ಸಿಎಎ ಮತ ಪ್ರಕ್ರಿಯೆ ಮುಂದೂಡಿದ EU ಸಂಸತ್ತು: ಯಾರ ಗೆಲುವಿದು?

By Suvarna NewsFirst Published Jan 30, 2020, 12:02 PM IST
Highlights

ಯುರೋಪಿಯನ್ ಸಂಸತ್‌ನಲ್ಲಿ ವಿರೋಧಿ ನಿರ್ಣಯ| ಮತ ಪ್ರಕ್ರಿಯೆ ಮುಂದೂಡಿದ ಯೂರೋಪಿಯನ್ ಯೂನಿಯನ್ ಸಂಸತ್ತು| ಸಿಎಎ ವಿರುದ್ಧ ಯುರೋಪಿಯನ್ ಸಂಸತ್ ಸದಸ್ಯರು ಮಂಡಿಸಿದ್ದ ನಿರ್ಣಯ| ಮುಂದಿನ ಮಾರ್ಚ್‌ನ ಮಹಾಧಿವೇಶನದಲ್ಲಿ ಮತ ಪ್ರಕ್ರಿಯೆಗೆ ಚಾಲನೆ ನೀಡಲು ಸಂಸತ್ತು ನಿರ್ಣಯ|  ಸಿಎಎ ವಿರೋಧಿ ನಿರ್ಣಯದ ಮೇಲಿನ ಚರ್ಚೆ ಮುಂದುವರೆಸಲು ತೀರ್ಮಾನ| ಭಾರತ ಸರ್ಕಾರ ನಡೆಸಿದ ರಾಜತಾಂತ್ರಿಕ ಪ್ರಯತ್ನಕ್ಕೆ ಸಂದ ಜಯ|

ನವದೆಹಲಿ(ಜ.30): ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಯುರೋಪಿಯನ್ ಸಂಸತ್ ಸದಸ್ಯರು ಮಂಡಿಸಿದ್ದ ನಿರ್ಣಯದ ಮೇಲಿನ ಮತ ಪ್ರಕ್ರಿಯೆಯನ್ನು ಸಂಸತ್ತು ಮುಂದೂಡಿದೆ.

ಸಿಎಎ ವಿರೋಧಿ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದ್ದು, ಆದರೆ ನಿರ್ಣಯದ ಮೇಲಿನ ಮತ ಪ್ರಕ್ರಿಯೆಯನ್ನು ಮುಂದಿನ ಮಾರ್ಚ್‌ಗೆ  ಮುಂದೂಡಲಾಗಿದೆ ಯೂರೋಪಿಯನ್ ಯೂನಿಯನ್ ಸಂಸತ್ತು ಸ್ಪಷ್ಟಪಡಿಸಿದೆ.

Government Sources: There will be no voting on the Europeon Union resolution on Citizenship Amendment Act (CAA) tomorrow. Friends of India prevailed over the Friends of Pakistan in the European Parliament today.

— ANI (@ANI)

ಮುಂದಿನ ಮಾರ್ಚ್‌ನಲ್ಲಿ ಯೂರೋಪಿಯನ್ ಸಂಸತ್ತಿನ ಮಹಾಧಿವೇಶನ ನಡೆಯಲಿದ್ದು, ಈ ವೇಳೆ ಸಿಎಎ ಗೆ ಸಂಬಂಧಿಸಿದ ಮತ ಪ್ರಕ್ರಿಯೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗದೆ.

ಭಾರತಕ್ಕೆ ಫುಲ್ ಸಪೋರ್ಟ್: ಐರೋಪ್ಯ ಒಕ್ಕೂಟ ನಿಯೋಗದ ಘೋಷಣೆ!

ಅಲ್ಲಿಯವೆಗೂ ಸಿಎಎ ವಿರೋಧಿ ನಿರ್ಣಯದ ಮೇಲಿನ ಚರ್ಚೆ ನಿಗದಿಯಂತೆಯೇ ಮುಂದುವರೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಯೂರೋಪಿಯನ್ ಯೂನಿಯನ್ ಸಂಸತ್ತು ಮಾಹಿತಿ ನೀಡಿದೆ. 

Government Sources: CAA is a matter internal to India and has been adopted through a due process through democratic means. We expect that our perspectives in this matter will be understood by all objective and fair-minded Members of the European Parliament. https://t.co/ThTDHNcNcV

— ANI (@ANI)

ಯುರೋಪಿಯನ್ ಸಂಸತ್‌ನಲ್ಲಿ ಸಿಎಎ ಸಂಬಂಧ ಮತ ಎಣಿಕೆ ನಡೆಯದಂತೆ ಭಾರತ ಸರ್ಕಾರ ನಡೆಸಿದ ಪ್ರಯತ್ನಕ್ಕೆ ಸದ್ಯ ಜಯ ಲಭಿಸಿದ್ದು,  ಆದರೂ ನಿರ್ಣಯದ ಮೇಲಿನ ಚರ್ಚೆ ಮುಂದುವರೆದಿರುವುದು ಕುತೂಹಲ ಮೂಡಿಸಿದೆ.

click me!