
ಬೆಂಗಳೂರು (ನ.8): ಜಗತ್ತಿನಲ್ಲಿ ಸಾಮಾನ್ಯ ವಸ್ತುವಿನಂತೆ ಕಾಣುವ ಅನೇಕ ವಸ್ತುಗಳು ಇವೆ, ಆದರೆ ಅವುಗಳ ಬೆಲೆ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿರುತ್ತದೆ. ನಾವು-ನೀವು ಅದನ್ನು ಊಹಿಸಲೂ ಸಾಧ್ಯವಿಲ್ಲ. ಇಂದು ನಾವು ನಿಮಗೆ ಅಂತಹ ಒಂದು ನಾಣ್ಯದ ಸುದ್ದಿಯನ್ನು ಹೇಳಲಿದ್ದೇವೆ. ಹೆಚ್ಚೆಂದರೆ ಈ ನಾಣ್ಯವನ್ನು ತಯಾರಿಸಲು ಕೆಲವು ನೂರು ಅಥವಾ ಸಾವಿರ ರೂಪಾಯಿಗಳು ಖರ್ಚಾಗಿರಬಹುದು. ಆದರೆ, ಹರಾಜಿನಲ್ಲಿ ಈ ನಾಣ್ಯ ಮಾರಾಟವಾದಾಗ ಇದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ ಆಗಿದೆ. ಈ ನಾಣ್ಯವನ್ನು 1975 ರಲ್ಲಿ ತಯಾರಿಸಲಾಗಿದೆ. ಇದು 20 ನೇ ಶತಮಾನದ ಅಪರೂಪದ ನಾಣ್ಯಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಲಾಗುತ್ತಿದೆ. ಇದು ಅಮೆರಿಕನ್ ಡಿಮ್ ನಾಣ್ಯ ಎಂದು ಹರಾಜು ಹಾಕಿರುವ ಏಜೆನ್ಸಿ ಹೇಳಿದೆ. ಈ ನಾಣ್ಯವನ್ನು 1975 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮಿಂಟ್ ತಯಾರಿಸಿದೆ.
ಯುಎಸ್ ಅಧ್ಯಕ್ಷರ ಫೋಟೋವನ್ನು ಮುದ್ರಿಸಲಾಗಿದೆ: ನೀವು ಈಗಾಗಲೇ ನೋಡಿರುವ ಚಿತ್ರದಲ್ಲಿರುವಂತೆ, ಇದರಲ್ಲಿ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಫೋಟೋ ಇದೆ. ಇದರ ಹೊರತಾಗಿ ಪ್ರತಿ ನಾಣ್ಯದ ಮೇಲೆ ಮಾಡಲಾಗುವ 'ಎಸ್' ಚಿಹ್ನೆಯನ್ನು ಈ ನಾಣ್ಯದಲ್ಲಿ ಮಾಡಲಾಗಿಲ್ಲ. ಅಮರಿಕನ್ ಡಿಮ್‌ನ ಈ ನಾಣ್ಯದ ಮೇಲೆ ಎಸ್ ಚಿಹ್ನೆ ಇರದ ಎರಡು ನಾಣ್ಯ ಮಾತ್ರವೇ ಪ್ರಿಂಟ್ ಆಗಿದೆ. ಅದರಲ್ಲಿ ಒಂದು ಈ ನಾಣ್ಯ. ಹಾಗಾಗಿ ಇದು ಅತ್ಯಂತ ಅಪರೂಪದ ನಾಣ್ಯ ಎಂದು ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ.
ಈ ನಾಣ್ಯಕ್ಕಾಗಿ ಆನ್‌ಲೈನ್‌ನಲ್ಲಿ ಬಿಡ್ಡಿಂಗ್: ಈ ಅಪರೂಪದ ನಾಣ್ಯವನ್ನು ಗ್ರೇಟ್ ಕಲೆಕ್ಷನ್ಸ್ ಹೆಸರಿನ ಹರಾಜು ಸಂಸ್ಥೆ ಆನ್‌ಲೈನ್‌ನಲ್ಲಿ ಹರಾಜು ಮಾಡಿದೆ. ಈ ಕುರಿತು ಕ್ಯಾಲಿಫೋರ್ನಿಯಾ ಗ್ರೇಟ್ ಕಲೆಕ್ಷನ್ಸ್ ನ ಅಧ್ಯಕ್ಷ ಇಯಾನ್ ರಸೆಲ್ ಮಾತನಾಡಿ, ಈ ನಾಣ್ಯದ ಹರಾಜಿನ ಯಶಸ್ಸಿನಿಂದ ತುಂಬಾ ಸಂತೋಷವಾಗಿದ್ದು, 4.25 ಕೋಟಿ ರೂ.ಗೆ ಹರಾಜಾಗಿದೆ ಎಂದು ತಿಳಿಸಿದ್ದಾರೆ.
'ನನ್ನ ಆಲೋಚನೆಗೆ ತಕ್ಕಂತ ಪಾರ್ಟ್ನರ್ ಸಿಕ್ಕೇ ಸಿಗುತ್ತಾರೆ..' ಎರಡನೇ ಮದುವೆ ಬಗ್ಗೆ ಮಾತನಾಡಿದ ಸೋನು ಗೌಡ
ಮೂವರು ಸಹೋದರಿಯರ ಬಳಿ ಇದ್ದ ನಾಣ್ಯ: ಹರಾಜಿನ ಮೊದಲು, ಈ ನಾಣ್ಯವು ಓಹಿಯೋದ ಮೂವರು ಸಹೋದರಿಯರ ಬಳಿ ಇತ್ತು. ಆದರೆ, ಅವರು ತಮ್ಮ ಗುರುತನ್ನು ಇಲ್ಲಿಯವರೆಗೂ ಗೌಪ್ಯವಾಗಿಟ್ಟಿದ್ದಾರೆ. ಆದರೆ ಹರಾಜು ಕಂಪನಿಯೊಂದಿಗೆ ಮಾತನಾಡುವಾಗ, ಅವರು ತಮ್ಮ ಸಹೋದರನ ಮರಣದ ನಂತರ ಈ ನಾಣ್ಯವನ್ನು ಪಡೆದಿದ್ದಾಗಿ ತಿಳಿಸಿದ್ದಾರೆ, ಅವರ ಸಹೋದರ ಮತ್ತು ತಾಯಿ ಅಂತಹ ಎರಡು ನಾಣ್ಯಗಳನ್ನು ಹೊಂದಿದ್ದರು, ಇದನ್ನು ಅವರು ಆನುವಂಶಿಕವಾಗಿ ಪಡೆದಿದ್ದರು. ಆದರೆ 1978ರಲ್ಲಿ ಈ ಒಂದು ನಾಣ್ಯವನ್ನು ಕುಟುಂಬದವರು 15 ಲಕ್ಷ ರೂ.ಗೆ ಮಾರಾಟ ಮಾಡಿದ್ದರು.
ಬೆಂಗಳೂರಿಗೆ ಬೊಂಬಾಟ್ ನ್ಯೂಸ್, ಬ್ಯಾಟರಿ ಸೆಲ್ ಉತ್ಪಾದನೆಗೆ ಇಳಿದ MGL, ರಾಜಧಾನಿಯಲ್ಲಿ ಗಿಗಾ ಫ್ಯಾಕ್ಟರಿ ನಿರ್ಮಾಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ