
ದುಬೈ: ಸರ್ವಾಧಿಕಾರಿ ಆಯತೋಲ್ಲಾ ಖಮೇನಿ ವಿರೋಧಿ ಪ್ರತಿಭಟನೆಯ ಕಾವಿನಿಂದ ಇರಾನ್ ಹೊತ್ತಿ ಉರಿಯುತ್ತಿರುವ ನಡುವೆಯೇ, ಪ್ರತಿಭಟನಾಕಾರರಿಗೆ ಮರಣ ದಂಡನೆ ವಿಧಿಸಬೇಕೆಂದು ಇಸ್ಲಾಮಿಕ್ ಧರ್ಮಗುರುವೊಬ್ಬರು ಕರೆ ನೀಡಿದ್ದಾರೆ. ಜೊತೆಗೆ, ಪ್ರತಿಭಟನಾಕಾರರ ನೆರವಿಗೆ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ನೇರವಾಗಿ ಕರೆ ನೀಡಿದ್ದಾರೆ.
ಇರಾನ್‌ನ ಗಾರ್ಡಿಯನ್ ಕೌನ್ಸಿಲ್‌ನ ಸದಸ್ಯರಾಗಿರುವ ಧರ್ಮಗುರು ಆಯತೋಲ್ಲಾ ಅಹ್ಮದ್ ಖತಾಮಿ ರೇಡಿಯೋ ಮೂಲಕ ಸಂದೇಶ ರವಾನಿಸಿದ್ದು, ‘ಶಸ್ತ್ರಸಜ್ಜಿತ ಕಪಟಿಗಳನ್ನು ಕೊಲ್ಲಬೇಕು. ಖಮೇನಿ ವಿರೋಧಿ ಪ್ರತಿಭಟನಾಕಾರರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಸೇವಕರಂತೆ ವರ್ತಿಸುತ್ತಿದ್ದಾರೆ. ನೆತನ್ಯಾಹು ಮತ್ತು ಟ್ರಂಪ್ ಇರಾನ್‌ನಿಂದ ಬರಲಿರುವ ಕಠಿಣ ಸೇಡಿನ ಕ್ರಮಕ್ಕೆ ಕಾಯಬೇಕು. ಅಮೆರಿಕನ್ನರು ಮತ್ತು ಯಹೂದಿಗಳು ಶಾಂತಿಯನ್ನು ನಿರೀಕ್ಷಿಸಬಾರದು’ ಎಂದಿದ್ದಾರೆ. ಈ ಮೂಲಕ ನೆತನ್ಯಾಹು ಮತ್ತು ಟ್ರಂಪ್‌ಗೆ ನೇರವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ.
ಇರಾನ್‌ನಲ್ಲಿ ಪ್ರತಿಭಟನಾಕಾರರಿಂದ ಉಂಟಾದ ಹಾನಿಯ ಅಂಕಿ ಅಂಶಗಳನ್ನು ಸಹ ಖತಾಮಿ ಹಂಚಿಕೊಂಡಿದ್ದಾರೆ. 350 ಮಸೀದಿಗಳು, 126 ಪ್ರಾರ್ಥನಾ ಮಂಟಪಗಳು, 20 ಇತರ ಪವಿತ್ರ ಸ್ಥಳಗಳು, 80 ಧಾರ್ಮಿಕ ಮುಖಂಡರ ಮನೆಗಳಿಗೆ ಹಾನಿಯಾಗಿದೆ. 400 ಆಸ್ಪತ್ರೆಗಳು, 106 ಆಂಬ್ಯುಲೆನ್ಸ್‌ಗಳು, 71 ಅಗ್ನಿಶಾಮಕ ದಳದ ವಾಹನಗಳು ಮತ್ತು 50 ತುರ್ತು ವಾಹನಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ