
ನ್ಯೂಯಾರ್ಕ್ (ಆ.09) ಅಮೆರಿಕ ಇದೀಗ ಬಹುತೇಕ ರಾಷ್ಟ್ರದ ಮೇಲಿನ ತೆರಿಗೆ ನೀತಿಯನ್ನು ಪರಿಷ್ಕರಣೆಗೊಳಿಸಿದೆ. ಈ ಪೈಕಿ ತನ್ನ ಆಪ್ತ, ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ದೇಶಗಳಿಗೆ ಕಡಿಮೆ ತೆರಿಗೆ ವಿಧಿಸಿದ್ದರೆ, ದೈತ್ಯ ಶಕ್ತಿಯಾಗಿ ಬೆಳೆಯುವ ರಾಷ್ಟ್ರಗಳಿಗೆ ದುಬಾರಿ ತೆರಿಗೆ ವಿಧಿಸಿದೆ. ಭಾರತದ ಮೇಲೆ ಶೇಕಡಾ 50 ರಷ್ಟು ತೆರಿಗೆ ವಿಧಿಸಲಾಗಿದೆ. ಕೆಲ ಉತ್ಪನ್ನಗಳ ಮೇಲೆ ಶೇಕಡಾ 63ರಷ್ಟು ತೆರಿಗೆ ವಿಧಿಸಿದ್ದಾರೆ. ಈ ಬೆಳವಣಿಗೆ ನಡುವೆ ಅಮೆರಿಕಗೆ ಹೊಸ ಸಂಕಷ್ಟ ಎದುರಾಗಿದೆ. ಅಮೆರಿಕದಲ್ಲಿ ಇದೀಗ ಕೋವಿಡ್ ವೈರಸ್ ಸ್ಫೋಟಗೊಂಡಿದೆ. ಪ್ರಮುಖವಾಗಿ ಪಶ್ಚಿಮ ಅಮರೆಕದಲ್ಲಿ ಕೋವಿಡ್ ಸ್ಫೋಟಗೊಂಡಿದ್ದು, ಮಾರ್ಗಸೂಚಿ ಹೊರಡಿಸಲಾಗಿದೆ.
ಅಮೆರಿಕದ ಸೆಂಟರ್ ಫಾರ್ ಡೀಸಿಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ ಕೇಂದ್ರ ಕೋವಿಡ್ ಮಾಹಿತಿ ನೀಡಿದೆ. ಕಳೆದ ವಾರದ ಅಮೆರಿಕದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ನಿಧಾನವಾಗಿ ಏರಿಕೆಯಾಗಿತ್ತು. ಆದರೆ ಈ ವಾರ ಒಂದೇ ಸಮನೇ ಏರಿಕೆಯಾಗಿದೆ. ಅಲಸ್ಕಾ, ಕ್ಯಾಲಿಫೋರ್ನಿಯಾ, ಕೊಲರ್ಯಾಡೋ, ನಿವೆಡಾ, ಉಟ್ಹ ಸೇರಿದಂತೆ ಪಶ್ಚಿಮ ಅಮೆರಿಕದಲ್ಲಿ ಕೋವಿಡ್ ದಿಢೀರ್ ಏರಿಕೆಯಾಗಿದೆ. 45 ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ ಎಂದು ಸಿಡಿಸಿ ಹೇಳಿದೆ. ಕಳೆದ ವಾರ 40 ರಾಜ್ಯದಲ್ಲಿ ಪತ್ತೆಯಾಗಿತ್ತು.
ಈ ಬಾರಿ ಕೋವಿಡ್ ಪ್ರಕರಣ ಹೆಚ್ಚಾಗಿ ಮಕ್ಕಳಲ್ಲಿ ಪತ್ತೆಯಾಗುತ್ತಿದೆ. ಅದರಲ್ಲೂ ನಾಲ್ಕು ವರ್ಷದ ಮಕ್ಕಳಲ್ಲಿ ತೀವ್ರ ಪರಿಣಾಮ ಬೀರುತ್ತಿದೆ. ಇಡೀ ಅಮೆರಿಕದಲ್ಲಿ ಪ್ರಕರಣ ಸಂಖ್ಯೆಗೆ ಹೋಲಿಸಿದರೆ ಕಡಿಮೆ ಇದೆ. ಆದರೆ ಪ್ರತಿ ರಾಜ್ಯದಲ್ಲಿ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ ಎಂದಿದೆ. ಪೋಷಕರು ತೀವ್ರ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಮಕ್ಕಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ ಜ್ವರ, ಕೆಮ್ಮು, ಶೀತ ಸೇರಿದಂತೆ ಕೋವಿಡ್ ಗುಣಲಕ್ಷ್ಮಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರ ಸಂಪರ್ಕಿಸಲು ಸಿಡಿಸಿ ಸೂಚಿಸಿದೆ. ಕೋವಿಡ್ ಪ್ರಕರಣ ಸಂಬಂಧ 45 ರಾಜ್ಯಗಳಲ್ಲಿ ಟೆಸ್ಟಿಂಗ್, ಸೂಕ್ತ ಚಿಕಿತ್ಸೆಗೆ ಸೂಚಿಸಲಾಗಿದೆ.
ಈ ಬಾರಿ ಅಮೆರಿಕದಲ್ಲಿ ಕೋವಿಡ್ NB.1.8.1 ವೇರಿಯೆಂಟ್ ಅಥವಾ ನಿಂಬಸ್ ವೇರಿಯೆಂಟ್ ಕಾಣಿಸಿಕೊಂಡಿದೆ. ಈ ವೇರಿಯೆಂಟ್ ಅತೀ ವೇಗವಾಗಿ ಹರಡುತ್ತಿದೆ. ಇದರ ಗುಣಲಕ್ಷಣಗಳಲ್ಲಿ ಅತೀ ವೇಗವಾಗಿ ಹರಡುವಿಕೆ ಒಂದಾಗಿದೆ. ಸದ್ಯ ಹಲವು ಪ್ರಕರಣಗಳು ಮೈಲ್ಡ್ ಕೇಸ್ ಆಗಿವೆ ಎಂದು ಸಿಡಿಸಿ ಹೇಳಿದೆ. ಯಾರು ಆತಂಕಪಡುವ ಅಗತ್ಯವಿಲ್ಲ.ಗುಣಲಕ್ಷಣಗಳಿದ್ದರೆ ವೈದ್ಯರ ಸಂಪರ್ಕಿಸಲು ಸೂಚಿಸಿದೆ. ಆಸ್ಪತ್ರೆ ದಾಖಲಾಗುತ್ತಿರುವ ಪ್ರಮಾಣ ಕಡಿಮೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಅಮೆರಿಕದ 45 ರಾಜ್ಯಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ. ಮುಂಜಾಗ್ರತೆ ವಹಿಸಲು ನಿರ್ದೇಶ ನೀಡಲಾಗಿದೆ. ಇದೇ ವೇಳೆ ವಯಸ್ಕರು, ಹಿರಿಯ ನಾಗರೀಕರು ಕೋವಿಡ್ ವ್ಯಾಕ್ಸಿನ್ ಪಡೆದಿದ್ದರೆ, ತಕ್ಷಣವೇ ಪಡೆಯಲು ಸೂಚಿಸಿದೆ. ಇದೇ ವೇಳೆ ಬೂಸ್ಟರ್ ಡೋಸ್ ಕೂಡ ಲಭ್ಯವಿದೆ ಎಂದು ಸಿಡಿಸಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ