
ಢಾಕಾ(ಜು.08): 51 ಸೆಂ.ಮೀ (20 ಇಂಚು) ಎತ್ತರದ ಹಸು ರಾಣಿಯನ್ನು ನೋಡಲು ಸಾವಿರಾರು ಜನರು ಬಾಂಗ್ಲಾದೇಶಕ್ಕೆ ತಲುಪುತ್ತಿದ್ದಾರೆ, ಇದು ವಿಶ್ವದ ಅತಿ ಚಿಕ್ಕ ಹಸು ಎಂಬುವುದು ಇದರ ಮಾಲೀಕರ ಮಾತಾಗಿದೆ. 23 ತಿಂಗಳ ಕುಬ್ಜ ಹಸು ಢಾಕಾದ ಬಳಿ ಸಿಕ್ಕ ಈ ಹಸು ಈಗ ಪತ್ರಿಕೆಗಳು ಮತ್ತು ದೂರದರ್ಶನಗಳಲ್ಲಿ ಸದ್ದು ಮಾಡುತ್ತಿದ್ದು, ಸ್ಟಾರ್ ಆಗಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಣಿಯ ಚಿತ್ರಗಳು ಹೆಚ್ಚು ವೈರಲ್ ಆಗುತ್ತಿವೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಣಿಯ ಚಿತ್ರಗಳು ಹೆಚ್ಚು ವೈರಲ್ ಆಗುತ್ತಿವೆ.
ಕೊರೋನಾದಿಂದಾಗಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಸಾರಿಗೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಿದ್ದರೂ ನೈರುತ್ಯ ಢಾಕಾದ 30 ಕಿಲೋಮೀಟರ್ (19 ಮೈಲಿ) ದೂರದಲ್ಲಿರುವ ಚಾರಿಗ್ರಾಮದಲ್ಲಿ ರಾಣಿಯನ್ನು ನೋಡಲು ಜನರು ಸ್ವಂತ ವಾಹನಗಳಲ್ಲಿ ಧಾವಿಸುತ್ತಿದ್ದಾರೆ. ಇನ್ನು ರಾಣಿಯನ್ನು ನೋಡಲು ಬಂದ ನೆರೆ ಹಳ್ಳಿಯ 30 ವರ್ಷದ ರೀನಾ ಬೇಗಂ ಇಂತಹ ದೃಶ್ಯ ನಾನು ಯಾವತ್ತೂ ಕಂಡಿಲ್ಲ ಎಂದಿದ್ದಾರೆ.
66 ಸೆಂ.ಮೀ (26 ಇಂಚು) ಎತ್ತರದ ರಾಣಿಯ ತೂಕ 26 ಕೆಜಿ (57 ಪೌಂಡು) ಇದೆ. ಇನ್ನು ಇದು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದ ಅತ್ಯಂತ ಚಿಕ್ಕ ಹಸುಗಿಂತ 10 ಸೆಂ.ಮೀ ಗಿಡ್ಡವಿದೆ ಎಂಬುವುದು ಮಾಲೀಕರ ಮಾತಾಗಿದೆ. ಕೊರೋನಾ ವೈರಸ್ ಲಾಕ್‌ಡೌನ್ ಹೊರತಾಗಿಯೂ, ಜನರು ದೂರದೂರುಗಳಿಂದ ಇದನ್ನು ನೋಡಲು ಬರುತ್ತಿದ್ದಾರೆ. ಅಲ್ಲದೇ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ