
ಈ ವಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪತ್ನಿ, ಪ್ರಥಮ ಮಹಿ ಳೆ ಮೆಲಾನಿಯಾ ಟ್ರಂಪ್ ಅವರನ್ನು ಖಾಸಗಿಯಾಗಿ, ಮಲಗುವ ಸಮಯದಲ್ಲೂ ಸಹ 'first lady' ಎಂದು ಕರೆಯುವುದಾಗಿ ಬಹಿರಂಗಪಡಿಸಿದರು. ಆದರೆ, ಈ ಕರೆಯುವಿಕೆಯು ರೊಮ್ಯಾಂಟಿಕ್‌ಗಿಂತ ಹೆಚ್ಚಾಗಿ ವಿಶಿಷ್ಟವಾಗಿದೆ ಎಂದು ಅವರು ತಿಳಿಸಿದರು.
ಗುರುವಾರ, ಅಯೋವಾದಲ್ಲಿ ನಡೆದ ಮಿಲಿಟರಿ ನೇಮಕಾತಿ ಕುರಿತು ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಈ ವಿಚಾರ ಬಹಿರಂಗಪಡಿಸಿದರು.
ಒಂದು ವರ್ಷದ ಹಿಂದೆ, ನಾನು ನಮ್ಮ ಮಹಾನ್ ಪ್ರಥಮ ಮಹಿಳೆಗೆ(US first lady), ಎಂದು ಕರೆದಿದ್ದನ್ನು ನೆನಪಿಸಿಕೊಳ್ಳುತ್ತೇನೆ," ಎಂದು ಟ್ರಂಪ್ ಹೇಳಿದರು. "ನಾನು ಅವರನ್ನು 'First lady' ಎಂದು ಕರೆಯುತ್ತೇನೆ, ಏಕೆಂದರೆ ಅದು ನನಗೆ ಒಳ್ಳೆಯ ಭಾವನೆ ನೀಡುತ್ತದೆ. 'ಶುಭರಾತ್ರಿ, First lady, ನನ್ನ ಪ್ರಿಯತಮೆ' ಎಂದು ಹೇಳುವುದು ತುಂಬಾ ವಿಶೇಷವಾಗಿದೆ, ಆದರೆ ರೊಮ್ಯಾಂಟಿಕ್ ಅಲ್ಲವೇ? ಎಂದು ಅವರು ಹಾಸ್ಯದಿಂದ ತಿಳಿಸಿದರು. ಹಿಂದಿನ ಕಾರಣವನ್ನು ವಿವರಿಸುವಾಗ, ಟ್ರಂಪ್, ಇದು ನನಗೆ ನಾನು ಅಧ್ಯಕ್ಷ ಎಂಬುದನ್ನು ನೆನಪಿಸುತ್ತದೆ. ಅದಕ್ಕಾಗಿಯೇ ನಾನು ಆ ಹೆಸರನ್ನು ಬಳಸುತ್ತೇನೆ ಎಂದರು.
ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಕಳೆದ ವರ್ಷದ ಚುನಾವಣೆಯಲ್ಲಿ ಟ್ರಂಪ್ ಗೆಲುವಿನ ನಂತರ, ಸಾಂಕ್ರಾಮಿಕ ಯುಗದ ಕನಿಷ್ಠ ಮಟ್ಟದಿಂದ ಮಿಲಿಟರಿ ಸೇರ್ಪಡೆಯ ಸಂಖ್ಯೆ ಚೇತರಿಸಿಕೊಳ್ಳುತ್ತಿದೆ. ಈ ಸಾಧನೆಗೆ ಟ್ರಂಪ್ ಹೆಗ್ಗಳಿಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ