ಭಾರತದ ಗಾಳಿ ಹೊಲಸು ಎಂದ ಟ್ರಂಪ್..!

By Suvarna NewsFirst Published Oct 23, 2020, 12:12 PM IST
Highlights

ಭಾರತ, ಚೀನಾ ಗಾಳಿ ಹೊಲಸು ಎಂದ ಟ್ರಂಪ್ | ಚುನಾವಣಾ ಭಾಷಣದಲ್ಲಿ ಟ್ರಂಪ್ ಮಾತು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಚೀನಾದ ಗಾಳಿ ಹೊಲಸು ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಕಾವೇರಿದ್ದು, ಪ್ರಚಾರದ ಭಾಷಣದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಪ್ರತಿಸ್ಪರ್ಧಿ ಜೋ ಬಿಡನ್ ಅವರ ಯೋಜನೆಯನ್ನು ಟ್ರಂಪ್ ಖಂಡಿಸಿದ್ದಾರೆ. ಎರಡನೇ ಹಂತದ ಕೊನೆಯ ಪ್ರಚಾರದಲ್ಲಿ ಇದೇ ವಿಚಾರವಾಗಿ ಮಾತನಾಡಿದ ಟ್ರಂಪ್, ಹವಾಮಾನ ವೈಪರೀತ್ಯದ ಕ್ರಮಗಳಲ್ಲಿ ಅಮೆರಿಕಾಗೆ ಅನ್ಯಾಯವಾಗಿದೆ ಎಂದು ಟ್ರಂಪ್ ಪ್ರತಿಸ್ಪರ್ಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೈಡನ್‌ಗೆ ಬಲ ತುಂಬಿದ ಒಬಾಮಾ, ಟ್ರಂಪ್ ಆಡಳಿತ ವೈಖರಿ ಟೀಕಿಸಿದ ಮಾಜಿ ಅಧ್ಯಕ್ಷ!

ಬೈಡನ್ ಮಾಡಿರೋ ಹವಾಮಾನ ಯೋಜನೆ ತೈಲ ನೀಡುವ ಟೆಕ್ಸಾಸ್ ಒಕ್ಲಹೋಮಾಗಳಿಗೆ ಆರ್ಥಿಕ ದಿವಾಳಿ ಯೋಜನೆಯಾಗಿ ಪರಿಣಮಿಸಿದೆ ಎಂದೂ ಆರೋಪಿಸಿದ್ದಾರೆ. ಹವಾಮಾನ ವೈಪರೀತ್ಯ ಸದ್ಯ ಮಾನವಕುಲಕ್ಕಿರುವ ದೊಡ್ಡ ಅಪಾಯ. ನಾವು ಅದನ್ನು ನೈತಿಕವಾಗಿ ಎದುರಿಸಲಿದ್ದೇವೆ ಎಂದು ಬೈಡನ್ ಹೇಳಿದ್ದರು. ಇದನ್ನು ಮುಂದಿನ 8 \ 10 ವರ್ಷದಲ್ಲಿ ಮಾಡಿತೋರಿಸಲಿದ್ದೇವೆ ಎಂದಿದ್ದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 03ರಂದು ನಿಗದರಿಯಾಗಿದ್ದು, ಕೊರೋನಾ ಮಧ್ಯೆಯೂ ಚುನಾವಣಾ ಪ್ರಚಾರ ಅಬ್ಬರವಾಗಿ ಸಾಗಿದೆ. ಮಾಜಿ ಅಧ್ಯಕ್ಷ ಒಬಾಮಾ ಅವರು ಟ್ರಂಪ್ ಪ್ರತಿಸ್ಪರ್ಧಿಯನ್ನು ಬೆಂಬಲಿಸಿರುವುದು ಗಮನಾರ್ಹ

click me!