವು’ ಎಂದು ಪುನರುಚ್ಚರಿಸಿದ್ದಾರೆ,
ಮಂಗಳವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್, ‘ಕಳೆದ 2-3 ದಿನಗಳಲ್ಲಿ ಮಾತುಕತೆಯ ಬಗ್ಗೆ ಪ್ರಗತಿ ಆಗಿದೆ. ಡೀಲ್‌ಗೆ ಅವರು (ಇರಾನ್) ಹಾತೊರೆಯುತ್ತಿದ್ದಾರೆ. ಆದರೆ ಅವರು ನಿರ್ಧಾರ ಮಾಡಬೇಕಷ್ಟೆ. ಇನ್ನು 2 ಅಥವಾ 3 ದಿನಗಳು, ಬಹುಶಃ ಶುಕ್ರವಾರ, ಶನಿವಾರ, ಭಾನುವಾರ. ಸಮಯ ತುಂಬಾ ಕಡಿಮೆ ಇದೆ. ಏಕೆಂದರೆ ನಾವು ಅವರಿಗೆ ಹೊಸ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಲು ಸಾಧ್ಯವೇ ಇಲ್ಲ’ ಎಂದರು. ಈ ಮೂಲಕ ವಾರದೊಳಿಗೆ ಇರಾನ್ ಡೀಲ್ ಮಾಡಿಕೊಳ್ಳಬೇಕು ಎಂದು ಪರೋಕ್ಷವಾಗಿ ನುಡಿದರು.
ಇಲ್ಲದೇ ಹೋದರೆ ಯುದ್ಧ ಮಾಡುವ ಸುಳಿವು ನೀಡಿದ ಅವರು, ‘ಇದುವರೆಗಿನ ಮಿಲಿಟರಿ ಕ್ರಮವು ಬಹಳ ಜನಪ್ರಿಯವಾಗಿದೆ. ಮುಂದೆ ಅದು ಜನಪ್ರಿಯವಾಗಲಿ ಅಥವಾ ಇಲ್ಲದಿರಲಿ, ನಾನು ಅದನ್ನು ಮಾಡಲೇಬೇಕು’ ಎಂದರು.
ಇರಾನ್ ಮೇಲೆ ಮಂಗಳವಾರವೇ ನಾವು ದಾಳಿ ಮಾಡಬೇಕಿತ್ತು. ಇನ್ನೇನು 1 ತಾಸಿನಲ್ಲಿ ನಾವು ದಾಳಿ ಮಾಡುವವರಿದ್ದೆವು. ಆದರೆ ಮಧ್ಯಪ್ರಾಚ್ಯ ದೇಶಗಳ ಕೋರಿಕೆ ಮೇಲೆ ಸುಮ್ಮನಾದೆವು. ಒಪ್ಪಂದಕ್ಕಾಗಿ ಇರಾನ್ ಬೇಡಿಕೊಳ್ಳುತ್ತಿದೆ. ಭಾನುವಾರದೊಳಗೆ ಒಪ್ಪಂದಕ್ಕೆ ಬರದಿದ್ದರೆ ದಾಳಿ ನಡೆಸುತ್ತೇವೆ.
- ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ