Saudi Arabia Executions: ಸೌದಿ ಅರೇಬಿಯಾದಲ್ಲಿ ಶನಿವಾರ ಒಂದೇ ದಿನದಲ್ಲಿ 8 ಜನರಿಗೆ ಮರಣದಂಡನೆ ದಾಖಲೆ, ಏಕೆ ಅಷ್ಟೊಂದು ಜನರಿಗೆ ಗಲ್ಲಿಗೇರಿಸಲಾಯಿತು?

Published : Aug 04, 2025, 06:42 AM ISTUpdated : Aug 04, 2025, 10:32 AM IST
 Saudi Arabia Breaks Execution Record

ಸಾರಾಂಶ

ಸೌದಿ ಅರೇಬಿಯಾದಲ್ಲಿ ಒಂದೇ ದಿನ 8 ಜನರಿಗೆ ಮರಣದಂಡನೆ ವಿಧಿಸಲಾಗಿದೆ. ಏಳು ಮಂದಿ ಮಾದಕವಸ್ತು ಕಳ್ಳಸಾಗಣೆ ಮತ್ತು ಒಬ್ಬ ವ್ಯಕ್ತಿ ತಾಯಿಯ ಕೊಲೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಘಟನೆ ಮಾನವ ಹಕ್ಕುಗಳ ಕಾರ್ಯಕರ್ತರಿಂದ ಟೀಕೆಗೆ ಗುರಿಯಾಗಿದೆ.

ರಿಯಾದ್ (ಆ.4): ಸೌದಿ ಅರೇಬಿಯಾದಲ್ಲಿ ಶನಿವಾರ ಒಂದೇ ದಿನ 8 ಜನರಿಗೆ ಮರಣದಂಡನೆ ವಿಧಿಸಲಾಗಿದೆ, ಇದು ದೇಶದ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಶಿಕ್ಷೆಯಾಗಿದೆ. ಸೌದಿ ಪ್ರೆಸ್ ಏಜೆನ್ಸಿ (SPA) ವರದಿಯ ಪ್ರಕಾರ, ಏಳು ಮಂದಿಯನ್ನು ಮಾದಕವಸ್ತು ಕಳ್ಳಸಾಗಣೆ ಆರೋಪದಲ್ಲಿ ಮತ್ತು ಒಬ್ಬ ವ್ಯಕ್ತಿಯನ್ನು ತನ್ನ ತಾಯಿಯ ಕೊಲೆಗಾಗಿ ಗಲ್ಲಿಗೇರಿಸಲಾಗಿದೆ.

ನಜ್ರಾನ್‌ನ ದಕ್ಷಿಣ ಪ್ರದೇಶದಲ್ಲಿ 'ಹ್ಯಾಶಿಶ್ ಕಳ್ಳಸಾಗಣೆ'ಗಾಗಿ ನಾಲ್ವರು ಸೊಮಾಲಿ ಮತ್ತು ಮೂವರು ಇಥಿಯೋಪಿಯನ್ ಪ್ರಜೆಗಳಿಗೆ ಶಿಕ್ಷೆ ವಿಧಿಸಲಾಗಿದೆ. 2025ರಲ್ಲಿ ಇಲ್ಲಿಯವರೆಗೆ 230 ಜನರಿಗೆ ಮರಣದಂಡನೆ ನೀಡಲಾಗಿದ್ದು, ಇದರಲ್ಲಿ 154 ಮಂದಿ ಮಾದಕವಸ್ತು ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದವರಾಗಿದ್ದಾರೆ. 2024ರಲ್ಲಿ 338 ಶಿಕ್ಷೆಗಳ ದಾಖಲೆಯನ್ನು 2025 ಮೀರಿಸುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.

2023ರಲ್ಲಿ ಆರಂಭವಾದ 'ಮಾದಕ ವಸ್ತುಗಳ ವಿರುದ್ಧ ಯುದ್ದ ಅಭಿಯಾನದಿಂದಾಗಿ ಮರಣದಂಡನೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2019-2022ರವರೆಗೆ ಮಾದಕವಸ್ತು ಪ್ರಕರಣಗಳಲ್ಲಿ ಮರಣದಂಡನೆಗೆ ನಿಷೇಧವಿತ್ತಾದರೂ, 2024ರಲ್ಲಿ 117 ಮತ್ತು 2025ರಲ್ಲಿ ಇದುವರೆಗೆ 154 ಶಿಕ್ಷೆಗಳು ದಾಖಲಾಗಿವೆ.

ಮಾನವ ಹಕ್ಕುಗಳ ಟೀಕೆ:

ಮಾನವ ಹಕ್ಕುಗಳ ಕಾರ್ಯಕರ್ತರು ಈ ಆಗಾಗ್ಗೆ ನಡೆಯುವ ಮರಣದಂಡನೆಗಳನ್ನು ಖಂಡಿಸಿದ್ದು, ಇದು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ 'ವಿಷನ್ 2030' ಯೋಜನೆಯ 'ಮುಕ್ತ ಸಮಾಜ' ಇಮೇಜ್‌ಗೆ ಹಾನಿಕಾರಕ ಎಂದಿದ್ದಾರೆ. ಆದರೆ, ಸೌದಿ ಸರ್ಕಾರವು ಸಾರ್ವಜನಿಕ ಸುವ್ಯವಸ್ಥೆಗಾಗಿ ಮರಣದಂಡನೆ ಅಗತ್ಯ ಮತ್ತು ಕಾನೂನು ಪ್ರಕ್ರಿಯೆಯ ನಂತರವೇ ನೀಡಲಾಗುತ್ತದೆ ಎಂದು ಸಮರ್ಥಿಸಿಕೊಂಡಿದೆ. ಈ ಘಟನೆ ಜಾಗತಿಕ ಗಮನ ಸೆಳೆದಿದ್ದು, ಮರಣದಂಡನೆ ನೀತಿಯ ಕುರಿತು ಚರ್ಚೆಗೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!